Advertisements

ಪುನೀತ್ ಮನೆಗೆ ಭೇಟಿ ನೀಡಿ ಅಪ್ಪು ಫೋಟೋ ಮುಂದೆ ಭಾವುಕರಾದ ದರ್ಶನ್.. ಗಳಗಳನೆ ಕಣ್ಣೀರಿಟ್ಟ ಅಪ್ಪು ಪತ್ನಿ ಅಶ್ವಿನಿ..

Cinema

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಗು ಇನ್ನೂ ನೆನಪು ಮಾತ್ರ ಆ ನಗುವನ್ನ ಇನ್ನು ಮುಂದೆ ನೋಡೋದಕ್ಕೆ ಸಿಗಲ್ಲ ಅನ್ನೋದು ಇಡೀ ಕರ್ನಾಟಕದ ಜನರಿಗೆ ಇದೆ.. ಅಭಿಮಾನಿಗಳು ಮತ್ತು ರಾಜ್ಯದ ಜನರಿಗೂ ಸಹ ಈ ನೋವನ್ನು ಅರಗಿಸಿಕೊಳ್ಳಲು ಇನ್ನೂ ಬಹಳಷ್ಟು ಸಮಯ ಬೇಕಾಗಿದೆ. ಅಭಿಮಾನಿಗಳಿಗೆ ಈ ರೀತಿ ಆಗಿದೆ ಅಂದ್ರೆ ಇನ್ನೂ ಅಪ್ಪು ಅವರ ಕುಟುಂಬಕ್ಕೆ ಮತ್ತು ಆಪ್ತರ ಬಳಗಕ್ಕೆ ಇನ್ನೆಷ್ಟು ನೋವು ಆಗಿದೆ ಅಂಥ ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲಾ.. ಕನ್ನಡ ಅಭಿಮಾನಿಗಳು ಹಾಗು ಕನ್ನಡ ಸ್ಟಾರ್ ನಟ ನಟಿಯರು, ತೆಲುಗು ನಟರು, ತಮಿಳು ನಟರು ಸಹ ಬಂದು ಅಪ್ಪುವಿನ ಸ್ಥಿತಿ ನೋಡಿ ಕಣ್ಣೀರಿಟ್ಟು ಕೈ ಮುಗಿದಿದ್ದರು..

[widget id=”custom_html-3″]

Advertisements

ಇನ್ನೂ ಅಪ್ಪು ಇನ್ನಿಲ್ಲ ಎಂಬ ಸುದ್ದಿ ಕೇಳಿದ ನಟ ದರ್ಶನ್ ಅವರು ಆಸ್ಪತ್ರೆಗೆ ಬಂದು ಅಪ್ಪು ಅವರನ್ನ ನೋಡಿಕೊಂಡು ಹೋದರು. ಇನ್ನೂ ಇಂದು ದರ್ಶನ್ ಅಪ್ಪು ಅವರ ಮನೆಗೆ ಬೇಟಿ ಮಾಡಿದ್ದಾರೆ.. ನಂತರ ಡಿ ಬಾಸ್ ದರ್ಶನ್ ಅವರು ಅಶ್ವಿನಿ ಪುನೀತ್ ರಾಜ್ ಕುಮಾರ್, ಶಿವಣ್ಣ, ರಾಘಣ್ಣ, ಮಗಳು ಹಾಗು ಇಡೀ ಕುಟುಂಬಕ್ಕೆ ಸಾಂತ್ವಾನ ಹೇಳಿ ದೈರ್ಯ ತುಂಬಿ ಬಂದಿದ್ದಾರೆ.. ಮನೆಯಲ್ಲಿ ಅಪ್ಪು ಅವರ ಪೋಟೊ ಮುಂದೆ ನಿಂತು ಎರಡು ನಿಮಿಷ ಡಿ ಬಾಸ್ ದರ್ಶನ್ ಅವರು ಭಾವುಕರಾಗಿದ್ದಾರೆ. ಇದಾದ ನಂತರ ಅಪ್ಪು ಅವರ ಸ್ಮಾರಕಕ್ಕೆ ಬೇಟಿ ಕೊಟ್ಟ ಡಿ ಬಾಸ್ ದರ್ಶನ್ ಅವರು ಅಲ್ಲಿ ಅಪ್ಪು ಅವರ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದಾರೆ..

[widget id=”custom_html-3″]

ಪುನೀತ್ ರಾಜ್‍ಕುಮಾರ್ ಅವರು ಮತ್ತು ದರ್ಶನ್ ಅವರು ಒಂದೇ ಸಮಯದಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಂತವರು‌. ದೊಡ್ಮನೆ ಅವರ ಮೇಲೆ ದರ್ಶನ್ ಅವರಿಗೆ ಬಹಳ ಗೌರವವಿದೆ. ಹಲವು ಕಾರ್ಯಕ್ರಮಗಳಲ್ಲಿ ಅಣ್ಣಾವ್ರ ಕುಟುಂಬದ ಬಗ್ಗೆ ದರ್ಶನ್ ಅವರು ಮಾತನಾಡಿದ್ದಾರೆ.. ಅಪ್ಪು ಮತ್ತು ದರ್ಶನ್ ಅವರು ಒಳ್ಳೆಯ ಸ್ನೇಹಿತರಾಗಿದ್ದರು. ಹಲವು ವೇದಿಕೆಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ರು.. ಹುಟ್ಟು ಹಬ್ಬಗಳಿಗೆ ಇಬ್ಬರು ಟ್ವೀಟರ್ ನಲ್ಲಿ ವಿಶ್ ಮಾಡಿಕೊಳ್ತಿದ್ರು..