Advertisements

ನಿದ್ರೆಗೆ ಜಾರಿದ್ರೆ ಈತ 300 ದಿನ ಎದ್ದೇಳೋದೆ ಇಲ್ವಂತೆ.. ಇನ್ನೂ ಉಳಿದಿರೋ ದಿನಗಳಲ್ಲಿ ಈತ ಏನ್ ಮಾಡ್ತಾನೆ ಗೊತ್ತಾ?

Kannada Mahiti

ಮನುಷ್ಯನಿಗೆ ಎಂತೆಂತಹ ಖಾಯಿಲೆಗಳಿರುತ್ತಾವೆ ಅಂದ್ರೆ ಒಮ್ಮೊಮ್ಮೆ ಹೀಗೂ ಇರುತ್ತಾ ಅಂತ ಹುಬ್ಬೇರಸುವ ಮಟ್ಟಿಗೆ ಇರುತ್ತೆ, ಹೌದು ಒತ್ತಡದ ಬದುಕಿನ ಪ್ರಭಾವಕ್ಕೋ, ಅಥವಾ ಆರೋಗ್ಯದಲ್ಲಿ ಆಗುವ ಏರುಪೇರಿನ ಕಾರಣವೋ ಒಟ್ಟಾರೆ ವಿಚಿತ್ರ ಖಾ’ಯಿಲೆಗಳಿಗಂತು ಈ ಕಲಿಯುಗ ಸಾಕ್ಷಿಯಾಗಿರುವುದು ಸುಳ್ಳಲ್ಲ.. ಅಂತಹದ್ದೆ ಒಂದು ವಿಚಿತ್ರವಾದ ಕಾ’ಯಿ’ಲೆಯನ್ನು ಇವತ್ತು ನಾವು ನಿಮಗೆ ಹೇಳ್ತಾಯಿದ್ದೀವಿ. ಹೌದು ನಾವು ಹೇಳ್ತಾಯಿರುವ ಈ ಕತೆಯಲ್ಲಿ ಬರುವ ಪುಲ್ಕರಾಮ್ ಎಂಬ ವ್ಯಕ್ತಿ ವರುಷದ 300 ದಿನ ಮಲಗೇಯಿರುತ್ತಾನಂತೆ. ಎಂತಹ ವಿಚಿತ್ರ ನೋಡಿ ತಿಂಗಳಿಗೂ ಹೆಚ್ಚೆಂದರೇ 5 ದಿನವಷ್ಟೇ ಈತ ಎಚ್ಚರದಿಂದಿರುತ್ತಾನಂತೆ, ನಂಬಲು ಅಸಾಧ್ಯವಾದ್ರೂ ಸಹ ನಂಬಲೇಬೇಕಾದ ಸತ್ಯ ಸಂಗತಿಯಿದು..

[widget id=”custom_html-3″]

Advertisements

ಅಂದಹಾಗೇ ಹಿಂದೆಲ್ಲ ಪುರಾಣಗಳಲ್ಲಿ ಕುಂಭಕರ್ಣ ವರ್ಷದ 6 ತಿಂಗಳು ಮಲಗೇ ಇರುತಿದ್ದನಂತೆ, ಹಾಗಾಗಿ ಯಾರಾದ್ರೂ ಜಾಸ್ತಿ ನಿದ್ರೆ ಮಾಡಿದ್ರೆ ಅವರನ್ನು ಕುಂಭಕರ್ಣನಿಗೆ ಹೋಲಿಸುವುದು ಹಿಂದನಿಂದಲೂ ಎಲ್ಲರೂ ಮಾಡ್ತಾರೆ, ಆದ್ರೆ ಈ ಮಾಡರ್ನ್ ಕುಂಭಕರ್ಣ, ನಿಜವಾದ ಕುಂಭಕರ್ಣನಿಗೆ ಪಕ್ಕಾ ಕಾಂಪಿಟೇಟರ್ ಎಂಬುವುದರಲ್ಲಿ ಅನುಮಾನವಿಲ್ಲ, ಅಷ್ಟಕ್ಕೂ ಯಾರೀತ, ಈತನ ಕತೆ ಏನು ಯಾಕಿಷ್ಟು ನಿದೆ ಮಾಡ್ತಾನೆ ಹೇಳ್ತೀವಿ ಕೇಳಿ. ಮೂಲತಃ ರಾಜಸ್ಥಾನದನಾಗೋರ್ ಜಿಲ್ಲೆಯವರಾದ ಪುಲ್ಕರಾಮ್ ಅವರು ಬೇಕು ಅಂತ ಸುಖಾಸುಮ್ಮನೆ ಸಮಯ ಕಳೆಯಲು ನಿದ್ದೆ ಮಾಡಲ್ಲ, ಬದಲಿಗೆ ಅವರಿಗೆ ನಿದ್ದೆಗೆ ಜಾರುವ ಕಾ’ಯಿಲೆಯಿದೆಯಂತೆ..

[widget id=”custom_html-3″]

ಅಯಾಕ್ಸಿನ್ ಹೈಪರ್ ಸೋಮಿನಿಯಾ ಎಂಬ ಕಾ’ಯಿಲೆಯಿಂದ ಪುಲ್ಕರಾಮ್ ಅವರು ಬ’ಳಲುತ್ತಿದ್ದು, ಇದು ಮೆದುಳಿನಲ್ಲಿ ಒಂದು ಪ್ರೋಟಿನ್ ಅಂಶ ಕೊ’ರ’ತೆಯಾಗಿ ಬರುತ್ತದಂತೆ, ಸಾಮಾನ್ಯವಾಗಿ ಯಾರಾದ್ರೂ ಬಂದ್ರೂ ಎಚ್ಚರಿಸದೇ ಹೋದರೆ ತಿಂಗಳೀಡಿ ಮಲಗುವ ಸಾಧ್ಯತೆ ಇದೆಯಂತೆ. ಇನ್ನು ಈತನ ನಿತ್ಯಕರ್ಮಗಳನ್ನು ಮನೆಯವರೇ ಮಾಡಿಸುತ್ತಾರಂತೆ. ಜೀವನಕ್ಕಾಗಿ ಈತ ಅಂಗಡಿ ಹಾಕಿಕೊಂಡಿದ್ದು ತಿಂಗಳಲ್ಲಿ ಐದು ದಿನ ಅಂಗಡಿಯಲ್ಲಿರುತ್ತಾನಂತೆ. ಎಂತಹ ವಿಚಿತ್ರ ನೋಡಿ, ಈ ಮಾಡರ್ನ್ ಕುಂ’ಭಕರ್ಣನ ಕತೆ ಕೇಳಿದ್ರೆ ನಿಜಕ್ಕೂ ಆರೋಗ್ಯವೇ ಭಾಗ್ಯ ಅನ್ನೋ ಮಾತು ನೆನಪಾಗೇ ಆಗುತ್ತೆ ಅಂತಿದ್ದಾರೆ ನೆಟ್ಟಿಗರು..