Advertisements

ಯುವರತ್ನ ಸಿನಿಮಾದಲ್ಲಿ ಗಡ್ಡ ಬಿಟ್ಟು ಬೆಲ್ ಬಾರಿಸುವ ಎಮ್ ಕೆ ಮಠ ರವರಿಗೆ ನಿಜ ಜೀವನದಲ್ಲಿ ಪುನಿತ್ ರಾಜಕುಮಾರ್ ಎಂಥಾ ಕೆಲಸ ಮಾಡಿದ್ದಾರೆ ಗೊತ್ತಾ?

Cinema Inspire

ನಮಸ್ತೆ ಸ್ನೇಹಿತರೆ, ಯುವರತ್ನ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನ ಯಾರಿಗೆ ತಾನೆ ಇಷ್ಟ ಪಡೋಕೆ ಸಾಧ್ಯವಿಲ್ಲ ಹೇಳಿ. ಚಿತ್ರವನ್ನ ಪೂರ್ತಿ ನೋಡಿ ಕುಳಿತಿದ್ದ ಪ್ರೇಕ್ಷಕರ ಕಣ್ಣಲ್ಲಿ ಒಂದೇ ಸೆಕೆಂಡ್ ನಲ್ಲಿ ಕಣ್ಣೀರು ತರಿಸುವ ದೃಶ್ಯವದು.. ಬೆಲ್ ಬಾರಿಸುವ ಪಾತ್ರದಾರಿಯಾದ ಎಮ್ ಕೆ ಮಠ ಅವರು ನಿಂತಿರುತ್ತಾರೆ. ಅಪ್ಪು ಓಡಿ ಬಂದು ಅವರನ್ನ ತಬ್ಬಿ ಅ’ಳುತ್ತಾರೆ.. ಅಷ್ಟೇ ಸಾಕಿತ್ತು ನೋಡಿ ಎಲ್ಲರ ಕಣ್ಣಲ್ಲಿ ನೀರು ತರಿಸಲು. ತೆರೆಯ ಮೇಲೆ ಎಷ್ಟು ಅಚ್ಚುಕಟ್ಟಾಗಿ ಅಭಿನಯಿಸಿದ್ದ ಎಮ್ ಕೆ ಮಠ ಅವರು ಸಣ್ಣದೊಂದು ಮನೆ ಕಟ್ಟಿಸಬೇಕೆಂಬ ಆಸೆಯಿಂದ ಊರಿನಲ್ಲಿದ್ದ ತಮ್ಮ ಮನೆಯನ್ನ ಕೆ’ಡ’ವಿ ಹೊಸ ಮನೆ ಕಟ್ಟಲು ಆರಂಭಿಸಿದ್ದರು..

Advertisements

ಆದರೆ ಈಗಾಗಲೇ ಅಭಿನಯಿಸಿದ ಚಿತ್ರದ ನಿರ್ಮಾಪಕರು ಎಮ್ ಕೆ ಮಠ ಅವರಿಗೆ ಹಣವನ್ನ ನೀಡಲು ನಿರಾಕರಿಸಿದರು. ಈಗೆ ಇದ್ದ ಮನೆಯನ್ನ ಕೆ’ಡ’ವಿ ಪ್ಲಾಸ್ಟಿಕ್ ಗುಡಿಸಲಿನಲ್ಲಿ ವಾಸಮಾಡುವಂತಹ ಪರಿಸ್ಥಿತಿಗೆ ಬಂದಿದ್ದ ಎಮ್ ಕೆ ಮಠ ಅವರಿಗೆ ನೆನಪಾದದ್ದು ಪುನೀತ್ ರಾಜ್‍ಕುಮಾರ್.. ಹೇಗಿದ್ರೂ ಯುವರತ್ನ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭವದು. ಈಗಾಗಿ ಬಿಡುವಿನ ಸಮಯದಲ್ಲಿ ಅಪ್ಪು ಅವರ ಜೊತೆ ತಮ್ಮ ಕಷ್ಟವನ್ನ ಎಮ್ ಕೆ ಮಠ ಅವರು ತೋಡಿಕೊಂಡಿದ್ದಾರೆ..

ಎಮ್ ಕೆ ಮಠ ಅವರ ಈ ಕಷ್ಟವನ್ನ ಕೇಳಿದ ಪುನೀತ್ ರಾಜ್‍ಕುಮಾರ್ ಅವರು ಮನೆ ಅರ್ಧಕ್ಕೆ ನಿಂತಿರುವ ಕೆಲಸವನ್ನ ಸಂಪೂರ್ಣ ಗೊಳಿಸುವುದಾಗಿ ಎಮ್‌ಕೆ ಮಠ ಅವರಿಗೆ ಭರವಸೆ ನೀಡಿದರು. ಪುನೀತ್ ಅವರ ಈ ಭರವಸೆಯ ಮಾತುಗಳನ್ನ ಎಮ್ ಕೆ ಮಠ ಅವರು ಇತ್ತೀಚೆಗಷ್ಟೇ ಸಂದರ್ಶನದಲ್ಲಿ ಹಂಚಿಕೊಂಡಿದ್ದು ಪುನೀತ್ ಮಾಡಿದ ಸಹಾಯ ನೆನೆದು ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು.. ಎಷ್ಟೇ ಆದರೂ ಅಣ್ಣಾವ್ರ ಮಗ ಅಲ್ಲವೇ, ಸುತ್ತಮುತ್ತಲಿನವರು ಕಷ್ಟ ಅಂದರೆ ಸಾಕು ಕೊಡುವ ಕೈ ಮುಂದೆ ಬಂದು ಬಿಡುತ್ತದೆ.