Advertisements

ಬಿಸಿ ಬಿಸಿ ಟೀ ಜೊತೆ ಈ ತರ ಕಾರ ಚುರುಮುರಿ ಇದ್ರೆ ಹೇಗಿರುತ್ತೆ ಗೊತ್ತಾ? ಮಾಡೋ ವಿಧಾನ ಹೇಗೆ ನೋಡಿ

Aduge

ಈಗಂತೂ ಲಾಕ್ ಡೌನ್ ಕಾಲ. ಮನೆಯಲ್ಲೇ ಇದ್ದು ಇದ್ದು ಕಾಲ ಕಳೆಯುವುದೇ ಕಷ್ಟವಾಗಿದೆ. ಇನ್ನು ಸಮಯ ಕಳೆಯಲು ಏನಾದರು ಸ್ನಾಕ್ಸ್ ತಿನ್ನುತ್ತಿರುವುದು ಹಲವರ ವಾಡಿಕೆ. ಇನ್ನು ಲಾಕ್ ಡೌನ್ ಇರುವ ಕಾರಣ ಬೇಕರಿಗಳೆಲ್ಲಾ ಈಗ ತೆರೆದಿದ್ದರೂ ನಿಮಗೆ ಬೇಕಾದ ತಿಂಡಿ ಸಿಗುತ್ತಾ ಇಲ್ಲ. ಚಾಟ್ಸ್ ಅಂಗಡಿಗಳಂತೂ ಇಲ್ಲವೇ ಇಲ್ಲ. ಅದರೆ ತುಂಬಾ ಸಿಂಪಲ್ ಆಗಿರೋ ರುಚಿಯಾದ ಕೆಲವೊಂದು  ಸ್ನಾಕ್ಸ್ ಗಳನ್ನ  ನೀವು ಮನೆಯಲ್ಲಿ ಮಾಡಿ  ತಿನ್ನಬಹುದು. ಮನೆಗೆ ಬರುವ ಗೆಸ್ಟ್ ಗಳಿಗೂ ಸಹ ಕೊಡಬಹುದು. ಈಗ ನಾವು ಇಲ್ಲಿ ಹೇಳುವ ಸಿಂಪಲ್ ಆದ ಕಾರ ಚುರುಮುರಿಯನ್ನ ಮನೆಯಲ್ಲೆ ಮಾಡಬಹುದು. ಈ ಸ್ನಾಕ್ಸ್ ನ್ನ ಸಾಯಂಕಾಲದ ಟೀ ಜೊತೆಗೆ ಕೂಡ ಮನೆ ಮಂದಿಯೆಲ್ಲಾ ಸೇವಿಸಬಹುದು.ಹಾಗಾದ್ರೆ ಕಾರ ಚುರುಮುರಿಯನ್ನುವ ರುಚಿಕರವಾದ, ಸಿಂಪಲ್ ಆದ ಈ ಸ್ನಾಕ್ಸ್ ಮಾಡೋದು ಹೇಗೆ ಅಂತ ನೋಡೋಣ ಬನ್ನಿ..

ಬೇಕಾಗುವ ಸಾಮಗ್ರಿಗಳು : ಅಚ್ಚುಕಾರದ ಪುಡಿ 1  ರಿಂದ ಒಂದು ವರೆ ಚಮಚದಷ್ಟು, ಸಕ್ಕರೆ ಪುಡಿ 3 ರಿಂದ 4  ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಬೆಳ್ಳುಳ್ಳಿ 2 ಗಡ್ಡೆ, ಸಾಸಿವೆ, ಒಂದು ಕಪ್ ಎಣ್ಣೆ, ಅರ್ಧ ಚಮಚ ಜೀರಿಗೆ, ಹಸಿಮೆಣಸಿನಕಾಯಿ 4, ಕಾಡ್ಲೆಂಬೀಜ 1 ಸ್ಪೂನ್, ಕಡಲೆಪಪ್ಪು (ಹುರಿಗಡಲೆ) 1/2 ಸ್ಪೂನ್,

ಮಾಡುವ ವಿಧಾನ : ಒಂದು ಮಿಕ್ಸ್ ಬೌಲ್ ತೆಗೆದುಕೊಂಡು ಮೇಲೆ ಹೇಳಿರುವ ಪದಾರ್ಥಗಳನ್ನ ಆ ಬೌಲ್ ನಲ್ಲಿ ಹಾಕಿ  ಮಿಕ್ಸ್ ಮಾಡಿ. ಬಳಿಕ ಗ್ಯಾಸ್ ಸ್ಟವ್ ಮೇಲೆ ಪತ್ರೆ ಇಟ್ಟು, ಅದು ಬಿಸಿಯಾದ ಬಳಿಕ  ಸ್ವಲ್ಪ ಎಣ್ಣೆಯನ್ನ ಹಾಕಿ, ಅದು ಬಿಸಿಯಾದ ನಂತರ ಸಾಸಿವೆ ಹಾಕಿ, ತದನಂತರ ಎರಡು ಬೆಳ್ಳುಳ್ಳಿ ಗದ್ದೆಯನ್ನ ಸುಳಿದು, ಸ್ವಲ್ಪ ಅದನ್ನ ಜಜ್ಜಿ (ಪೂರ್ತಿಯಾಗಿ ಸುಳಿಯಬಾರದು) ಎಣ್ಣೆಯಲ್ಲಿ ಹಾಕಿ. ಬಳಿಕ ಅರ್ಧ ಚಮಚ ಜೀರಿಗೆ ಹಾಕಿ, ನಂತರ 4 ಹಸಿಮೆಣಸಿನಕಾಯಿಗಳನ್ನ ಉದ್ದುದ್ದಕ್ಕೆ ಸೀಳಿ ಹಾಕಿ, ಸ್ವಲ್ಪ ಕರಿಬೇವು ಬಳಿಕ, ಒಂದು ಚಮಚ ಶೇಂಗಾ ಬೀಜ, ಅದರ ಜೊತೆಗೆ ಒಂದು ವರೆ ಚಮಚ ಹುರಿಗಡಲೆ, ಇದೆಲ್ಲವನ್ನ ಎಣ್ಣೆಯಲ್ಲಿ ಫ್ರೈ ಮಾಡಿ. ಮುಂದೆ ಏನು ಮಾಡಬೇಕು ತಿಳಿಯಲು ಮೇಲಿರುವ ವಿಡಿಯೋ ಮೇಲೆ ಕ್ಲಿಕ್ ಮಾಡಿ