Advertisements

ವಿಜಯನಗರ ಸಾಮ್ರಾಜ್ಯದ ಸ್ಥಾಪಕರು ಯಾರೆಂಬ ಪ್ರಶ್ನೆಗೆ ಈ ವಿದ್ಯಾರ್ಥಿ ಕೊಟ್ಟ ಉತ್ತರ ಏನ್ ಗೊತ್ತಾ !

Kannada Mahiti

ಸ್ನೇಹಿತರೇ, ಕೆಲ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿನ ಪ್ರಶ್ನೆಗಳಿಗೆ ಬರೆಯುವ ಉತ್ತರಗಳು ತುಂಬಾ ವಿಚಿತ್ರವಾಗಿರುತ್ತವೆ. ಇದೆ ರೀತಿ ವಿದ್ಯಾರ್ಥಿಯೊಬ್ಬ ಪ್ರಶ್ನೆಯೊಂದಕ್ಕೆ ಕೊಟ್ಟಿರುವ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೌದು, ಶ್ರೀ ಕೃಷ್ಣ ದೇವರಾಯರು ಆಳಿದ ವಿಜಯನಗರದ ಸಾಮ್ರಾಜ್ಯದ ಕುರಿತು ಪ್ರಶ್ನೆಗಳನ್ನ ಕೇಳಲಾಗಿತ್ತು. ಒಂದೇ ವಾಕ್ಯದಲ್ಲಿ ಉತ್ತರಿಸಿ ಎಂದು ಕೇಳಿದ್ದ ಆ ಪ್ರಶ್ನೆ ವಿಜಯನಗರದ ಸಂಸ್ಥಾಪಕರು ಯಾರು ಎಂದು ? ಆದರೆ ಈ ಪ್ರಶ್ನೆಗೆ ವಿದ್ಯಾರ್ಥಿ ತನ್ನ ನೋಟ್ ಬುಕ್ ನಲ್ಲಿ ಬರೆದಿರುವ ಉತ್ತರ ವೈರಲ್ ಆಗಿದೆ.

Advertisements

ಹೌದು, ವಿಜಯನಗರದ ಸ್ಥಾಪಕರು ಯಾರು ಎಂಬ ಪ್ರಶ್ನೆಗೆ ಆ ವಿದ್ಯಾರ್ಥಿ ಬರೆದಿರುವ ಉತ್ತರ ಆನಂದ್ ಸಿಂಗ್ ಎಂದು. ಇದೆ ಕಾರಣದಿಂದಲೇ ಇದು ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಅಂದ ಹಾಗೆ ಆನಂದ್ ಸಿಂಗ್ ಅವರು ವಿಜಯನಗರದ ಕ್ಷೇತ್ರದ ಶಾಸಕರಾಗಿದ್ದಾರೆ. ಜೊತೆಗೆ ಜಿಲ್ಲಾ ವಸ್ತುವಾರಿ ಸಚಿವರು ಕೂಡ ಆಗಿದ್ದಾರೆ. ಇನ್ನು ವಿದ್ಯಾರ್ಥಿ ಬರೆದಿರುವ ಉತ್ತರ ನೋಡಿ ನೆಟ್ಟಿಗರು ಫನ್ನಿಯಾಗಿ ಕಾಮೆಂಟ್ ಗಳನ್ನ ಮಾಡುತ್ತಿದ್ದಾರೆ. ವಿಜಯನಗರದ ಸ್ಥಾಪನೆ ಮಾಡಿವರು ಹಕ್ಕ ಬುಕ್ಕರು. ಸ್ನೇಹಿತರೆ ಕೇವಲ ವಿದ್ಯಾರ್ಥಿಗಳು ಮಾತ್ರ ತಪ್ಪು ಮಾಡುವುದಿಲ್ಲ. ಪ್ರಶ್ನೆ ಪತ್ರಿಕೆ ತಯಾರು ಮಾಡುವ ಶಾಲೆಯವರು ತಪ್ಪು ಮಾಡುತ್ತಾರೆ ಎಂಬುದಕ್ಕೆ ನಿದರ್ಶನವಿದೆ.

ಹೌದು, ಇದೆ ರೀತಿ ಕಳೆದ ವರ್ಷ ಶಾಲೆಯೊಂದು ಪ್ರಶ್ನೆಪತ್ರಿಕೆಯನ್ನ ಸಿದ್ದಪಡಿಸಿದ್ದು ಅದರಲ್ಲಿ ರೈತನ ಮಿತ್ರ ಯಾರು ಎಂಬ ಪ್ರಶ್ನೆ ಕೇಳಲಾಗಿತ್ತು. ಅದರಲ್ಲಿ ಮೂರೂ ಉತ್ತರಗಳನ್ನ ಕೊಡಲಾಗಿದ್ದು, ಅವು ಯಡಿಯೂರಪ್ಪ, ಎರೆಹುಳ, ಕುಮಾರಸ್ವಾಮಿ ಎಂಬುದಾಗಿತ್ತು. ಆಗ ಈ ಪ್ರಶ್ನೆ ಪತ್ರಿಕೆಯ ಪ್ರತಿ ಇಂಟರ್ನೆಟ್ ನಲ್ಲಿ ವೈರಲ್ ಆಗಿದ್ದು, ಆ ಶಾಲಾ ಆಡಳಿತ ಮಂಡಳಿ ವಿರುದ್ಧ ನೆಟ್ಟಿಗರು ಬೇರೆ ಬೇರೆ ರೀತಿ ಕಾಮೆಂಟ್ ಮಾಡಿದ್ದು, ಇದು ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಬಳಿಕ ಶಾಲಾ ಆಡಳಿತ ಮಂಡಳಿಯವರು ಪ್ರಶ್ನೆ ಪತ್ರಿಕೆ ಸಿದ್ದಪಡಿಸಿದ ಶಿಕ್ಷಕರನ್ನ ಕೆಲಸದಿಂದ ವಜಾ ಕೂಡ ಮಾಡಿದ್ರು. ಸ್ನೇಹಿತರೇ, ರೈತನ ಮಿತ್ರ ಯಾರು ಎಂಬ ಪ್ರಶ್ನೆಗೆ ನಿಮ್ಮ ಆಯ್ಕೆ ಯಾವುದೆಂದು ಕಾ’ಮೆಂಟ್ ಮಾಡಿ ತಿಳಿಸಿ..