Advertisements

ಅಪ್ಪು ಬಿಡುವಾಗಿದ್ದಾಗ ಚಿಕ್ಕಮಗಳೂರಿಗೆ ಹೋಗಿ ಏನೆಲ್ಲಾ ಮಾಡ್ತಿದ್ದರು ಗೊತ್ತಾ? ಏನೆಲ್ಲಾ

Cinema

ಪ್ರಿಯ ಸ್ನೇಹಿತರೆ ಅಪ್ಪು ಆಗಲಿ ಅದಾಗಲೇ ಎರಡು ತಿಂಗಳುಗಳು ಕಳೆದಿವೆ ಎಂದರೆ ನಂಬಲಾಗುತ್ತಿಲ್ಲ. ಇಂದಿಗೂ ಅಪ್ಪು ನಮ್ಮೊಂದಿಗೆ ಇದ್ದಾರೆ. ನಮ್ಮ ಜೊತೆಗೆ ಕಾಣದಂತೆ ಇದ್ದಾರೆ ಎನ್ನುವ ಭಾವನೆಯೇ ಇಂದು ಎಲ್ಲರಲ್ಲಿ ಮೂಡಿದೆ. ಅವರು ಇಲ್ಲ ಎನ್ನುವ ನೋವು ಅರಗಿಸಿಕೊಳ್ಳಲು ಆಗುತ್ತಿಲ್ಲ.. ಇನ್ನೂ ಕುಟುಂಬಸ್ಥರು ಅವರ ಅಗಲಿಕೆಯ ನೋವಿನಿಂದ ಆಚೆಯೇ ಬಂದಿಲ್ಲ ಅವರೊಂದಿಗೆ ಕಳೆದ ಕ್ಷಣಗಳನ್ನು ನೆನೆದು ಇಂದಿಗೂ ಕಣ್ಣೀರು ಇಡುತ್ತಿದ್ದಾರೆ. ಇದೀಗ ಅಪ್ಪು ಅವರು ಕಳೆದ ಕೆಲ ಕ್ಷಣಗಳನ್ನು ಮತ್ತೆ ಮೆಲಕು ಹಾಕುತ್ತಿದ್ದೇವೆ. ಸಿನಿಮಾ ಕೆಲಸದಿಂದ ಬಿಡುವಾದಾಗ ಪುನೀತ್ ಅವರು ಕುಟುಂಬ ಸಮೇತ ಟ್ರಿಪ್ ಮಾಡುತ್ತಿದ್ದರು. ದೇಶ ವಿದೇಶಗಳಿಗೆ ಹೋಗುತ್ತಿದ್ದರು. ಇನ್ನೂ ಕಡಿಮೆ ಸಮಯ ಸಿಕ್ಕಾಗ ಪಕ್ಕದ ರಾಜ್ಯಗಳಿಗೆ ಭೇಟಿ ನೀಡಿ ತಮ್ಮ ಬಿಡುವಿನ ದಿನಗಳನ್ನು ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿದ್ದರು. ಇನ್ನು ಕೆಲವು ಬಾರಿ ಅತ್ತೆಮನೆ ಅಂದರೆ ಅಶ್ವಿನಿಯವರ ತವರು ಮನೆಗೆ ಹೋಗಿ 2, 3 ದಿನಾ ಕಳೆಯುತ್ತಿದ್ದರಂತೆ.

[widget id=”custom_html-3″]

Advertisements

ಅಪ್ಪು ಅವರಿಗೆ ಅವರ ಅತ್ತೆ ಮನೆಯಲ್ಲಿ ಮಾಡುವ ಆಹಾರ, ತಿಂಡಿಗಳು, ಅಡುಗೆಗಳು ಎಂದರೆ ತುಂಬಾ ಇಷ್ಟ. ಹಾಗಾಗಿ ಮಡದಿ ಮಕ್ಕಳೊಂದಿಗೆ ವರ್ಷಕ್ಕೆ ಒಮ್ಮೆಯಾದರೂ ಭೇಟಿ ನೀಡುತ್ತಿದ್ದರಂತೆ. ಅತ್ತೆ ಮಾವ ಹಾಗೂ ಅಶ್ವಿನಿಯವರ ಸಹೋದರ ವಿನಯ್ ತುಂಬಾನೇ ಅವರನ್ನು ಪ್ರೀತಿಸುತ್ತಿದ್ದರು. ಇವರನ್ನು ಮನೆಯ ಮಗನಂತೆ ಹಚ್ಚಿಕೊಂಡಿದ್ದರು ಚಿಕ್ಕಮಗಳೂರಿನಲ್ಲಿ ಶೂಟಿಂಗ್ ಇದ್ರೆ ಮಿಸ್ ಮಾಡದೆ ಅತ್ತೆ ಮನೆಗೆ ಭೇಟಿ ನೀಡಿ ಊಟ ಮಾಡಿ ಬರುತ್ತಿದ್ದರಂತೆ ಅಪ್ಪು ಅವರು. ಇವರು ಅತ್ತೆ ಮನೆಗೆ ಹೋದಾಗ ಸಹಜವಾಗಿಯೇ ಇರುತ್ತಿದ್ದರಂತೆ. ತಮಗೆ ಇಷ್ಟವಾದ ಆಹಾರವನ್ನು ಸವಿಯುತ್ತಾ ಅಲ್ಲಿಯ ಸಹಜ ಪ್ರಕೃತಿ ಸೌಂದರ್ಯವನ್ನು ಮಕ್ಕಳೊಂದಿಗೆ ಎಂಜಾಯ್ ಮಾಡುತ್ತಿದ್ದರಂತೆ. ಇದೀಗ ದೊಡ್ಡಮನೆಯ ಜೊತೆಗೆ ಅಪ್ಪು ಅತ್ತೆಮನೆ ಚಿಕ್ಕಮಗಳೂರು ಕೂಡ ದುಃಖದ ಸಾಗರದಲ್ಲಿ ಮುಳುಗಿದೆ. ಅವರ ಮನೆಯಲ್ಲಿಯೂ ಪುನೀತ್ ಅವರ ದೊಡ್ಡ ಫೋಟೋ ಹಾಕಿ ಪೂಜಿಸುತ್ತಿದ್ದಾರೆ.

[widget id=”custom_html-3″]


ತಮ್ಮ ವಿನಯ್ ಆಗಾಗ ಅಕ್ಕನನ್ನು ಭೇಟಿ ಮಾಡಿ ಧೈರ್ಯ ತುಂಬುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರ ಆಸೆಗಳನ್ನು ಈಡೇರಿಸಲು ಅಶ್ವಿನಿಯವರಿಗೆ ಸಾಂತ್ವಾನ ನೀಡಿ, ಧೈರ್ಯ ತುಂಬುತ್ತಿದ್ದಾರೆ. ವಿನಯ್ ಕುಟುಂಬಕ್ಕೂ ಅಪ್ಪುವನ್ನು ಕಳೆದುಕೊಂಡು ಈಗ ಬರಸಿ’ಡಿಲು ಬ’ಡಿದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಸಹೋದರಿ ಅಶ್ವಿನಿಗೆ ಧೈರ್ಯ ನೀಡಿ ಅವಳಿಗೆ ಬೆಂಗಾವಲಾಗಿ ನಿಂತಿದ್ದಾರೆ ವಿನಯ್ ಅವರು. ಇದೀಗ ಅಶ್ವಿನಿ ಅವರು ಪಿಆರ್ ಕೆ ಸಂಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅಪ್ಪು ಕನಸಿನಂತೆ ಪ್ರಾಜೆಕ್ಟ್ ಗಂಧದಗುಡಿ ಚಿತ್ರದ ಟ್ರೇಲರನ್ನು ಬಿಡುಗಡೆ ಮಾಡಿದ್ದಾರೆ. ಹಾಗೆ ಅವರು ಮಕ್ಕಳೊಂದಿಗೆ ಅಪ್ಪು ಸ್ಮಾರಕಕ್ಕೆ ಭೇಟಿ ನೀಡಿ 2 ತಿಂಗಳಿನ ಪೂಜೆ ಸಲ್ಲಿಸಿದರು. ಇದೀಗ ಅಶ್ವಿನಿಯವರಿಗೂ ನೆಮ್ಮದಿಯ ಅಗತ್ಯವಿದ್ದು, ಕೆಲದಿನಗಳ ಕಾಲ ತಮ್ಮ ತವರು ಮನೆಯಾದ ಚಿಕ್ಕಮಗಳೂರಿಗೆ ಹೋಗುತ್ತಿದ್ದಾರೆ. ಅಲ್ಲಿ ಕೆಲ ದಿನಗಳನ್ನು ಕಳೆಯಲಿದ್ದಾರೆ. ಅಪ್ಪು ಆಚೆ ಎಲ್ಲಿಯೇ ಹೋದರು ಪ್ರಕೃತಿಯನ್ನು ಎಂಜಾಯ್ ಮಾಡುತ್ತಿದ್ದರು. ಅಲ್ಲಿ ಸಿಗುವ ಸ್ಥಳೀಯ ಆಹಾರವನ್ನು ಸವಿಯುತ್ತಿದ್ದರು. ಇವೆಲ್ಲವೂ ಈಗ ನೆನಪುಗಳು ಮಾತ್ರ.

[widget id=”custom_html-3″]