Advertisements

ಪುನೀತ್ ಅವರ ಆ ಒಂದು ಕನಸನ್ನು ಈಡೇರಿಸಲು ಮಹತ್ವದ ನಿರ್ಧಾರ ತೆಗೆದುಕೊಂಡ ಅಶ್ವಿನಿ ಪುನೀತ್! ಅದೇನು ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ಅಪ್ಪು ಇ’ನ್ನಿ’ಲ್ಲ ಎಂಬ ಸುದ್ದಿ ಬಂದು 8 ದಿನಗಳು ಕಳೆದಿವೆ.. ಆದರೆ ಅಭಿಮಾನಿಗಳಲ್ಲಿ ಮತ್ತು ಕುಟುಂಬದವರದಲ್ಲಿ ಇಂದಿಗೂ ಆ ದುಃಖ ಕಡಿಮೆಯಾಗಿಲ್ಲಾ.. ಈ ರೀತಿ ಇರುವ ಸಮಯದಲ್ಲಿ ಅಪ್ಪು ಅವರ ಕುಟುಂಬದಿಂದ ಏನಾದ್ರು ಒಂದು ಸುದ್ದಿ ಸಿಕ್ಕಿದ್ರೆ ಅದು ಅಭಿಮಾನಿಗಳಿಗೆ ಆಶಾದಾಯಕವಾಗಿರುತ್ತದೆ.. ನಮಗೆಲ್ಲಾ ಗೊತ್ತಿರುವಾಗೆ ಅಪ್ಪು ಅವರು ಚಿತ್ರರಂಗದ ಬಗ್ಗೆ ದೊಡ್ಡ ದೊಡ್ಡ ಕನಸನ್ನು ಇಟ್ಟುಕೊಂಡಿದ್ರು‌. ಪಿಆರ್ ಕೆ ಪ್ರೊಡಕ್ಷನ್ ಎನ್ನುವ ಸಂಸ್ಥೆ ಆರಂಭಿಸಿ ಅದರ ಮೂಲಕ ಹೊಸಬರಿಗೆ ಅವಕಾಶ ಕೊಡಬೇಕು ಅಂದುಕೊಂಡಿದ್ರು.. ಅಪ್ಪು ಅವರು ಕೆಲವು ಕಥೆಗಳನ್ನ ಕೇಳಿ ಇಷ್ಟ ಪಟ್ಟು ಅವುಗಳನ್ನು ಸಿನಿಮಾ ಮಾಡಬೇಕೆಂದು ಕನಸನ್ನು ಕಂಡಿದ್ರು..

[widget id=”custom_html-3″]

Advertisements

ಹೊಸ ಸಿನಿಮಾ ಘೊಷಣೆಯನ್ನ ಕೆಲ ದಿನಗಳಲ್ಲೇ ಮಾಡಬೇಕಿತ್ತು.. ಆದರೆ ಅಪ್ಪು ಅವರಿಗೆ ದಿಡೀರ್ ಎಂದು ಈ ರೀತಿಯಾದ ಕಾರಣ ನಡೆಯಬೇಕಿದ್ದ ವಿಚಾರಗಳು ನಡೆದಿಲ್ಲಾ. ದೊಡ್ಮನೆಯಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಅಪ್ಪು ಅವರು ಕಂಡಿದ್ದ ಕನಸುಗಳನ್ನ ನೆರವೇರಿಸಲು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ನಿರ್ಧಾರ ಮಾಡಿದ್ದಾರೆ.. ಇನ್ಮುಂದೆ ಪಿಆರ್ ಕೆ ಪ್ರೊಡಕ್ಷನ್ಸ್ ಸಂಸ್ಥೆಯ ಮುಂದಾಳತ್ವ ವಹಿಸಲಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲೇ ಅಪ್ಪು ಅವರ ಹೊಸ ಕನಸಿನ ಸಿನಿಮಾ ಬಗ್ಗೆ ಹೇಳ್ತಾರೆ ಎನ್ನುವ ಮಾಹಿತಿ ಸಿಕ್ಕಿದೆ.. ಅಪ್ಪು ಅವರು ಚಾಮರಾಜನಗರದ ಸುತ್ತಮುತ್ತ ಚಿತ್ರೀಕರಣ ಮಾಡಿ ಗಂಧದಗುಡಿ ಹೆಸರಿನ ಇಂದು ಡಾಕ್ಯುಮೆಂಟರಿಯನ್ನು ಸಹ ಮಾಡಿದ್ರು.

[widget id=”custom_html-3″]

ಈ ಎಲ್ಲದರ ಜವಾಬ್ದಾರಿಯನ್ನ ಅಶ್ವಿನಿ ಅವರೇ ವಹಿಸಿಕೊಂಡು ಹೋಗ್ತಾರೆ ಎನ್ನಲಾಗ್ತಿದೆ.. ಇಲ್ಲಿಯವರೆಗೂ ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಸಂಸ್ಥೆಯಿಂದ ಸಾಕಷ್ಟು ಹೊಸಬರಿಗೆ ಅವಕಾಶ ಕೊಟ್ಟಿದ್ದಾರೆ.. ಇದಲ್ಲದೇ ವಿಶೇಷವಾದ ಕಥೆ ಇರುವಂತಹ ಸಿನಿಮಾಗಳನ್ನ ಪಿಆರ್ ಕೆ ನಿರ್ಮಾಣ ಸಂಸ್ಥೆಯ ಮೂಲಕ ಅಪ್ಪು ಅವರು ನಿರ್ಮಾಣ ಮಾಡಿದ್ರು. ಇನ್ನು ಮುಂದೆ ಈ ಕೆಲಸವನ್ನ ಪತ್ನಿ ಅಶ್ವಿನಿಯವರು ಮುಂದುವರೆಸಲಿದ್ದಾರೆ ಅಂಥ ಮಾಹಿತಿ ತಿಳಿದುಬಂದಿದೆ..