ಲಾಕ್ ಡೌನ್ ಆದ ಕಾರಣ ಶೂಟಿಂಗ್ ನಿಂತುಹೋಗಿದ್ದು, ಕಿರುತೆರೆ ವಾಹಿನಿಗಳಲ್ಲಿ ರಾಮಾಯಣ, ಮಹಾಭಾರತ ದಂತಹ ಪೌರಾಣಿಕ ಸೀರಿಯಲ್ ಗಳನ್ನ ಪ್ರಸಾರ ಮಾಡಲಾಗುತ್ತಿದೆ. ಇನ್ನು ಹಿಂದಿಯಲ್ಲಿ ಪ್ರಸಾರವಾದ 80ರ ದಶಕದ ರಾಮಾಯಣ ಧಾರವಾಹಿ ಯಾರೂ ಊಹಿಸದಂತಹ ರೇಟಿಂಗ್ಸ್ ಪಡೆದುಕೊಂಡಿತ್ತು. ಈಗ ಹಿಂದಿಯ ಮಹಾಭಾರತ ಮತ್ತು ರಾಧಾ ಕೃಷ್ಣ ಧಾರಾವಾಹಿಗಳು ಡಬ್ ಆಗಿ ಕನ್ನಡದಲ್ಲಿ ಪ್ರಸಾರವಾಗುತ್ತಿವೆ. ಇನ್ನು ರಾಧಾ ಕೃಷ್ಣ ಸೀರಿಯಲ್ ಫೇಮಸ್ ಆಗಿದ್ದು, ಕೃಷ್ಣ ಮಾತು ರಾಧಾ ಪಾತ್ರಗಳಂತೂ ಜನರನ್ನ ಮೋಡಿ ಮಾಡಿವೆ.

ತುಂಬಾ ಕಡಿಮೆ ಸಮಯದಲ್ಲಿ ಜನರ ಮನಸನ್ನ ಸೆಳೆದಿರುವ ಕೃಷ್ಣನ ಪಾತ್ರದಲ್ಲಿ ಸುಮೆದ್ ಮುದ್ಗಲ್ಕರ್ ಅಭಿನಯಿಸಿದ್ದರೆ, ರಾಧೆಯ ಪಾತ್ರದಲ್ಲಿ ಮಲ್ಲಿಕಾ ಸಿಂಗ್ ಎನ್ನುವವರು ಮಿಂಚಿದ್ದಾರೆ. ಇನ್ನು ಸುಮೇದ್ ನಟನಾಗುವದಕ್ಕೆ ಮೊದಲು ಡಾನ್ಸ್ ಇಂಡಿಯಾ ಡಾನ್ಸ್ 4 ರ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದು, ಸಿಂಗಲ್ ಬೀಟ್ ಕೂಡ ಮಿಸ್ ಮಾಡದೆ ಡ್ಯಾನ್ಸ್ ಮಾಡುತ್ತಿದ್ದರಂತೆ. ಹಾಗಾಗಿ ಇವರಿಗೆ ಬೀಟ್ಕಿಂಗ್ ಸುಮೇಧ್ ಎಂತಲೂ ಕರೆಯುತ್ತಾರೆ.
ಇನ್ನು ಸುಮೇದ್ ನಟಿಸಿರುವ ಶ್ರೀ ಕೃಷ್ಣನ ಪಾತ್ರ ಎಷ್ಟರ ಮಟ್ಟಿಗೆ ಜನರ ಗಮನ ಸೆಳೆದಿದೆಯೆಂದರೆ, ಈ ನಟನನ್ನ ಭೇಟಿ ಮಾಡುವ ಸಲುವಾಗಿ ಲಂಡನ್ ನಿಂದ ೬೦ ವರ್ಷದ ಇಬ್ಬರು ಮಹಿಳೆಯರು ನೇರ ಧಾರವಾಹಿ ಸೆಟ್ ಗೆ ಬಂದಿದ್ದರಂತೆ. ಅಷ್ಟರಮಟ್ಟಿಗೆ ವೀಕ್ಷಕರಲ್ಲಿ ಮೋಡಿ ಮಾಡಿದ್ದಾನೆ ಸುಮೇದ್. ಕೇವಲ ೧೫ನೇ ವಯಸ್ಸಿಗೆ ಬಣ್ಣದ ರಂಗಕ್ಕೆ ಕಾಲಿಟ್ಟ ಸುಮೇದ್ ಈಗಿನ ವಾಯಸ್ಸು ೨೩. ಇನ್ನು ಪೌರಾಣಿಕ ಪಾತ್ರಗಳಿಗೆ ಜೀವ ತುಂಬಿ ನಟಿಸುವ ಸುಮೇದ್ ಇದಕ್ಕೆ ಮೊದಲು ಚಕ್ರವರ್ತಿ ಅಶೋಕ ಸಾಮ್ರಾಟ ಎಂಬ ಐತಿಹಾಸಿಕ ಧಾರಾವಾಹಿಯಲ್ಲಿ ಕೂಡ ಅಭಿನಯಿಸಿದ್ದಾನೆ.

ಇನ್ನು ಮರಾಠಿ ಚಿತ್ರಗಳಲ್ಲೂ ಕೂಡ ತನ್ನ ನಟನೆಯನ್ನ ತೋರಿರುವ ಸುಮೇದ್ ಗೆಗಾಸಿಪ್ ಗಳಿಗೇನು ಕಡಿಮೆ ಇಲ್ಲ. ಹೌದು, ರಾಧೆಯ ಪಾತ್ರದಾರಿ ಮಲ್ಲಿಕಾ ಸಿಂಗ್ ಮತ್ತು ಸುಮೇದ್ ಅವರಿಗೆ ಇದು ವರ್ಷಗಳಿಂದ ಪರಿಚಯವಿದೆ. ಇನ್ನು ಇವರಿಬ್ಬರ ಕೆಮಿಸ್ಟ್ರಿ ನೋಡಿ, ನಿಜಜೀವನದಲ್ಲಿ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಗಾಸಿಪ್ ಗಳು ತುಂಬಾ ಹಬ್ಬಿದ್ದವು. ಆದರೆ ಇದ್ಯಾವುದು ನಿಜವಲ್ಲ ಎಂದು ಇವರು ತಿರಸ್ಕರಿಸಿದ್ದರು. ಒಟ್ಟಿನಲ್ಲಿ ರಾಧಾ ಕೃಷ್ಣಾದಲ್ಲಿ ಸುಮೇದ್ ರಿವರ ಕೃಷ್ಣನ ಪಾತ್ರವಂತೂ ತುಂಬಾ ಅದ್ಭುತವಾಗಿ ಮೂಡಿಬರುತ್ತಿದ್ದು, ದಿನದಿಂದ ದಿನಕ್ಕೆ ಅತೀ ಹೆಚ್ಚು ವೀಕ್ಷಕರ ಗಮನ ಸೆಳೆಯುತ್ತಿದೆ.