Advertisements

ಪುನೀತ್ ಯಾವಾಗ್ಲು ತಮ್ಮ ಹೆಂಡತಿ ಅಶ್ವಿನಿ ಬಳಿ ಅಭಿಮಾನಿಗಳಿಗೆ ಇದನ್ನು ಮಾಡ್ಲೇಬೇಕು ಅಂಥ ಹೇಳಿಕೊಳ್ತಿದ್ರಂತೆ! ಆದ್ರೆ ಅವ್ರೆ ಇಲ್ಲ ಈಗ..

Cinema

ರಾಜಕುಮಾರನಿಲ್ಲದೆ ಅರಮನೆ ಮಾತ್ರವಲ್ಲ ಕರ್ನಾಟಕದ ಜನರ ಮನ ಕೂಡ ನೋವಿನ ಗೂಡಿನಲ್ಲಿ ಮುಳುಗಿದೆ.. ಅಪ್ಪು ಸಾವು ಕೊಟ್ಟ ನೋವೇ ಅಂತಾದ್ದು .. ಸಾಯುವ ವಯಸ್ಸಲ್ಲ, ಆದರೂ ಉ’ಸಿ’ರಾಟ ನಿಲ್ಲಿಸಿದರು.. ಆ ಉಸಿರನ್ನು ನಂಬಿ ಇದ್ದ ಕುಟುಂಬ ಹಾಗು ಇಡೀ ಅಭಿಮಾನಿಗಳ ಉಸಿರೇ ಇಂದು ಉಸಿರು ಕಟ್ಟುತ್ತಿದೆ.. ಪವರ್ ಸ್ಟಾರ್ ಅಂತ ಜನ ಸುಖಾ ಸುಮ್ಮನೇ ಕರೆದಿಲ್ಲ.. ಆ ಹೆಸರಿಗೆ ತಕ್ಕುದಾದ ವ್ಯಕ್ತಿತ್ವ ಪುನೀತ್ ದಾಗಿತ್ತು.. ಅಪ್ಪ ಅ’ಗ’ಲಿದ ದಿನ ಸುಮಾರು 25 ಲಕ್ಷಕ್ಕೂ ಅಧಿಕ ಮಂದಿ ಅಪ್ಪು ಅಂತಿಮ ದರ್ಶನ ಪಡೆಯಲು ಜಮಾಯಿಸಿದರು.. ಅಷ್ಟೇ ಅಲ್ಲಾ ಅಪ್ಪು ಅಗಲಿ ಇಷ್ಟು ದಿನ ಆದ್ರೂ ದಿನಾಲೂ ಸಾವಿರಾರು ಜನ ಅಪ್ಪು ಸ’ಮಾ’ಧಿ ಬಳಿ ಬಂದು ಕಣ್ಣೀರಿಟ್ಟು ಹೋಗುವ ದೃಶ್ಯ ಇನ್ನು ನೋವು ಕೊಡುತ್ತೆ.. ಅಪ್ಪು ಅಭಿಮಾನಿಗಳ ಅಭಿಮಾನದ ಪರಾಕಾಷ್ಠೆ ಕಂಡ ಅಶ್ವಿನಿ ಒಂದು ನಿರ್ಧಾರ ಮಾಡ್ತಾರೆ.

[widget id=”custom_html-3″]

Advertisements

ಒಂದು ದಿನ ಅಪ್ಪು. ಫ್ಯಾನ್ಸ್ ಗಳಿಗೆ ಊಟದ ವ್ಯವಸ್ಥೆ ಮಾಡಬೇಕು ಅಂತ ನಿರ್ಣಯಿಸುತ್ತಾರೆ.. ಆದ್ರೆ ಇದು ಅಶ್ವಿನಿ ನಿರ್ಧಾರ ಅಷ್ಟೇ.. ಈ ನಿರ್ಧಾರದ ಹಿಂದೆ ಕೂಡ ಅಪ್ಪುವಿನ ಆಸೆಯೇ ಇತ್ತು.. ಹೌದು ಪುನೀತ್ ಯಾವಾಗಲೂ ಅಶ್ವಿನಿ ಅವರ ಬಳಿ ತಮ್ಮ ಒಂದು ಆಸೆಯನ್ನು ಹೇಳಿಕೊಳ್ತ ಇದ್ದರಂತೆ.. ಯಾವಾಗಲಾದರೂ ಒಮ್ಮೆ ಆದ್ರೂ ನಮ್ಮ ಅಭಿಮಾನಿಗಳಿಗೆ ನಾನ್ ವೆಜ್ ಊಟಾ ಹಾಕಿಸಬೇಕು ಅಂತಾ… ಅಪ್ಪುವಿನ ಆ ಆಸೆ ಕೊನೆಗೂ ಈಡೇರಲಿಲ್ಲ. ಹಾಗಂತ ಆ ಕನಸು ಅಲ್ಲೇ ಸ್ಟಾಪ್ ಆಗಲು ಅಶ್ವಿನಿ ಬಿಡಲು ಇಲ್ಲ.. ಹೌದೂ ಪುನೀತ್ ರಾಜ್ ಕುಮಾರ್ ಅವರ ಹನ್ನೊಂದನೇ ದಿನದ ಕಾರ್ಯದ ಅಂಗವಾಗಿ ಕುಟುಂಬಸ್ಥರಿಗೆ ಹಾಗೂ ಸಿನಿಮಾ ಮಂದಿಗೆ ಸದಾಶಿವನಗರದ ಪುನೀತ್ ಅವರ ನಿವಾಸದ ಬಳಿಯೇ ಊಟದ ವ್ಯವಸ್ಥೆ ಮಾಡಲಾಗಿತ್ತು.. ಬಳಿಕ ಅಭಿಮಾನಿಗಳಿಗಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು..

[widget id=”custom_html-3″]

ಮೊದಲು 20 ಸಾವಿರ ಫ್ಯಾನ್ಸ್ ಗೆ ಅಡುಗೆ ಮಾಡಲಾಗಿತ್ತು.. ಸುಮಾರು 1500 ಮಂದಿ ಬಾಣಸಿಗರು ಅಡುಗೆ ಮಾಡಿದ್ರು.. ಕೊನೆ ಕೊನೆಗೆ ಅಭಿಮಾನಿಗಳ ಸಂಖ್ಯೆ ಏರುತ್ತಲೇ ಹೋಯ್ತು ಸಂಜೆ 5 ಗಂಟೆವರೆಗೂ ಯಾರೆಲ್ಲ ಅಭಿಮಾನಿಗಳು ಬರ್ತಾರೋ ಅವರಿಗೆಲ್ಲ ಹೊಟ್ಟೆ ಪೂರ್ತಿ ಊಟಾ ಹಾಕುವಂತೆ ಅಶ್ವಿನಿ ಅವರೂ ಕ್ಯಾಟರಿಂಗ್ ಅವರಾ ಬಳಿ ಕೇಳಿ ಕೊಂಡಿದ್ರಂತೆ.. ಈ ಹಿನ್ನಲೆ ಅಪ್ಪುವಿನ ಪ್ರಸಾದ ಅಂತ ಭಾವಿಸಿ ಬಂದ ಭಕ್ತರಿಗೆ ಬಾಣಸಿಗರು ಸಂಜೆವರೆಗೂ ಸಹ ಊಟ ಮಾಡಿ ಬಡಿಸಿದ್ದಾರೆ..
ಹರಿದು ಬಂದ ಸಾಗರೋಪಾದಿ ಜನರು ಅಪ್ಪುವನ್ನು ಕಾಣಬಯಾಸುತ್ತಿದ್ದರು. ಅಪ್ಪುವಿಗಾಗಿ ಹಾತೊರೆಯುತ್ತಿದ್ದರು. ಆದ್ರೆ ಇದನ್ನೆಲ್ಲ ನೋಡಿ ಕಣ್ತುಂಬಿ ಕೊಳ್ಳಲು ಅಪ್ಪುವೇ ಜೀವಂತ ಇಲ್ಲಾ ಅನ್ನೋದೇ ದುಃಖ ಕರಾವದ ಸಂಗತಿ.