Advertisements

ಕನ್ನಡದ ನಂಬರ್ ಒನ್ ನಟಿ ರಚಿತಾ ರಾಮ್ ಕಷ್ಟಪಟ್ಟು ದುಡಿದು ಕಟ್ಟಿಸಿರುವ ಮನೆ ಹೇಗಿದೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಸಧ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ನಂಬರ್ ಒನ್ ನಟಿಯಾಗಿ ಮಿಂಚುತ್ತಿರುವ ರಚಿತಾ ರಾಮ್ ಅವರು ಕನ್ನಡದ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ಅಭಿನಯಿಸಿದ್ದಾರೆ.. ರಚಿತಾ ರಾಮ್ ಅವರು ತಮ್ಮ ಶಾಲಾ ದಿನಗಳಿಂದಲೂ ಡ್ಯಾನ್ಸ್ ತರಬೇತಿಯನ್ನ ಪಡೆಯುತ್ತಿದ್ದರು. ಇದಾದ ನಂತರ ಸಾಕಷ್ಟು ಕಡೆ ಡ್ಯಾನ್ಸ್ ಶೋಗಳಲ್ಲಿ ಭಾಗಿಯಾಗಿ ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದ್ದಾರೆ.. ಇವರು ಕನ್ನಡ ಕಿರುತೆರೆಯ ಅರಸಿ ಎನ್ನುವ ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅರಸಿ ಧಾರವಾಹಿಯಲ್ಲಿ ಇವರ ಅಭಿನಯವನ್ನ ನೋಡಿ ದರ್ಶನ್ ನಟನೆಯ ಬುಲ್ ಬುಲ್ ಚಿತ್ರಕ್ಕೆ ಆಯ್ಕೆ ಮಾಡುತ್ತಾರೆ..

Advertisements

ಮೂಲತಃ ಚಿಕ್ಕಮಗಳೂರಿನವರಾದ ರಚಿತಾ ರಾಮ್ ಅವರು ಸಧ್ಯಕ್ಕೆ ಈಗ ಇಡೀ ಕುಟುಂಬದ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ರಚಿತಾ ರಾಮ್ ಅವರು ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಆರಂಭದಲ್ಲೇ ದೊಡ್ಡ ಮಟ್ಟದ ಯಶಸ್ಸನ್ನ ಪಡೆದರು. ಇದಾದ ನಂತರ ಸುದೀಪ್, ಪುನೀತ್, ಗಣೇಶ್, ಉಪೇಂದ್ರ, ಧ್ರುವಸರ್ಜಾ ಸೇರಿದಂತೆ ಬಹುತೇಕ ಎಲ್ಲಾ ಸ್ಟಾರ್ ನಟರ ಚಿತ್ರಗಳಲ್ಲಿ ನಟಿಸಿ ನಂಬರ್ ಒನ್ ನಟಿಯಾಗಿ ಮಿಂಚುತ್ತಿದ್ದಾರೆ.. ಸಧ್ಯಕ್ಕೆ ರಚಿತಾ ರಾಮ್ ಅವರ ಕೈಯಲ್ಲಿ ಸುಮಾರು ಏಳೆಂಟು ಚಿತ್ರಗಳಿವೆ. ಅಷ್ಟೇ ಅಲ್ಲದೇ ತೆಲುಗು ಚಿತ್ರರಂಗದಲ್ಲೂ ಕೂಡ ಮಿಂಚಲು ಸಜ್ಜಾಗಿದ್ದಾರೆ.

ಈಗಾಗಲೇ ಒಂದು ತೆಲುಗು ಚಿತ್ರದ ಶೂಟಿಂಗ್ ಕೂಡ ಪೂರ್ತಿಯಾಗಿದ್ದು.. ಬಿಡುಗಡೆಗೆ ತಯಾರಾಗಿದೆ. ಇನ್ನೂ ಕಳೆದ ವರ್ಷ ರಚಿತಾ ರಾಮ್ ಅವರ ಅಕ್ಕ ನಿತ್ಯಾರಾಮ್ ಅವರ ಮದುವೆ ಅದ್ದೂರಿಯಾಗಿ ನಡೆದಿತ್ತು.. ಸಧ್ಯಕ್ಕೆ ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿರುವ ರಚಿತಾ ರಾಮ್ ಅವರು ಯಾವಾಗ ಮದುವೆ ಆಗ್ತಾರೆ ಎಂದು ಕಾದು ನೋಡಬೇಕು. ಇನ್ನೂ ರಚಿತಾ ರಾಮ್ ಅವರು ಕಷ್ಟಪಟ್ಟು ದುಡಿದಿರುವ ಮನೆ ಇದೆ ನೋಡಿ.. ಚಿಕ್ಕಮಗಳೂರಿನಲ್ಲಿದ್ದ ರಚಿತಾ ರಾಮ್ ಅವರು ಬೆಂಗಳೂರಿಗೆ ಬಂದು ಸಿನಿಮಾ ರಂಗದಲ್ಲಿ ಸ್ವಲ್ಪ ಮಟ್ಟಿಗೆ ಹೆಸರು ಮಾಡಿದ ನಂತರ ಈ ಮನೆಯನ್ನು ಕಟ್ಟಿಸಿದ್ದಾರೆ.