Advertisements

ಪುನೀತ್ ರಾಜಕುಮಾರ್ ಅವರಿಂದ ಸಹಾಯ ಪಡೆದಂತಹ ಮಹಿಳೆ ಈಗ ಏನಾಗಿದ್ದಾರೆ ಗೊತ್ತಾ?

Cinema

ನಮಸ್ಕಾರ ಪ್ರಿಯ ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದೆ ಹೆಸರಾದ ನಟ ಈಗ ನೆನಪು ಮಾತ್ರ. ಅವರ ನಡೆ‌ ನುಡಿ ನಗು ಎಲ್ಲವು ಅದೆಷ್ಟೊ ನೆಮ್ಮದಿಯನ್ನು ಹೊತ್ತು ತರುತಿತ್ತು ಅವರೆ ನಮ್ಮ ಪ್ರೀತಿಯ ಪುನೀತ್ ರಾಜ್‍ಕುಮಾರ್. ಹೌದು ಅವರು ನಮ್ಮನ್ನೆಲ್ಲ ಅಗಲಿದರು ಅವರ ನೆನಪು, ನಮ್ಮೊಂದಿಗೆ ಬಿಟ್ಟು ಹೋದ ಸನ್ನಿವೇಶಗಳನ್ನು ಮೆಲುಕು ಹಾಕುವ ಸಮಯವುದು. ಅವರ ಅಕಾಲಿಕ ನಿಧನದ ನಂತರ ಅವರು ಮಾಡಿದ ಅನೇಕ ಸಮಾಜಪರ ಕಾರ್ಯಗಳು ಬೆಳಕಿಗೆ ಬಂದವು.‌

[widget id=”custom_html-3″]

ಇಂದಿಗೂ ಅವರಿಂದ ಸಹಾಯ ಪಡೆದವರು ಅವರನ್ನು ನೆನೆಯುತ್ತಾರೆ. ಹೀಗೆ ಪುನೀತ್ ‌ಅವರು ಒಬ್ಬ ಮಹಿಳೆಗೆ ಸಹಾಯ ಮಾಡಿದ್ದರು. ಯಾರು ಆ ಮಹಿಳೆ? ಆಕೆಗೆ ಅಪ್ಪು ಮಾಡಿದ ಸಹಾಯವೇನು? ಸದ್ಯ ಆ ಮಹಿಳೆ ಮಾಡುತ್ತಿರುವುದೇನು ಅಂತಾ ತಿಳಿಯಬೇಕಾದರೆ ನೋಡಿ..

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಪುನೀತ್ ರಾಜಕುಮಾರ್ ಎಲೆ ಮರೆಯ ಕಾಯಿಯಂತೆ ಸಮಾಜಕ್ಕೆ, ನಂಬಿ ಬಂದವರಿಗೆ ನೆರವಾಗಿದ್ದಾರೆ. ತಾವು ಮಾಡಿದ ಸಮಾಜಸೇವೆ ತಮ್ಮ ಬಲಗೈಯಿಂದ ಎಡಗೈ ಕೂಡಾ ತಿಳಿಯದ ಹಾಗೆ ನೋಡಿಕೊಂಡಿದ್ದರು‌ ನಮ್ಮೆಲ್ಲರ ಅಪ್ಪು. ಪುನೀತ್ ಬಳಿ ಬೇಡಿ ಬಂದವರಿಗೆ ನೆರವಾಗುತ್ತಿದ್ದರು. ಅಪ್ಪು ಬಡ ಮಹಿಳೆಗೆ ತಮ್ಮ ಸಹಾಯ ಮಾಡಿದ್ದರು. ಎಲ್ಲರಿಗೂ ಸಿನೆಮಾದಲ್ಲಿ ನಟಿಸಬೇಕು, ನಿರ್ದೇಶನ‌ ಮಾಡಬೇಕು ಹೀಗೆ ಹತ್ತು ಹಲವು ಆಶಾ ಗೋಪುರಗಳನ್ನು ಹೊತ್ತುಕೊಂಡು ಬಂದಿರುತ್ತಾರೆ. ಹೀಗಾಗಿ ಸಿನೆಮಾ ಇಂಡಸ್ಟ್ರಿ ‌ಬೆಳೆಯಲು ಯಾರಾದರು ಕಲಾವಿದರ ನೆರವು ಪ್ರತಿಭೆಯನ್ನು ಗುರುತಿಸುವವರು ಬೇಕು. ಹೀಗೆ ಸಿನೆಮಾ ಕ್ಷೇತ್ರದಲ್ಲಿ ಸಾಧನೆ ಮಾಡಲೇಬೇಕೆಂದು ಬಂದವರು ಗೌರಿ ಶ್ರೀ ಎಂಬ ಮಹಿಳೆ. ಚಿತ್ರರಂಗದಲ್ಲಿ ತನ್ನದೇ ಆದ ಅದ್ಭುತ ಹೆಸರನ್ನು ಸಾಧಿಸಬೇಕು ಎಂಬ ಮಹದಾಸೆಯನ್ನು ಹೊತ್ತಿದ್ದರು. ಅದರಂತೆ ಪುನೀತ್ ರಾಜಕುಮಾರ್ ಅವರ ಸಹಾಯದಿಂದ ಇಂದು ಚಿತ್ರರಂಗದಲ್ಲಿ ನಿರ್ದೇಶಕಿ ಮತ್ತು ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ.

[widget id=”custom_html-3″]

ಅಷ್ಟೇ ಅಲ್ಲದೆ ಪುನೀತ್ರಾಜಕುಮಾರ್ ಅವರಂತೆ ತಾವು ಕೂಡ ನೃತ್ಯದಲ್ಲಿ ತೊಡಗಿಸಿಕೊಂಡು ಇಂದು ಪ್ರಖ್ಯಾತ ನೃತ್ಯ ಸಂಯೋಜಕಿಯಾಗಿ ಗುರುತಿಸಿಕೊಂಡಿದ್ದಾರೆ.ಅಪ್ಪು ಅವರ ಈ ಸರಳತೆ, ಸಹಾಯಪರ ಮನೋಭಾವ ಎಲ್ಲವು ಇಂದು ಅದೆಷ್ಟೊ ಜನರು ಜೀವನ ನಡೆಸುವಲ್ಲಿ ಸಹಾಯವಾಗಿದೆ. ಅವರು ಅಂದು ಗೌರಿಗೆ ಸಹಾಯ ಮಾಡಿದ್ದು ಇಂದು ಸಾರ್ಥಕವಾಗಿದೆ. ಹೀಗೆ ಪುನೀತ್ ತಮ್ಮ ಜೀವನದುದ್ದಕ್ಕೂ ಪರರಲ್ಲಿ ಒಂದಾಗಿ ಬೆಳೆದು ಬಾಳಿದವರು. ಇವರು ಸದಾ ನಮ್ಮೆಲ್ಲರ ಮನದಲ್ಲಿ ಅಚ್ಚಳಿಯದೇ ಇರುವವರು.

[widget id=”custom_html-3″]