ಆಧiನಿಕ ಯುಗದಲ್ಲಿ ನೈಸರ್ಗಿಕವಾದ ಕೃಷಿ ಪದ್ಧತಿ ಉಪಯೋಗಿಸಿ ಸಕ್ಸಸ್ ಕಂಡಂತಹ ಶ್ರಮಜೀವಿ ರೈತನೋರ್ವನ ಸಕ್ಸಸ್ ಕಥೆಯಿದು. ಈ ಫೋಟೊದಲ್ಲಿ ನೋಡ್ತಿದ್ದೀರಲ್ಲ ಈತನ ಹೆಸರೇ ರಾಘವ್, ಮೂಲತಃ ದಾವಣಗೆರೆಯ ಮಲ್ಲನಾಯಕನಹಳ್ಳಿಯವನಾದ ಈತ ಎಂಬಿಎ ಓದಿಕೊಂಡಿದ್ದ. ಎಂಬಿಎ ಮುಗಿಸಿದ ಬಳಿಕ ಮಗ ಕಂಪನಿಯೊಂದರಲ್ಲಿ ಕೆಲಸ ಮಾಡ್ತಾನೆ ಸಾಕಷ್ಟು ಹಣ ಗಳಿಸ್ತಾನೆ ಅಂದುಕೊಂಡಿದ್ದ ಲೆಕ್ಕಾಚಾರವನ್ನು ಉಲ್ಟಾ ಮಾಡಿದ ಸರಳ ವ್ಯಕ್ತಿತ್ವವೇ ಈ ರಾಘವ್, ಓದಿ ಮಗಿದ ಬಳಿಕ ಊರಿಗೆ ಬಂದು ತನ್ನ ತಂದೆಯ ಬಳಿಯಿದ್ದ 21 ಎಕರೆ ಜಮೀನಿನಲ್ಲಿ ನ್ಯಾಚುರಲ್ ಕೃಷಿ ಮಾಡ್ತೇನೆ ಅಂತ ತನ್ನ ಪ್ಲಾನ್ ತಿಳಿಸಿದ, ಆದರೆ ಈತನ ಯೋಜನೆ ಎಕ್ಸಿಕ್ಯೂಟ್ ಆಗೋದು ಅಷ್ಟು ಸುಲಭವಾಗಿರಲಿಲ್ಲ. ಯಾಕಂದ್ರೆ ರಾಘವ್ ಅಂದುಕೊಂಡಿದ್ದು ಯಾವುದೇ ಕೆಮಿಕಲ್ಸ್ ಬಳಸದೇ ನ್ಯಾಚುರಲ್ ಆಗಿ ಕೃಷಿ ಮಾಡಬೇಕು ಅಂತ, ಇದು ಈಗಿನ ಕಾಲದಲ್ಲಿ ಕಷ್ಟದ ಮಾತೇ ಆಗಿತ್ತು.
[widget id=”custom_html-3″]

ಆದರೂ ಛಲ ಬಿಡದ ರಾಘವ್ ಅಂದುಕೊಂಡಂತೆ ಮೊದಲಿಗೆ ತನ್ನ ಜಮೀನನ್ನು ಅರಣ್ಯ ಪ್ರದೇಶವನ್ನಾಗಿ ಮಾಡ್ತಾನೆ, ಹಿಂದೆಲ್ಲಾ ಹೇಗೆ ಆದಿಮಾನವ ಯಾವುದೇ ಗೊಬ್ಬರ ಹಾಕದೇ, ಕಳೆತೆಗೆಯದೇ ಫಸಲು ತಿನ್ನುವುತ್ತಿದ್ದನೋ ಅದೇ ರೀತಿಯ ಅರಣ್ಯ ಪ್ರದೇಶವನ್ನಾಗಿ ತನ್ನ ಜಮೀನನ್ನು ಕನ್ವರ್ಟ್ ಮಾಡುತ್ತಾನೆ, ಇದಕ್ಕೆ ಮಣ್ಣಿನ ಫಲವತ್ತತೆ ಸಹ ಮಾಡಿಕೊಳ್ತಾನೆ, ನಂತರ ಸಂಗ್ರಹಿಸಿಟ್ಟುಕೊಂಡಿದ್ದ ಹತ್ತಾರು ಬಗೆಯ ಹಣ್ಣಿನ ಬೀಜಗಳನ್ನು ಜಮೀನಿನಲ್ಲಿ ಬಿತ್ತನೆ ಮಾಡ್ತಾನೆ, ಇದಕ್ಕೆ ಯಾವುದೇ ರೀತಿಯ ಗೊಬ್ಬರ ಹಾಕದೇ ನೈಸರ್ಗಿಕವಾಗಿ ಹೇಗೆ ಹಣ್ಣು ಬಿಡುತ್ತೋ ಅದೇ ರೀತಿಯಲ್ಲಿ ಹಣ್ಣು ಬಿಟ್ಟಿದೆ, ಹೀಗೆ ಮಾವಿನಕಾಯಿ, ನೇರಳೆ, ಪಪ್ಪಾಯ, ಹಲಸಿನಹಣ್ಣು, ಸೀತಾಫಲ, ಚಿಕ್ಕು ಸೇರಿ ಸಾಕಷ್ಟು ಹಣ್ಣುಗಳನ್ನು ತನ್ನ ಜಮೀನಿನಲ್ಲಿ ಬೆಳೆದಿದ್ದಾನೆ. ಮಾರುಕಟ್ಟೆಯಲ್ಲಿಯೂ ಸಹ ಈತ ಬೆಳೆದ ಬೆಳೆಗೆ ಅತೀ ಹೆಚ್ಚು ಡಿಮ್ಯಾಂಡ್ ಇದೆ.
[widget id=”custom_html-3″]

ದುಡ್ಡಿನ ಆಸೆಗೆ ಬಿದ್ದು ಹಲವರು ಕೆ’ಮಿ’ಕಲ್ ಹಾಕಿ ಬೆಳೆಯೋವವರ ಮಧ್ಯೆಯೇ ನೈಸರ್ಗಿಕವಾಗಿ ಬೆಳೆ ಬೆಳೆದು ರಾಘವ್ ಸೈ ಎನಿಸಿಕೊಂಡಿದ್ದಾರೆ. ಇನ್ನು ಈತ ಭತ್ತ ಬೆಳೆಯುವ ಪರಿ ಕೇಳಿದ್ರೆ ನಿಜಕ್ಕೂ ನೀವು ಬಾಯಿ ಮೇಲೆಬೆರಳು ಇಡುತ್ತೀರಾ, ಹೌದು ಭತ್ತ ಬೆಳೆಯೋವಾಗಲೂ ಸಹ ಯಾವುದೇ ಗೊಬ್ಬರ ಹಾಕದೇ , ನಾಟಿ ಮಾಡದೇ, ಕಳೆ ತೆಗೆಯದೇ, ಬೀಜ ಸಿಂಪಡನೆ ಮಾಡುವ ಈತ ಬೆಳೆಯುವ ಭತ್ತ ಆರರಡಿ ನೋಡಿ ಸುತ್ತಮುತ್ತಲಿನ ನಿಬ್ಬರೆಗಾಗಿದ್ದಾರೆ. ಜೊತೆಗೆ ಈತನ ಬಳಿ ಬಂದು ಹೇಗಪ್ಪಾ ಇಷ್ಟೊಂದು ಭತ್ತದ ತೆನೆ ಬಂತು ಅಂತಾ ಐಡಿಯಾ ಸಹ ಕೇಳಿದ್ದಾರೆ, ಇನ್ನು ಇಷ್ಟು ಹಣ ಗಳಿಸಿದ್ರು, ಸಿಂಪಲ್ ಲಿವಿಂಗ್ ಎಂಬಂತೆ ರಾಘವ್ ತನ್ನ ಹೆಂಡತಿ, ತಂದೆ ತಾಯಿಯ ಜೊತೆ ಮಣ್ಣಿನಿಂದ ಕಟ್ಟಿಕೊಂಡ ಮನೆಯಲ್ಲಿ ವಾಸಿಸುತ್ತಿದ್ದಾರೆ, ಇನ್ನು ಇವರ ಮನೆಯಲ್ಲಿ ನೋ ಫ್ರಿಡ್ಜ್, ನೋ ಟಿವಿ ಎಂಬ ನಿಯಮವನ್ನು ಸಹ ರಾಘವ್ ರೂಪಿಸಿಕೊಂಡಿದ್ದಾರೆ.