Advertisements

ಅಲ್ಲು ಅರ್ಜುನ್ ರವರ ಪುಷ್ಪ ಸಿನಿಮಾ ಹೇಗಿರಲಿದೆ ಗೊತ್ತೇ! ಕುತೂಹಲ ಲೋಕಕ್ಕೆ ಕರೆದುಕೊಂಡು ಹೋಗುವಂತಿದೆ..

Cinema

ಅಲ್ಲು ಅಂದ್ರೆನೇ ದಿಲ್ಲು ಕುಣಿಯುತ್ತೆ ಅಂತಾರೆ ಫ್ಯಾನ್ಸ್. ಅಂತಹದ್ರಲ್ಲಿ ಈ ಭಾರೀ ಅಲ್ಲು ಪ್ಯಾನ್ ಇಂಡಿಯಾದಲ್ಲಿ ಸದ್ದು ಮಾಡ್ತಾಯಿದ್ದಾರೆ. ಕನ್ನಡದಲ್ಲಿ ಕೂಡ ಅಲ್ಲು ಫೇಮಸ್​.. ಈಗ ಅಲ್ಲು ಪುಷ್ಪ, ಪ್ರೇಕ್ಷಕರ ಕಣ್ಮನ ಸೆಳೆಯುತ್ತಿದೆ. ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್, ಸ್ಟಾರ್ ಡೈರೆಕ್ಟರ್ ಸುಕುಮಾರ್ ಕಾಂಬಿನೇಷನ್ ಆರ್ಯ , ಆರ್ಯ 2 ಸಿನಿಮಾದ ನಂತರ ಮತ್ತೊಮ್ಮೆ ಪುಷ್ಪ ಸಿನಿಮಾದ ಮೂಲಕ ಒಂದಾಗಿದೆ.. ಈ ಕಾಂಬೋ ಮೇಲೆ ಇಡೀ ಸೌಥ್ ಸಿನಿ ದುನಿಯಾವೇ ನಿರೀಕ್ಷೆ ಇಟ್ಕೊಂಡಿದೆ.. ಕಾರಣ ಆರ್ಯ ಮತ್ತು ಆರ್ಯ2 ಸೌತ್ ಸಿನಿ ಲೋಕದಲ್ಲಿ ಸದ್ದು ಮಾಡಿದ್ದ ಸಿನಿಮಾಗಳು.. ಈಗ ಪುಷ್ಪ ಸಿನಿಮಾ ಕೂಡ ಯೂನಿವರ್ಸೆಲ್ ಪ್ರೇಕ್ಷಕರನ್ನ ತನ್ನತ್ತ ಸೇಳೆಯುವ ಆಯಸ್ಕಾಂತವಾಗುತ್ತಿದೆ..

[widget id=”custom_html-3″]

Advertisements

ಕೆಜಿಎಫ್ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿ ಇಡೀ ಭಾರತೀಯರನ್ನ ಸೇಳೆದ ವಿಚಾರವನ್ನ ಸ್ಫೂರ್ತಿಯನ್ನಾಗಿಸಿಕೊಂಡು ಪುಷ್ಪ ಸಿನಿಮಾ ಕೂಡ ಎರಡ್ ಎರಡು ಭಾಗಗಳಲ್ಲಿ ಪ್ರೇಕ್ಷಕರನ್ನ ರಂಜಿಸಲು ಬರುತ್ತಿರೋ ಪ್ಯಾನ್ ಇಂಡಿಯಾ ಸಿನಿಮಾ.. ಪುಷ್ಪ ಅಂಗಳದಿಂದ ಹೊರ ಬರುತ್ತಿರೋ ಕಂಟೆಂಟ್​ಗಳು ಈಗಾಗಲೇ ಚಿತ್ರಪ್ರೇಮಿಗಳನ್ನ ಕುತೂಹಲದ ಲೋಕಕ್ಕೆ ಕರೆದುಕೊಂಡು ಹೋಗುತ್ತಿದೆ.. ಇದೇ ಡಿಸೆಂಬರ್ 17 ರಂದು ಬಿಡುಗಡೆಯಗಲಿರುವ ಪುಷ್ಪ ಚಿತ್ರದ ಟ್ರೈಲರ್ ಅದ್ರಲೂ ಪುಷ್ಪ ಚಿತ್ರದ ಕನ್ನಡ ಟ್ರೈಲರ್ ಈಗ ಟಾಪ್ ಟ್ರೆಂಡಿಂಗ್​​ನಲ್ಲಿದೆ. ಅಲ್ಲು ಅರ್ಜುನ್ ರ ಪುಷ್ಪ ಚಿತ್ರದ ಟ್ರೈಲರ್ ಕಳೆದ ದಿನ ಬಿಡುಗಡೆಯಾಗಿದೆ. ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದು, ಅಲ್ಲು ಅರ್ಜುನ್ ರ’ಕ್ತ ಚಂದನ ಕ’ಳ್ಳ’ಸಾಗಾಣಿಕೆ ಮಾಡುವ ಲಾರಿ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

[widget id=”custom_html-3″]

ಶ್ರೀವಲ್ಲಿಯಾಗಿ ನ್ಯಾಷನಲ್ ಕ್ರಷ್‌ ರಶ್ಮಿಕಾ ಮಂದಣ್ಣ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ನಟಿಸಿದ್ದಾರೆ. ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ರ ಗೆಟಪ್ ಬಾಡಿ ಲಾಂಗ್ವೇಜ್ ನೋಡಿದರೆ ನೈಜ ಲಾರಿ ಡ್ರೈವರ್ ನಂತೆ ಕಂಡುಬರುತ್ತಿದ್ದು, ಪ್ರತಿಯೂಂದು ಪಾತ್ರದ ಲುಕ್ ಕೂಡ ವಿಭಿನ್ನವಾಗಿ ಮೂಡಿ ಬಂದಿದೆ. ಕನ್ನಡ ಡಾಲಿ ಧನಂಜಯ ಜಾಲಿ ಅನ್ನೋ ಹೆಸರಿನ ಪಾತ್ರ ನಿರ್ವಹಿಸಿದ್ದಾರೆ. ದಾಕ್ಷಾಯಿಣಿ ಪಾತ್ರದಲ್ಲಿ ಅನಸೂಯ ಭಾರಧ್ವಾಜ್ ಅಭಿನಯಿಸುತ್ತಿದ್ದು, ಮಲಯಾಳಂ ನಟ ಫಾಹದ್ ಫಾಸಿಲ್ ಮುಖ್ಯ ಖಳ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಟಾಲಿವುಡ್ ವಿಲನ್ ಜಗಪತಿ ಬಾಬು, ಪ್ರಕಾಶ್ ರಾಜ್, ವೆನ್ನೆಲ್ಲಾ ಕಿಶೋರ್ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವಿದ್ದು. ತೆಲುಗಿನ ಆ್ಯಪಲ್ ಬ್ಯೂಟಿ ಸಮಂತಾ ಐಟಂ ಸಾಂಗ್ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

[widget id=”custom_html-3″]