Advertisements

ಪುನೀತ್ ರಾಜ್ ಕುಮಾರ್ ಇಬ್ಬರು ಹೆಣ್ಣು ಮಕ್ಕಳು ಈಗ ಎಷ್ಟು ದೊಡ್ಡವರಾಗಿದ್ದಾರೆ ಗೊತ್ತಾ? ತಮ್ಮ ಮಕ್ಕಳ ಜೊತೆ ಪುನೀತ್ ಅವರು ಏಗಿರ್ತಾರೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಸಿನಿಮಾ ರಂಗದಲ್ಲಿ ಸರಳತೆಗೆ ವಿನಯತೆಗೆ ಮತ್ತೊಂದು ಹೆಸರೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.. ಅಪ್ಪು ಅವರ ಮುಗ್ದ ನಗು ಚುರುಕಾದ ಮಾತು ಕನ್ನಡ ಪ್ರೇಕ್ಷಕರನ್ನು ಮಂತ್ರ ಮುಗ್ದಗೊಳಿಸಿವೆ.. ಕನ್ನಡ ಸಿನಿಮಾ ರಂಗದಲ್ಲಿ ಯಾವುದೇ ವಿವಾದಗಳಿಗೂ ಸಿಲುಕದೇ ಇರುವ ಹಲವಾರು ನಟರಲ್ಲಿ ಅಪ್ಪು ಕೂಡ ಒಬ್ಬರು. ಅಪ್ಪು ಬಾಲ್ಯದಿಂದಲೇ ಸಿನಿಮಾ ನಂಟನ್ನು ಬೆಳೆಸಿಕೊಂಡರು.. ಬಾಲ್ಯ ನಟನಾಗಿ ಹಲವಾರು ಚಿತ್ರಗಳಲ್ಲಿ ಚುರುಕಾಗಿ ನಟಿಸಿದ್ದಾರೆ. ನಂತರ ದೊಡ್ಡವರಾದ ಮೇಲೆ ಸಿನಿಮಾನೆ ಬೇಡ ಎನ್ನುತ್ತಿದ್ದ ಪುನಿತ್ ರಾಜ್ ಕುಮಾರ್ ಅವರು ಅಪ್ಪು ಸಿನಿಮಾ ಮೂಲಕ ನಾಯಕ ನಟನಾಗಿ..

Advertisements

ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದರು. ನಂತರ ಹಲಾವರು ಸಿನಿಮಾಗಳಲ್ಲಿ ನಟಿಸಿ ಟಾಪ್ ನಟನಾಗಿ ಬೆಳೆದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಎನಿಸಿಕೊಂಡರು.. ಡಾ. ರಾಜ್ ಕುಮಾರ್ ಅವರಂತೆಯೇ ಅಪ್ಪು ಕೂಡ ತಮ್ಮ ಅಭಿಮಾನಿಗಳನ್ನು ದೇವರಂತೆ ಕಾಣುತ್ತಾರೆ. ಅಶ್ವಿನಿ ಅವರನ್ನು ಮದುವೆಯಾಗಿರುವ ಪುನೀತ್ ರಾಜ್ ಕುಮಾರ್ ಅವರು ತಮ್ಮ ಇಬ್ಬರು ಮಕ್ಕಳನ್ನು ತುಂಬಾ ಸರಳವಾಗಿ ಬೆಳೆಸಿದ್ದಾರೆ..

ಅಪ್ಪು ಅವರ ಹೆಣ್ಣು ಮಕ್ಕಳು ಎಂದೂ ಕೂಡ ತಾವು ದೊಡ್ಡ ಸ್ಟಾರ್ ನಟನ ಮಕ್ಕಳು ಎಂದು ಬಿಂಬಿಸಿಕೊಂಡು ಬೀಗುವುದಿಲ್ಲ. ಇನ್ನೂ ದೊಡ್ಡ ಸ್ಟಾರ್ ನಟನ ಮಕ್ಕಳು ಎಂಬುವ ಮನೋಭಾವ ಇಲ್ಲದೇ ಅಪ್ಪು ತನ್ನ ಮಕ್ಕಳನ್ನು ತುಂಬಾ ಸರಳವಾಗಿ ಹಾಗು ಶಿಸ್ತಿನಿಂದ ಬೆಳೆಸುತ್ತಿದ್ದಾರೆ.. ಅಪ್ಪು ಅವರ ‌ಮಕ್ಕಳು ಸಾಮಾನ್ಯವಾಗಿ ಎಲ್ಲೂ ಕೂಡ ಸಾರ್ವಜನಿಕವಾಗಿ ಕಾಣಿಸಿಕೊಂಡ ಉದಾಹರಣೆಯೇ ಇಲ್ಲ. ಎಷ್ಟೇ ಶಿಸ್ತಿನಿಂದ ಮಕ್ಕಳನ್ನು ಅಪ್ಪು ಬೆಳೆಸುತ್ತಿದ್ದರು ಮನೆಯಲ್ಲಿ ತಮ್ಮ ಮಕ್ಕಳನ್ನು ಸ್ನೇಹಿತನ ರೀತಿಯಲ್ಲಿ ಖುಷಿ ಖುಷಿಯಿಂದ ಇರುತ್ತಾರೆ.