Advertisements

ಬಾವ ಬಾಮೈದ ಮನೆಯಲ್ಲಿ ಹೇಗಿರ್ತಾರೆ ನೋಡಿ! ಇಂತಹ ಅಪರೂಪದ ಕ್ಷಣಗಳು ನೋಡಲು ಬಹಳ ಅಪರೂಪ..

Cinema

ನಮಸ್ತೆ ಸ್ನೇಹಿತರೆ, ಒಂದು ಕಾಲದಲ್ಲಿ ಹುಡುಗಿಯರ ಮನಸ್ಸನ್ನು ಕದ್ದ ರಾಮ್ ಕುಮಾರ್ ಇನ್ನೊಂದು ಕಡೆ ಯುವಕರಿಗೆ ಪವರ್ ಐಕಾನ್ ಆಗಿ ನಿಂತಿರುವ ಪುನಿತ್ ರಾಜ್ ಕುಮಾರ್.. ಇವರಿಬ್ಬರು ಒಟ್ಟಿಗೆ ಕೂತರೆ ಎಂತಹ ಒಡನಾಟ, ಅನುಬಂಧದ ಮಾತು ಕತೆ ಅಲ್ಲವೇ. ಇನ್ನೂ ರಾಮ್ ಕುಮಾರ್ ಮನೆಗೆ ಪುನಿತ್ ರಾಜಕುಮಾರ್ ಬೇಟಿಕೊಟ್ಟು.. ಬಾವ ಬಾಮೈದ ಇಬ್ಬರು ಒಟ್ಟಿಗೆ ಮಾತನಾಡುವುದು ನೋಡಿದರೆ ನಿಜಕ್ಕೂ ಈ ರೀತಿ ಇರಬೇಕು ಸಂಬಂಧಗಳು ಅನಿಸುತ್ತದೆ. ಕೆಲವರು ಎತ್ತರಕ್ಕೆ ಬೆಳೆಯುತ್ತಿದ್ದಂತೆ ಸಂಬಂಧಗಳನ್ನು ಮರೆತು ಬಿಡುತ್ತಾರೆ.. ಆದರೆ ಪುನಿತ್ ರಾಜ್ ಕುಮಾರ್ ಅವರು ಎಷ್ಟೇ ಎತ್ತರಕ್ಕೆ ಬೆಳೆದರು ತಾನು ನನ್ನ ಸಂಬಂಧಿಕರು ಎಂದು ಅವರಿಗಾಗಿ ಸಮಯ ಕೊಟ್ಟು ಮಾತನಾಡಿಸುತ್ತಾರೆ..

Advertisements

ಹಾಗೆ ಬೆನ್ನೆಲುಬಾಗಿ ನಿಂತಿರುತ್ತಾರೆ ಎನ್ನುವುದು ಸಹ ನೈಜ ಸಂಗತಿ. ಸಾಮಾನ್ಯವಾಗಿ ಇಂತಹ ಅಪರೂಪದ ಕ್ಷಣಗಳು ನೋಡಲು ಬಹಳ ಅಪರೂಪ.. ಇಂತಹ ಅದ್ಬುತ ಕ್ಷಣಗಳ ಪೊಟೊಗಳನ್ನು ತೆಗೆದ ರಾಮ್ ಕುಮಾರ್ ಮಗ ದೀರನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಮಾತುಕತೆಗೆ ಕೂತಿರುವ ಪುನಿತ್ ರಾಜಕುಮಾರ್ ಮತ್ತು ರಾಮ್ ಕುಮಾರ್ ಅವರು ತುಂಬಾ ಮಾತನಾಡುತ್ತಾ ಮೋಬೈಲ್ ನಲ್ಲಿ ವೀಡಿಯೋವನ್ನು ವೀಕ್ಷಣೆ ಮಾಡುತ್ತಿದ್ದಾರೆ.‌.

ಪುನೀತ್ ರಾಜ್ ಕುಮಾರ್ ಅವರಿಗೆ ರಾಮ್ ಕುಮಾರ್ ಅವರು ಮೋಬೈಲ್ ನಲ್ಲಿ ವೀಡಿಯೋ ತೋರಿಸುತ್ತಿರುವುದು ನೋಡಿದರೆ ಬಹುಶಃ ತಮ್ಮ ಮಗನ ಮೊದಲ ಸಿನಿಮಾದ ಟ್ರೈಲರ್ ಇರಬೇಕು ಎಂದು ಅಭಿಮಾನಿಗಳ ಮಾತಾಗಿದೆ. ಇವರಿಬ್ಬರನ್ನು ಪೊಟೊದಲ್ಲಿ ನೋಡುವುದಕ್ಕೆ ಎನೋ ಒಂದು ರೀತಿಯ ಉತ್ಸಾಹ ಮತ್ತು ಸಂತೋಷ.. ಇವರನ್ನು ಒಟ್ಟಿಗೆ ತೆರೆಯ ಮೇಲೆ ನೋಡಿದರೆ ಇನ್ನೆಷ್ಟು ಚೆನ್ನಾಗಿರುತ್ತದೆ ಅಲ್ವಾ. ಆದರೆ ಸ್ಯಾಂಡಲ್ವುಡ್ ನ ನಿರ್ದೇಶಕರು ರಾಮ್‌ ಕುಮಾರ್ ಅವರಂತಹ ನಟನನ್ನು ಮರೆತು ಬಿಟ್ಟಿದ್ದಾರೆ ಅನಿಸುತ್ತದೆ..

ಪುನಿತ್ ರಾಜ್ ಕುಮಾರ್ ಹಾಗೂ ರಾಮ್ ಕುಮಾರ್ ಅವರು ಒಟ್ಟಿಗೆ ಬಂದರೆ ಇನ್ನಷ್ಟು ಕ್ರೇಜ್‌ ಇರುವದಂತು ನಿಜ. ಅಭಿಮಾನಿಗಳು ಸಹ ರಾಮ್ ಕುಮಾರ್ ಅವರನ್ನು ಮತ್ತೆ ತೆರೆಯ ಮೇಲೆ ನೊಡುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.. ಸುಂದರ ರೂಪದ ಜೊತೆ ಸಖತ್ ಪ್ರತಿಭೆ ಇರುವ ರಾಮ್ ಕುಮಾರ್ ಅವರಂತಹ ಕಲಾವಿದರ ಅವಶ್ಯಕತೆ ಕನ್ನಡ ಚಿತ್ರರಂಗಕ್ಕೆ ಬೇಕಾಗಿದೆ. ಅವರ ವಯಸ್ಸಿಗೆ ತಕ್ಕಂತೆ ಒಳ್ಳೆಯ ಕಥೆಯ ಜೊತೆ ಬಂದರೆ ರಾಮ್ ಕುಮಾರ್ ಅವರನ್ನು ಮತ್ತೆ ತೆರೆಯ ಮೇಲೆ ನೋಡಬಹುದು.