ನಮಸ್ತೆ ಸ್ನೇಹಿತರೆ, ಎಲ್ಲರಿಗೂ ಟೈಮ್ ಅನ್ನೋದು ಬರುತ್ತದೆ. ತಮ್ಮ ಪರಿಶ್ರಮ ಹಾಗು ಪ್ರತಿಭೆಗೆ ಟೈಮ್ ಬಂದಾಗ ಆ ವ್ಯಕ್ತಿ ಜೀವನದಲ್ಲಿ ತುಂಬಾ ಎತ್ತರಕ್ಕೆ ಬೆಳೆಯುತ್ತಾನೆ.. ಒಬ್ಬ ಕಾರ್ ಡ್ರೈವರ್, ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಈಗ ಚಿತ್ರರಂಗದಲ್ಲಿ ಒಬ್ಬ ಖ್ಯಾತ ಡ್ಯಾನ್ಸ್ ಮಾಸ್ಟರ್, ಆ್ಯಕ್ಟರ್, ಡೈರೆಕ್ಟರ್ ಆಗಿ ಮೆರೆದಿದ್ದಾರೆ.. ಅವರು ರಾಘವ ಲಾರೆನ್ಸ್. ಇಂದು ರಾಘವ ಲಾರೆನ್ಸ್ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಬಹುಮುಖ ಪ್ರತಿಭೆ. ದಕ್ಷಿಣ ಭಾರತದ ಸಾಹಸ ನಿರ್ದೇಶಕರಲ್ಲಿ ಒಬ್ಬರಾಗಿದ್ದಂತಹ ಸೂಪರ್ ಸುಬ್ಬರಾಯರವರ ಕಾರು ಡ್ರೈವರ್ ಆಗಿ.. ಅವರ ಬಳಿ ರಾಘವ ಲಾರೆನ್ಸ್ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

ಇನ್ನೂ ಚಿತ್ರರಂಗದ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದ ರಾಘವ ಲಾರೆನ್ಸ್ ತಮ್ಮ ಬಿಡುವಿನ ಸಮಯದಲ್ಲಿ ಸ್ಟೇಜ್ ಗಳ ಮೇಲೆ ಡ್ಯಾನ್ಸ್ ಮಾಡುತ್ತಿದ್ದರು. ಈಗೆ ಒಂದು ದಿನ ರಾಘವ ಲಾರೆನ್ಸ್ ಅವರ ಡ್ಯಾನ್ಸ್ ಅನ್ನು ಒಂದು ಸ್ಟೇಜ್ ಮೇಲೆ ರಜನಿಕಾಂತ್ ನೋಡುತ್ತಾರೆ. ಲಾರೆನ್ಸ್ ಅವರ ಡ್ಯಾನ್ಸ್ ತುಂಬಾ ಮೆಚ್ಚಿಕೊಂಡ ರಜಿನಿ ಲಾರೆನ್ಸ್ ಅವರನ್ನು ಪ್ರಭುದೇವ ಗ್ರೂಪ್ ಗೆ ಸೇರಿಸುತ್ತಾರೆ.. ನಂತರ ಪ್ರಭುದೇವ ಅವರಿಂದ ಡ್ಯಾನ್ಸ್ ಸ್ಟೆಪ್’ಗಳನ್ನು ಹಾಗು ಡ್ಯಾನ್ಸ್ ಬಗೆಗಿನ ಕೆಲವು ಟೆಕ್ನಿಕ್ ಗಳನ್ನು ಚೆನ್ನಾಗಿ ಕಲಿತುಕೊಳ್ಳುತ್ತಾರೆ ಲಾರೆನ್ಸ್ . ರಾಘವ ಲಾರೆನ್ಸ್ ಅವರ ಡ್ಯಾನ್ಸ್ ಅನ್ನು ಒಮ್ಮೆ ನೋಡಿದ ಮೆಗಾಸ್ಟಾರ್ ಚಿರಂಜೀವಿ ತಮ್ಮ ಸಿನಿಮಾದಲ್ಲಿ ಅವಕಾಶ ಕೊಡುತ್ತಾರೆ..

ಸಿಕ್ಕ ಅವಕಾಶವನ್ನು ತುಂಬಾ ಚೆನ್ನಾಗಿ ಬಳಸಿಕೊಂಡ ರಾಘವ ಲಾರೆನ್ಸ್ ಮತ್ತೆ ಎಂದೂ ಹಿಂತಿರುಗಿ ನೋಡಲೇ ಇಲ್ಲ. ಚಿತ್ರರಂಗದಲ್ಲಿ ದಿನದಿಂದ ದಿನಕ್ಕೆ ಟಾಪ್ ಕೊರಿಯಾಗ್ರಾಫರ್ ಆಗಿ ಬೆಳೆಯುತ್ತಾರೆ. ನಂತರ ನಟನೆ ಹಾಗು ನಿರ್ದೇಶನಕ್ಕೂ ಕೂಡ ಇಳಿಯುತ್ತಾರೆ. ಅಲ್ಲಿಯೂ ಕೂಡ ಅದ್ಬುತ ಸಕ್ಸಸ್ ಅನ್ನು ಕಾಣುತ್ತಾರೆ.. ಇನ್ನೂ ತಮಿಳಿನ ಕಾಂಚನ ಚಿತ್ರ ಇವರಿಗೆ ತುಂಬಾ ಹೆಸರು ತಂದು ಕೊಡುತ್ತದೆ. ಒಬ್ಬ ಕಾರ್ ಡ್ರೈವರ್ ಆಗಿ ಕೆಲಸ ಮಾಡಿದ ವ್ಯಕ್ತಿ ಹಿಂದು ಕೋಟಿ ಕೋಟಿ ದುಡಿಯುತ್ತಿದ್ದಾರೆ. ರಾಘವ ಲಾರೆನ್ಸ್ ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲದೇ ಸಮಾಜಮುಖಿ ಕೆಲಸಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ..