Advertisements

ಒಂದು ದಿನಕ್ಕೆ ರಾಧಾಕೃಷ್ಣ ಧಾರಾವಾಹಿಯ ಕೃಷ್ಣ ರಾಧೆ ಪಡೆದುಕೊಳ್ಳುವ ಸಂಭಾವನೆ ಕೇಳಿದ್ರೆ ಅಚ್ಚರಿ ಪಡ್ತೀರಾ !

Entertainment

ಸ್ನೇಹಿತರೇ, ಲಾಕ್ ಡೌನ್ ಘೋಷಣೆಯಾದ ಸಂದರ್ಭದಲ್ಲಿ ಸೋಂಕು ಹರಡುವ ಕಾರಣದಿಂದ ಸಿನಿಮಾ ಸೇರಿದಂತೆ ಧಾರಾವಾಹಿಗಳ ಚಿತ್ರೀಕರಣವನ್ನ ಕೂಡ ಸ್ಥಗಿತ ಮಾಡಲಾಗಿತ್ತು. ಇದೆ ವೇಳೆ ಹಿಂದಿಯ ಕೆಲ ಪೌರಾಣಿಕ ಧಾರಾವಾಹಿಗಳನ್ನ ಕನ್ನಡಕ್ಕೆ ಡಬ್ ಮಾಡಿ ಕಿರುತೆರೆಯಲ್ಲಿ ಪ್ರಸಾರ ಮಾಡಲಾಯಿತು. ಇವುಗಳಲ್ಲಿ ಪ್ರಮುಖವಾದವು ಮಹಾಭಾರತ ಮತ್ತು ರಾಧಾಕೃಷ್ಣ ಧಾರಾವಾಹಿಗಳು. ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಮಹಾಭಾರತವಂತೂ ಸೂಪರ್ ಹಿಟ್ ಆಯಿತು. ಅದರ ಬಳಿಕ ಪ್ರಸಾರವಾಗುತ್ತಿರುವ ರಾಧಾ ಕೃಷ್ಣ ಸೀರಿಯಲ್ ಕೂಡ ಸಿಕ್ಕಾಪಟ್ಟೆ ಹಿಟ್ ಆಗಿದೆ. ಇನ್ನು ರಾಧಾ ಕೃಷ್ಣ ಧಾರಾವಾಹಿಯನ್ನ ತುಂಬಾ ಚೆನ್ನಾಗಿ ಕನ್ನಡಕ್ಕೆ ಡಬ್ ಮಾಡಲಾಗಿದ್ದು ಇದು ಹಿಂದಿಯ ಸೀರಿಯಲ್ ಅಂತ ಹೇಳೋದಕ್ಕೆ ಆಗೋದಿಲ್ಲ.

Advertisements

ಹೌದು, ರಾಧಾ ಕೃಷ್ಣ ಪಾತ್ರಗಳಿಗೆ ಕೊಟ್ಟಿರುವ ಕನ್ನಡದ್ ಧ್ವನಿ ತುಂಬಾ ಚೆನ್ನಾಗಿಯೇ ಮೂಡಿ ಬಂದಿದೆ. ಇನ್ನು ರಾಧಾ ಕೃಷ್ಣ ಪಾತ್ರಗಳಲ್ಲಿ ಮಿಂಚಿರುವ ಪಾತ್ರಗಳು ಕೂಡ ತುಂಬಾ ಅದ್ಭುತವಾಗಿ ಮೂಡಿಬಂದಿವೆ. ಇನ್ನು ವಾಸದೇವ ಕೃಷ್ಣನ ಮನಮೋಹಕ ಪಾತ್ರದಲ್ಲಿ ನಟ ಸುಮೇದ್ ಮುದ್ಗಲ್ಕರ್ ನಟಿಸಿದ್ದು, ರಾಧೆಯ ಪಾತ್ರದಲ್ಲಿ ಮಲ್ಲಿಕಾ ಸಿಂಗ್ ಅದ್ಭುತವಾಗಿ ಅಭಿನಯಿಸಿದ್ದಾರೆ. ಇನ್ನು ಜಮ್ಮು ಕಾಶ್ಮೀರ ಮೂಲದವರಾದ ನಟಿ ಮಲ್ಲಿಕಾ ಸಿಂಗ್ ಹತ್ತನೇ ತರಗತಿಯಲ್ಲಿ ಓದುತ್ತಿರುವಾಗಲೇ ಆಡಿಷನ್ ನೀಡುತ್ತಿದ್ದರಂತೆ. ಇವರ ತಾಯಿ ಕೊರಿಯೋಗ್ರಾಫರ್ ಆಗಿದ್ದು ಅಮ್ಮನ ಒತ್ತಾಯದ ಸಲುವಾಗಿ ನಟನೆಗೆ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ. ಕೃಷ್ಣನ ಪ್ರೇಮಿಯಾಗಿ ರಾಧೆಯ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಮಲ್ಲಿಕಾ ಸಿಂಗ್ ಗೆ ಇನ್ನು ಕೇವಲ 20 ವರ್ಷ ಎಂದರೆ ನಿಮಗೆ ಅಚ್ಚರಿಯಾಗುತ್ತೆ.

ಇನ್ನು ರಾಧಾ ಕೃಷ್ಣದಲ್ಲಿನ ಸುಮೇದ್ ಮುದ್ಗಲ್ಕರ್ ಮತ್ತು ಮಲ್ಲಿಕಾ ಸಿಂಗ್ ಜೋಡಿಯ ಕೆಮಿಸ್ಟ್ರಿ ಚೆನ್ನಾಗಿಯೇ ಇಷ್ಟಪಟ್ಟಿರುವ ಜನರು ಇವರಿಬ್ಬರ ಮಧ್ಯೆ ಏನೋ ಇದೆ ಎಂಬುದರ ಬಗ್ಗೆ ಸಾಕಷ್ಟು ಸುದ್ದಿಯಾಗಿದೆ. ಇನ್ನು ರಾಧಾ ಕೃಷ್ಣ ಸೀರಿಯಲ್ ನಲ್ಲಿ ಇವರಿಬ್ಬರು ಪಡೆಯುತ್ತಿರುವ ಸಂಭಾವನೆ ವಿಚಾರ ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಹೌದು,ತಮ್ಮ ಮೊದಲ ಧಾರವಾಹಿ ರಾಧಾ ಕೃಷ್ಣದ ರಾಧೆಯ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಮಲ್ಲಿಕಾ ಸಿಂಗ್ ಒಂದು ದಿನಕ್ಕೆ ಪಡೆಯೋ ಸಂಭಾವನೆ ಕೇಳಿದ್ರೆ ನಿಮಗೆ ಅಚ್ಚರಿಯಾಗುತ್ತೆ..ಇವರು ದಿನವೊಂದಕ್ಕೆ ಪಡೆಯುತ್ತಿರುವ ಸಂಭಾವನೆ 2.25ಲಕ್ಷ ರೂಗಳು .. ಇನ್ನು ಕೃಷ್ಣನಾಗಿ ಎಲ್ಲರ ಗಮನ ಸೆಳೆದಿರುವ ನಟ ಸುಮೇದ್ ಮುದ್ಗಲ್ಕರ್ ಒಂದು ದಿನಕ್ಕೆ 2.75 ಲಕ್ಷ ರೂ ಸಂಭಾವನೆ ಪಡೆಯುವ ಮೂಲಕ ರಾಧಾ ಕೃಷ್ಣ ಧಾರಾವಾಹಿಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಎನಿಸಿಕೊಂಡಿದ್ದಾರೆ.