Advertisements

ಅಪ್ಪು ಅವರ ಗಂಧದ ಗುಡಿ ಟೀಸರ್ ನೋಡಿದ್ರಾ ಹೇಗಿದೆ.. ಅಭಿಪ್ರಾಯ ತಿಳಿಸಿ!

Cinema

ನಾಡು, ನುಡಿ, ಜಲ,ನೆಲದ ವಿಚಾರ ಬಂದ್ರೆ ಅಲ್ಲಿ ಸ್ಯಾಂಡಲ್​ವುಡ್​ನ ದೊಡ್ಮನೆ ಮಂದಿ ಇರ್ತಾರೆ.. ಗೋಕಾಕ್​ ಚಳುವಳಿಯ ಮೂಲಕ ಅಣ್ಣಾವ್ರು ಕನ್ನಡ ಭಾಷೆಯ ಶಕ್ತಿಯನ್ನು ಜಗತ್ತಿಗೆ ತೋರಿಸಿ ಕೊಟ್ಟಿದ್ರು.. ಅಲ್ಲದೆ ಅಣ್ಣಾವ್ರು ಅವರ ಸಿನಿಮಾಗಳಲ್ಲಿ ನಾಡು, ನುಡಿಯನ್ನು ಅರಾಧಿಸುವ ಹಾಡುಗಳು ಇರ್ತಿದ್ದವು.. ಅಣ್ಣಾವ್ರಂತೆಯೆ ಅವರ ಮಕ್ಕಳು ನಾಡು ನುಡಿ ವಿಚಾರಕ್ಕೆ ಬಂದ್ರೆ ಸದಾ ಮುಂದೆ ಇರ್ತಿದ್ರು..ಅದರಲ್ಲೂ ಪವರ್​ ಸ್ಟಾರ್​ ಪುನೀತ್​ ರಾಜ್​ ಕುಮಾರ್ ಅವರು​ ಸಿನಿಮಾ, ಸಾಮಾಜಿಕ ಕೆಲಸದ ಮೂಲಕ ಕನ್ನಡಿಗರ ಸ್ವತ್ತಾಗಿದ್ರು.. ತಂದೆಗೆ ತಕ್ಕ ಮಗನಾಗಿದ್ದ ಅಪ್ಪುಗೆ ಕನ್ನಡ ಭಾಷೆ, ಕನ್ನಡ ನಾಡಿನ ಬಗ್ಗೆ ಅಪಾರ ಪ್ರೀತಿ ಗೌರವ ಇತ್ತು.. ಅದಕ್ಕೆ ಸಾಕ್ಷಿ ಎಂಬತೆ ಅಪ್ಪು ತಾನು ಪವರ್​ ಸ್ಟಾರ್​ ಅನ್ನೊದನ್ನು ಮರೆತು ಸಾಮಾನ್ಯನಾಗಿ ಗಂಧಧ ಗುಡಿ ಎಂಬ ಸಾಕ್ಷ್ಯಚಿತ್ರ ಮಾಡಿದ್ದಾರೆ..

[widget id=”custom_html-3″]

Advertisements

ಇಂತ ಅದೆಷ್ಟೋ ಕನಸನ್ನು ಅಪ್ಪು ಕಂಡಿದ್ರು.. ಅಲ್ಲದೆ ಆ ಕನಸುಗಳನ್ನು ತಮ್ಮ ಆತ್ಮೀಯರೆ ಜೊತೆ ಅಪ್ಪು ಹೇಳಿ ಕೊಂಡಿದ್ದಾರೆ.. ಅಂತೆಯೇ ವೀರ ಕನ್ನಡಿಗ ಅಪ್ಪು ಕನ್ನಡ ಭಾಷೆಗೆ ಸಂಗೀತದ ಮೂಲಕ ಗೌರವ ಸಲ್ಲಿಸಲು ಪುನೀತ್​ ರಾಜ್​ ಕುಮಾರ್​ ದೊಡ್ಡ ಕನಸ್ಸನ್ನೆ ಕಂಡಿದ್ರು.. ಅದೇನಪ್ಪ ಅಂದ್ರೆ ಕನ್ನಡ ಅಭಿಮಾನದ 100 ಹಾಡುಗಳನ್ನು ಪಿಅರ್​ಕೆ ಮೂಲಕ ಕನ್ನಡಿಗರಿಗೆ ಅರ್ಪಿಸುವ ಆಸೆ ಅಪ್ಪುಗೆ ಇತ್ತು..ಅಲ್ಲದೆ ಈ ಆಸೆಯನ್ನು ಕೆಜಿಎಫ್ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರ್​ ಬಳಿ ಹೇಳಿ ಕೊಂಡಿದ್ರಂತೆ. ಪವರ್​ ಸ್ಟಾರ್​ ಕನ್ನಡಕ್ಕಾಗಿ 100 ಹಾಡುಗಳನ್ನು ಮಾಡಬೇಕು ಅನ್ನೋ ಕನಸ್ಸನ್ನು ಕಂಡಿದ್ದರು..

[widget id=”custom_html-3″]

ಆ ಕನಸ್ಸು ನನಸಾಗುವ ಮುನ್ನವೇ ಕಾಲನ ಕರೆಗೆ ಅಪ್ಪು ಕನ್ನಡಿಗರ ಹೃದಯದಲ್ಲಿ ಎಂದಿಗೂ ಕರಗದಂತ ನೆನಪುಗಳ ಕೊಟ್ಟು, ನಮ್ಮನ್ನ ಬಿಟ್ಟು ಬಾರರ ಲೋಕಕ್ಕೆ ಹೋಗಿದ್ದಾರೆ.. ಅಪ್ಪು ಕಂಡ ಕನಸುಗಳು ಇನ್ನೆಷ್ಟಿವೆಯೋ? ಭಾಷಾಭಿಮಾನ, ಭಾಷೆಯ ಏಳಿಗೆ ಜನ ಪರ ಕೆಲಸಗಳನ್ನ ಮಾಡೋದ್ರಲ್ಲಿ ಅಪ್ಪು ಯಾವಾಗಲೂ ಮುಂದು ಅನ್ನೋಕೆ ಮತ್ತೆ ಮತ್ತೆ ಅಪ್ಪು ಕನಸುಗಳೇ ಸಾರಿ ಹೇಳುತ್ತಿವೆ. 100 ಸಾಹಿತಿಗಳು, ನೂರು ಹಾಡುಗಳನ್ನು ಕನ್ನಡಿಗರಿಗೆ ಕೊಡುವ ಯೋಚನೆ ಅಷ್ಟು ಸುಲಭವಾಗದಲ್ಲ.. ಇಂತಹ ವಿಭಿನ್ನ ಸಾಹಸಮಯ ಯೋಚನೆಗಳು ಪುನೀತ್ ರಾಜ್ ಕುಮಾರ್ ರಂತಹ ಚಿನ್ನದ ಮನಸು ಕನಸು ಇದ್ದವರಿಗೆ ಮಾತ್ರ ಬರಲು ಸಾಧ್ಯ..

[widget id=”custom_html-3″]