Advertisements

ರಾಧಿಕಾ ಪಂಡಿತ್ ತನ್ನ ಮಗಳಿಗಾಗಿ ಅಮೇರಿಕಾದಿಂದ ಏನನ್ನ ತರಿಸಿದ್ದಾರೆ ನೋಡಿ..

Cinema

ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಪ್ರಸ್ತುತ ಕೆಜಿಎಫ್ 2 ಸಿನಿಮಾದ ಯಶಸ್ಸಿನ ಅಲೆಯಲ್ಲಿ ಬಹಳಾನೇ ತೇಲುತ್ತಿದ್ದು ಸತತ ಎಂಟು ವರ್ಷಗಳ ಕಾಲ ಕೆಜಿಎಫ್ ಸಿನಿಮಾ ಸರಣಿಗಾಗಿ ಅವರು ಕಷ್ಟಪಟ್ಟಿದ್ದಾರೆ. ಹೌದು ಈ ಶ್ರಮದ ಪ್ರತಿಫಲ ಇದೀಗ ಬಾಕ್ಸ್ ಆಫೀಸ್‌ನಲ್ಲಿ ಕಾಣುತ್ತಿದ್ದು ಕೆಜಿಎಫ್ 2 ಸಿನಿಮಾಕ್ಕಾಗಿಯೂ ನಟ ಯಶ್ ರವರು ಬಹಳ ಕಷ್ಟಪಟ್ಟಿದ್ದರು. ಹೌದು ಸತತ ಮೂರು ವರ್ಷಕ್ಕೂ ಹೆಚ್ಚು ಸಮಯವನ್ನು ಕೆಜಿಎಫ್‌ಗಾಗಿ ಯಶ್ ಮೀಸಲಿಟ್ಟಿದ್ದು ಈ ಅವಧಿಯಲ್ಲಿ ಕುಟುಂಬಕ್ಕೆ ಹೆಚ್ಚು ಸಮಯ ನೀಡಲು ಅವರಿಗೆ ಸಾಧ್ಯವಾಗಿರಲಿಲ್ಲ. ಕೋವಿಡ್ ಸಮಯದಲ್ಲಿ ಶೂಟಿಂಗ್ ಮಾಡುವಾಗಂತೂ ಮನೆಗೇ ಹೋಗಿರಲಿಲ್ಲವಂತೆ ನಟ ಯಶ್.ಆದರೆ ಇದೀಗ ಎಲ್ಲವೂ ಕೂಡ ಮುಗಿದು ಹೋಗಿದ್ದು ಕೆಜಿಎಫ್ 2 ಬಹಳ ದೊಡ್ಡ ಯಶಸ್ಸು ಗಳಿಸಿದೆ. ಹಾಗಾಗಿ ಈಗ ಕುಟುಂಬದ ಜೊತೆಗೆ ಜಾಲಿ ಸಮಯ ಕಳೆಯುತ್ತಿದ್ದಾರೆ ಯಶ್. ಹೌದು ಕೆಜಿಎಫ್ 2 ಸಿನಿಮಾ ಯಶಸ್ಸಾಗಿದೆ ಎಂಬ ಸುದ್ದಿ ಬರುತ್ತಿದ್ದ ಹಾಗೆಯೇ ಯಶ್ ಪತ್ನಿ ರಾಧಿಕಾ ಹಾಗೂ ಇಬ್ಬರು ಮಕ್ಕಳನ್ನು ಕರೆದುಕೊಂಡು ವೆಕೇಶನ್‌ಗೆ ತೆರಳಿದ್ದು

ಯಶ್ ರಾಧಿಕಾ ಹಾಗೂ ಮಕ್ಕಳು ಗೋವಾದ ಖಾಸಗಿ ಬೀಚ್‌ನಲ್ಲಿ ಆಟವಾಡಿ ಆಪ್ತವಾಗಿ ಸಮಯ ಕಳೆದಿದ್ದು ರಾಧಿಕಾ ರವರಿಗೆ ಗೋವಾ ಎಂದರೆ ಬಹಳ ಇಷ್ಟ. ಹೌದು ರಾಧಿಕಾ ಪಂಡಿಂತ್ ರವರ ಸಂಬಂಧಿಗಳು ಗೋವಾದಲ್ಲಿ ಇದ್ದಾರೆ. ಇನ್ನು ರಾಧಿಕಾರ ಅಜ್ಜಿ ಮನೆ ಕೂಡ ಗೋವಾದಲ್ಲಿಯೇ ಇದೆ.ಹೌದು ಯಶ್-ರಾಧಿಕಾ ಇಬ್ಬರಿಗೂ ಬೀಚ್‌ಗಳೆಂದರೆ ಬಹಳ ಇಷ್ಟ. ಇಬ್ಬರೂ ವಿವಾಹದ ಹೊಸತರಲ್ಲಿಯೂ ಕೂಡ ಬೀಚ್‌ ಇರುವ ಪ್ರದೇಶಕ್ಕೆ ಹನಿಮೂನ್‌ಗೆ ತೆರಳಿದ್ದರು. ಬಳಿಕ 2021 ರಲ್ಲಿ ಸುಂದರ ಬೀಚ್‌ಗಳಿಗೆ ಹೆಸರುವಾಸಿಯಾಗಿರುವ ಮಾಲ್ಡೀವ್ಸ್‌ಗೆ ಹೋಗಿದ್ದು ಈಗ ಮತ್ತೆ ಬೀಚ್‌ಗೆ ಹೋಗಿದ್ದಾರೆ.ಯಶ್ ಮತ್ತು ರಾಧಿಕಾ ಪಂಡಿತ್ ಸದ್ಯ ಇದೀಗ ಪ್ರವಾಸ ಮುಗಿಸಿ ವಾಪಸ್ಸಾಗಿದ್ದು ಗೋವಾದ ವಿಮಾನ ನಿಲ್ದಾಣದಲ್ಲಿ ಮಕ್ಕಳೊಂದಿಗೆ ಯಶ್-ರಾಧಿಕಾ ಕಾಣಿಸಿಕೊಂಡಿದ್ದಾರೆ. ಹೌದು ಕುಟುಂಬವು ರಜೆಯ ಮಜೆ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗಿದೆ ಎನ್ನಲಾಗುತ್ತಿದ್ದು ಸಿನಿಮಾ ಬಿಡುಗಡೆ ಆದ ಕೂಡಲೆ ಕುಟುಂಬದ ಜೊತೆ ಕಾಲ ಕಳೆಯುತ್ತಿರುವ ಯಶ್‌ರನ್ನು ನೋಡಿ ಅಭಿಮಾನಿಗಳು ಯಶ್ ಪಕ್ಕಾ ಫ್ಯಾಮಿಲಿ ಮ್ಯಾನ್ ಎಂದು ಕೊಂಡಾಡಿದ್ದಾರೆ.

ಹೌದು ಇದು ನಿಜವೂ ಹೌದು. ತಾವೊಬ್ಬ ಪಕ್ಕಾ ಫ್ಯಾಮಿಲಿ ಮ್ಯಾನ್ ಎಂಬುದನ್ನು ಹಲವು ಬಾರಿ ಪ್ರೂವ್ ಮಾಡಿದ್ದಾರೆ ಯಶ್. ಇನ್ನು ಕೆಜಿಎಫ್ 2 ಸಿನಿಮಾದ ಪ್ರಚಾರದಿಂದ ಬಿಡುವು ಪಡೆದು ಕುಟುಂಬದ ಜೊತೆ ಯುಗಾದಿ ಆಚರಿಸಿದ್ದರು. ಡೈಯೆಟ್ ಎಲ್ಲ ಬದಿಗಿಟ್ಟು ಬಾಳೆ ಎಲೆಯ ಮುಂದೆ ಕೂತು ಕುಟುಂಬದವರೆಲ್ಲ ಒಟ್ಟಿಗೆ ಸೇರಿ ಹೋಳಿಗೆ ಊಟ ಮಾಡಿ ಸಂಭ್ರಮಿಸಿದ್ದರು.ಇನ್ನು ಐರಾ ಯಥರ್ವ್ ಓದುವುದರಲ್ಲೂ ಮುಂದೆ ಇದ್ದು ಮಕ್ಕಾಳಿಗಾಗಿ ಅಮೇರಿಕಾದಿಂದ ಪಾಠೋಪಕರಣ ಮತ್ತು ಪುಸ್ತಕಗಳನ್ನು ತರಿಸಿದ್ದಾರೆ ರಾಧಿಕಾ. ಯಶ್ ಹಾಗೂ ರಾಧಿಕಾ ಪಂಡಿತ್ ಬಹಳ ವರ್ಷಗಳಿಂದಲೂ ಗೆಳೆಯರಾಗಿದ್ದು ಇಬ್ಬರು ಒಟ್ಟಗೆ ಧಾರಾವಾಹಿಯಲ್ಲಿ ನಟಿಸಿದ್ದರು. ಸಿನಿಮಾಕ್ಕೆ ಕಾಲಿಟ್ಟಿದ್ದು ಸಹ ಒಟ್ಟಿಗೆ. ಯಶ್ ಹಾಗೂ ರಾಧಿಕಾ 2016 ರ ಡಿಸೆಂಬರ್ ನಲ್ಲಿ ಅದ್ಧೂರಿಯಾಗಿ ವಿವಾಹವಾದರು. ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಈ ಇಬ್ಬರೂ ಒಟ್ಟಿಗೆ ಈವರೆಗೆ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ.