Advertisements

ಹೊರ ರಾಜ್ಯಗಳಲ್ಲಿ ಅಪ್ಪು ಪ್ರತಿಮೆಗೆ ಬಾರಿ ಬೇಡಿಕೆ! ಅಗಲು ರಾತ್ರಿ ಎನ್ನದೇ ಪ್ರತಿಮೆಗಳು ಮಾಡುತ್ತಿರುವ ಅಲ್ಲಿನ ಶಿಲ್ಪಿಗಳು ಹೇಳಿದ್ದೇನು ನೋಡಿ..

Cinema

ಪುನೀತ್ ಅಂದ್ರೆ ಹಾಗೇ ಮರೆಯಲಾಗದ ಮಾಣಿಕ್ಯ. ಮರೆಯುವ ಯೋಚನೆ ಸಹ ಮಾಡಲಾಗುವುದಿಲ್ಲ. ಪುನೀತ್ ಅಗಲಿದ ದಿನದಿಂದಲೂ ಸಹ ನಮ್ಮ ಮನೆಯ ಸದಸ್ಯ ಒಬ್ಬ ಹೋದ್ರೇನೋ ಅನ್ನೋ ಅಷ್ಟು ನೋವು. ದುಗುಡ ರಾಜ್ಯದ ಜನತೆಗೆ ಇದೆ. ಕೇವಲ ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶ ವಿದೇಶದಲ್ಲಿಯೂ ಪುನೀತ್ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಆದ್ರೆ ಏನ್ ಮಾಡಿದ್ರೂ ಪುನೀತ್ ವಾಪಸ್ ಬರ್ತಾರಾ? ಇಲ್ಲ ಈಗ ಅವರ ನೆನಪಷ್ಟೇ ನಮ್ಮೊಂದಿಗೆ.
ಸದ್ಯ ಈಗ ಅಪ್ಪುವಿನ ಬಗ್ಗೆ ಯಾಕೆ ಮಾತಾಡ್ತಾಯಿದ್ದೀವಿ ಅಂದ್ರೆ ಕಾರಣವಿದೆ. ಅಪ್ಪುವಿಗೆ ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ ಎಲ್ಲಾ ಕಡೆ ಫ್ಯಾನ್ಸ್ ಇದ್ದಾರೆ. ಈ ಹಿನ್ನಲೆ ಈಗ ಆಂದ್ರಪ್ರದೇಶದಲ್ಲಿ ಅಪ್ಪುವಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ಹೌದು. ನಮ್ಮ ರಾಜ್ಯದಲ್ಲೂ ಕೂಡ ಅಪ್ಪುವಿನ ಪ್ರತಿಮೆ ಮಾಡಿ ಶ್ರದ್ದಾಂಜಲಿ ಸಲ್ಲಿಸಿದ್ದನ್ನ ನೋಡಿದ್ದೇವೆ.

[widget id=”custom_html-5″]

Advertisements

ಸದ್ಯ ಈಗ ಆಂದ್ರಪ್ರದೇಶದಲ್ಲಿಯೂ ಸಹ ಪ್ರತಿಮೆ ಮಾಡಿ ಶ್ರದ್ದಾಂಜಲಿ ಸಲ್ಲಿಸ್ತಾಯಿದ್ದಾರೆ. ಆದ್ರೆ ಇಲ್ಲಿ ಡಿಜಿಟಲ್ ಟಚ್ ಕೊಡಲಾಗಿದೆ. ಹೌದು ಸಾಕಷ್ಟು ಮಂದಿ ಆಂಧ್ರ ಪ್ರದೇಶದಲ್ಲಿ ಪುನೀತ್ ಅವರ ಪ್ರತಿಮೆ ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ, ಅಲ್ಲಿನ ಶಿಲ್ಪಿಗಳಿಗೆ ಸಾಕಷ್ಟು ಆರ್ಡರ್ ಗಳು ಬರುತ್ತಿವೆ. ಪುನೀತ್ ಅಭಿಯನದ ಕೊನೆಯ ಚಿತ್ರ ಯುವರತ್ನ ಧಾರವಾಡ ನಗರದಲ್ಲಿ ಚಿತ್ರಿಕರಣಗೊಂಡಿತ್ತು. ಧಾರವಾಡದ ಕಲಾವಿದರೊಬ್ಬರು ಪುನೀತ್ ಪ್ರತಿಮೆ ರಚನೆ ಮಾಡಿ ಶ್ರದ್ಧಾಂಜಲಿ ಅರ್ಪಿಸಿದ್ದರು. ಕಲಾವಿದ ಮಂಜುನಾಥ ಹಿರೇಮಠ ಪುನೀತ್ ರಾಜಕುಮಾರ ಅವರ ಮಣ್ಣಿನ ಪ್ರತಿಮೆ ತಯಾರಿಸಿದ್ದರು. ಇದನ್ನೇ ಕಾಲೇಜ್ ಎದುರುಗಡೆ ಇಟ್ಟು ವಿದ್ಯಾರ್ಥಿಗಳು, ಕಲಾವಿದರು, ಕನ್ನಡ ಹೋರಾಟಗಾರರು, ವಿವಿಧ ನಾಗರಿಕರು ಸೇರಿ ಶ್ರದ್ಧಾಂಜಲಿ ಅರ್ಪಿಸಿದರು.

[widget id=”custom_html-5″]

ಸದ್ಯ ಈಗ ಆಂದ್ರದ ಗುಂಟೂರು ಜಿಲ್ಲೆಯ ತೆನಾಲಿ ಜಿಲ್ಲೆಯ ಶಿಲ್ಪಿ ಕಾಟೂರಿ ವೆಂಕಟೇಶ್ವರರಾವ್ ಅವರಿಗೆ ಪುನೀತ್​ ಪ್ರತಿಮೆ ನಿರ್ಮಾಣಕ್ಕೆ ಭಾರೀ ಆರ್ಡರ್​ಗಳು ಬರುತ್ತಿವೆ. ವೆಂಕಟೇಶ್ವರ್​ ಮಕ್ಕಳಾದ ರವಿಚಂದ್ರನ್ ಮತ್ತು ಶ್ರೀ ಹರ್ಷಲಾ ಜತೆ ಸೇರಿ 3ಡಿ ಪ್ರಿಂಟಿಂಗ್ ತಂತ್ರಜ್ಞಾನದಲ್ಲಿ ಅಪ್ಪು ಪ್ರತಿಮೆಗಳನ್ನು ತಯಾರಿಸುತ್ತಿದ್ದಾರೆ. ಅಭಿಮಾನಿಗಳ ಆಸೆಯಂತೆ 3ಡಿ ತಂತ್ರಜ್ಞಾನದಿಂದ ಮೂರ್ತಿಗಳ ತಯಾರಿಕೆ ಆರಂಭವಾಗಿದೆ. ಈ ತಂತ್ರಜ್ಞಾನದಿಂದ 3 ಇಂಚುಗಳಿಂದ ಹಿಡಿದು 100 ಅಡಿವರೆಗೆ ಮೂರ್ತಿಗಳನ್ನು ತಯಾರಿಸಬಹುದು. ಇದರಿಂದ ಸಿದ್ಧಪಡಿಸಿದ ಮೂರ್ತಿಗಳು ತುಂಬಾನೇ ಅದ್ಭುತವಾಗಿ ಮೂಡಿ ಬರುತ್ತವೆ ಗ್ರಾಹಕರ ಬೇಡಿಕೆಯನ್ನು ಇಡೇರಿಸಲು ರವಿಚಂದ್ರನ್, ಹರ್ಷಿಲಾ ಹಗಲು ರಾತ್ರಿ ಕಷ್ಟ ಪಟ್ಟು ದುಡೀತಾಯಿದ್ದಾರೆ. ಹಾಗೇ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುವ ಕಾರಣ, ಅದರಲ್ಲೂ ಅಪ್ಪು ಅಭಿಮಾನಿಗಳ ನೋವು ತುಂಬಿದ ಬೇಡಿಕೆಯಾದ್ದರಿಂದ ಇವರಿಬ್ಬರು ಸಿಕ್ಕಾಪಟ್ಟೆ ಶ್ರಮವಹಿಸಿ ಪ್ರತಿಮೆ ಮಾಡ್ತಾಯಿದ್ದಾರೆ..