Advertisements

ಬೆಳ್ಳಂಬೆಳಿಗ್ಗೆ ಸರ್ಪ್ರೈಸ್. ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ದರ್ಶನ್ ಕೊಟ್ಟ ಉಡುಗೊರೆ ಏನು ಗೊತ್ತಾ?

Cinema

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅವರ 45ನೇ ಜನ್ಮದಿನದಂದು ಕುಟುಂಬದವರು ಆಪ್ತರು ಸ್ನೇಹಿತರು ಎಲ್ಲರೂ ಶುಭ ಹಾರೈಸಿದ್ದಾರೆ.

Advertisements

ಪ್ರತಿ ವರ್ಷವೂ ಪುನಿತ್ ಅವರ ಹುಟ್ಟು ಹಬ್ಬದ ದಿನದಂದು ಅವರ ಮನೆಯ ಅತ್ತಿರ ಅಭಿಮಾನಿಗಳ ಜಾತ್ರೆಯೇ ಇರುತಿತ್ತು. ಆದರೆ ಇದೀಗ ಎಲ್ಲೆಡೆ ಕೊರೊನಾ ವೈರಸ್ ಬೀತಿ ಎಚ್ಚಾಗಿರುವ ಕಾರಣ ಅಭಿಮಾನಿಗಳ ಆರೋಗ್ಯ ದೃಷ್ಟಿಯಿಂದ ಹಾಗೂ ಸಾಮಾಜಿಕ ಜವಾಬ್ದಾರಿಯಿಂದ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಂಡು ಈ ಬಾರಿಯ ಹುಟ್ಟುಹಬ್ಬದ ಆಚರಣೆಯನ್ನು ರದ್ದು ಮಾಡಲಾಗಿದೆ.

ಇನ್ನು ಇದೀಗ ಪುನಿತ್ ಗೆ ಸ್ನೇಹಿತರು ಹಾಗೂ ಕುಟುಂಬದವರು ಪೋನ್ ಮೂಲಕ ಹಾರೈಸಿದರೆ. ಅಭಿಮಾನಿಗಳೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಇನ್ನೂ ಸ್ಯಾಂಡಲ್ ವುಡ್ ನ ಯಜಮಾನ, ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಪುನಿತ್ ರಾಜ್ ಕುಮಾರ್ ಅವರಿಗೆ ಬೆಳ್ಳಂಬೆಳಿಗ್ಗೆ ಸರ್ಪ್ರೈಸ್ ನೀಡಿದ್ದಾರೆ. ಹೌದು ಕೆಲವು ಕೆಟ್ಟ ಮನಸ್ಸಿನವರು ಸುಮ್ಮನೆ ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಪೋಸ್ಟ್ ಗಳನ್ನು ಮಾಡಿ ಸ್ಟಾರ್ ನಟರ ನಡುವೆ ಅಂತರ ಸೃಷ್ಟಿಸಲು ಪ್ರಯತ್ನಿಸಲು ನೋಡುತ್ತಿರುತ್ತಾರೆ ಆದರೆ ಇತ್ತ ನಮ್ಮ ಹೀರೋಗಳು ಮಾತ್ರ ಇದಾವುದಕ್ಕೂ ತಲೆ ಕೆಡಿಸಕೊಳ್ಳದೆ ತಮ್ಮ ನಡುವೆ ಇರುವ ಸ್ನೇಹವನ್ನು ಈ ರೀತಿ ಹುಟ್ಟು ಹಬ್ಬದ ದಿನಗಳಲ್ಲಿ ಹಾರೈಸುವ ಮೂಲಕ ಬಲಪಡಿಸಿ ಕೊಳ್ಳುತ್ತಿದ್ದಾರೆ.

ಹೌದು ಬೆಳ್ಳಂಬೆಳಿಗ್ಗೆಯೇ ಪುನಿತ್ ರಾಜ್ ಕುಮಾರ್ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಾಲ್ ಮಾಡಿ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಎಲ್ಲಾ ಸಾಮಾಜಿಕ ಜಾಲತಾಣಗಳ ಅಕೌಂಟ್ ಗಳಲ್ಲಿ. ಪೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ನಲ್ಲಿ ಪುನಿತ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿ ಅಚ್ಚ ಕನ್ನಡದಲ್ಲಿ “ಹುಟ್ಟು ಹಬ್ಬದ ಶುಭಾಶಯಗಳು” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಇಲ್ಲಸಲ್ಲದ ವಿಚಾರಗಳನ್ನ ಹುಟ್ಟು ಹಾಕುವ ಕೆಲವರಿಗೆ ಸರಿಯಾಗಿ ಪಾಠ ಕಲಿಸಿ ತಮ್ಮ ನಡುವಿನ ಒಳ್ಳೆಯ ಸ್ನೇಹವನ್ನು ತೋರುವ ಮೂಲಕ ಅಭಿಮಾನಿಗಳಿಗೆ ನಿಜಕ್ಕೂ ಒಳ್ಳೆಯ ಸಂದೇಶವನ್ನು ನೀಡಿದ್ದಾರೆ.

ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಿಳಿಸಿರುವ ಶುಭಾಶಯದ ಪೋಸ್ಟ್ ನೋಡಿ ಡಿ ಬಾಸ್ ಅಭಿಮಾನಿಗಳು ಕೂಡ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುವ ಪೋಸ್ಟ್ ಗಳನ್ನು ಹಾಕುತಿದ್ದಾರೆ. ಇನ್ನಾದರೂ ಕೂಡ ಇಲ್ಲ ಸಲ್ಲದ ಪೋಸ್ಟ್ ಗಳನ್ನು ಹಾಕುವ ಕೆಲವು ಕೆಟ್ಟ ಮನಸ್ಥಿತಿಗಳು ಬದಲಾಗಲಿ ನಮ್ಮ ಕನ್ನಡ, ಸಿನಿಮಾ, ನಟರನ್ನು ಗೌರವಿಸಿ ಎಲ್ಲರೂ ನಮ್ಮವರು ಅನ್ನೋ ಭಾವನೆ ಇರಲಿ.