Advertisements

ತಮ್ಮ ಹೊಸ ಸಿನಿಮಾ ಬಿಡುಗಡೆಗೂ ಮುನ್ನ ಪುನಿತ್ ರಾಜ್ ಕುಮಾರ್ ಭೇಟಿ ಕೊಟ್ಟಿದ್ದು ಎಲ್ಲಿಗೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅವರ ಹೊಸ ಸಿನಿಮಾ ಯುವರತ್ನ ಅತಿ ಶೀಘ್ರದಲ್ಲಿ ತೆರೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಈ ಸಿನಿಮಾಗಾಗಿ ಅಭಿಮಾನಿಗಳು ಹಾಗು ಸಿನಿ ಪ್ರೇಮಿಗಳು ಸಾಕಷ್ಟು ನಿರೀಕ್ಷೆಯಲ್ಲಿ ಇದ್ದಾರೆ.. ಯುವರತ್ನ ಸಿನಿಮಾ ಟ್ರೈಲರ್, ಟೀಸರ್, ಸಿನಿಮಾದ ಮೂರು ಹಾಡುಗಳು ಕೂಡ ಬಿಡುಗಡೆಯಾಗಿ ಈಗಾಗಲೇ ಸಾಕಷ್ಟು ಸದ್ದು ಮಾಡಿವೆ. ಈ ಎಲ್ಲವೂ ಕೂಡ ಸಿನಿಮಾ ಬಗ್ಗೆ ಇನ್ನಷ್ಟು, ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ.. ಬಿಡುಗಡೆ ದಿನಕ್ಕಾಗಿ ಕಾಯುವಂತೆ ಮಾಡಿವೆ. ಅಭಿಮಾನಿಗಳು ಸಿನಿಮಾ ನೋಡಲು ಕಾತುರರಾಗಿದ್ದಾರೆ..

Advertisements

ಈಗ ಸಿನಿಮಾಗಳ ಶೂಟಿಂಗ್ ನಂತರ ಸ್ವಲ್ಪ ಬಿಡುವು ಮಾಡಿಕೊಂಡ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅವರು ಪುಣ್ಯ ಕ್ಷೇತ್ರಗಳಿಗೆ ಬೇಟಿ ಕೊಟ್ಟಿದ್ದಾರೆ. ಈ ವಿಷಯವನ್ನು ಸಿನಿಮಾ ನಿರ್ದೇಶಕ ಸಂತೋಷ್ ಆನಂದ್ ರಾವ್ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕುವ ಮೂಲಕ ಎಲ್ಲರೊಡನೆ ಶೇರ್ ಮಾಡಿಕೊಂಡಿದ್ದಾರೆ.. ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್, ನಿರ್ಮಾಪಕ ವಿಜಯ್ ಕಿರಣ್, ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಹಾಗು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಶಿರಡಿ ಸಾಯಿಬಾಬಾ ಹಾಗು ಕೊಲ್ಲಾಪುರದ ಲಕ್ಷ್ಮೀ ದೇವಿ ಅನುಗ್ರಹ ಪಡೆದಿರುವ ವಿಷಯವನ್ನು ಹಂಚಿಕೊಂಡಿದ್ದಾರೆ..

ಸಿನಿಮಾ ಯಶಸ್ಸಿಗಾಗಿ ಅವರು ಪ್ರಾರ್ಥನೆ ಮಾಡಿದ್ದಾರೆ. ಸಂತೋಷ್ ಆನಂದ್ ರಾಮ್ ಅವರು ತಮ್ಮ ಪೋಸ್ಟ್ ನಲ್ಲಿ ಶಿರಡಿಯಲ್ಲಿ ಸದ್ಗುರು ಸಾಯಿಬಾಬಾ ಹಾಗೂ ಕೊಲ್ಲಾಪುರದ ತಾಯಿ ಲಕ್ಷ್ಮೀ ಆಶಿರ್ವಾದ ಪಡೆದೆವು. ಪವರ್ ಸ್ಟಾರ್ ಹಾಗು ವಿಜಯ್ ಸರ್ ಅವರ ಜೊತೆಯಲ್ಲಿ ಯುವರತ್ನ ಬಿಡುಗಡೆ ಪ್ರಯುಕ್ತ ಬೇಟಿಯಾದ ಕ್ಷಣ ಎಂದು ಬರೆದುಕೊಂಡು ಸಂತೋಷವನ್ನು ಎಲ್ಲರೊಡನೆ ಹಂಚಿಕೊಂಡಿದ್ದಾರೆ.. ಸಂತೋಷ್ ಅವರು ಶೇರ್ ಮಾಡಿಕೊಂಡಿರುವ ಪೋಸ್ಟ್ ಗೆ ಅನೇಕರು ಮೆಚ್ಚುಗೆ ನೀಡುತ್ತ ಪ್ರತಿಕ್ರಿಯೆಗಳ ಮೂಲಕ  ಶುಭವನ್ನು ಆರೈಸಿದ್ದಾರೆ.