Advertisements

ಸಿನಿಮಾ ರಂಗಕ್ಕೆ ಈತ ಲಕ್ಕಿ ಪರ್ಸನ್ ಎಂದು ಎನಿಸಿಕೊಂಡಿದ್ದ ರಘುವರನ್ ಎಂಬ ಅದ್ಬುತ ಕಲಾವಿದನ ಅಂತ್ಯ ಹೇಗಾಯ್ತು.. ಏನಾಗಿತ್ತು ಗೊತ್ತಾ?

Cinema

ಒಂದು ಟೈಮ್ ನಲ್ಲಿ ಸೌತ್ ಇಂಡಿಯಾ ಸಿನಿಮಾಗಳಲ್ಲಿ ವಿಲನ್ ಆಗಿ ಸಖತ್ ಸೌಂಡ್ ಮಾಡಿದ ನಟ ರಘುವರನ್.. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೀರೋ ಗಳಿಗೆ ಸರಿ ಸಮಾನವಾಗಿ ಹೆಸರು ಮಾಡಿದ್ದರು ನಟ ರಘುವರನ್ ಕೇರಳದಲ್ಲಿ ಹುಟ್ಟಿದ ರಘುವರನ್ ತಮಿಳು ಹಾಗು ತೆಲುಗಿನಲ್ಲಿ ತುಂಬಾ ನಟಿಸಿದ್ದರು.. ರಘುವರನ್ ಸಿನಿಮಾದಲ್ಲಿ ಇದ್ದಾರೆ ಅಂದ್ರೇನೆ ಏನೋ ಒಂದು ಥ್ರಿಲ್ ಇರುತ್ತಿತ್ತು. ರಘುವರನ್ ಆಕ್ಟಿಂಗ್ ಮಾಡುವಾಗ ಅವರು ಹೆಚ್ಚು ಮಾತನಾಡುತ್ತಿರಲಿಲ್ಲ‌.. ಅವರ ಕಣ್ಣುಗಳು ಮಾತ್ರ ತುಂಬಾ ಮಾತನಾಡುತ್ತಿದ್ದವು. ಸಿನಿಮಾಗಳಲ್ಲಿ ವಿಲನಿಸಮ್ ಗೆ ಒಂದು ಹೊಸ ಲುಕ್ ಕೊಟ್ಟರು ನಟ ರಘುವರನ್.. ರಘುವರನ್ ಡೈಲಾಗ್ ಗಳಲ್ಲಿ ಪಕ್ಕಾ ಟೈಮಿಂಗ್ಸ್ ಇರುತ್ತಿತ್ತು.. ಟೋಟಲಿ ಹೇಳಬೇಕೆಂದರೆ.‌. ಇಡೀ ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ತುಂಬಾ ಸ್ಟೈಲಿಶ್ ವಿಲನ್ ಆಗಿದ್ದರು ರಘುವರನ್..

[widget id=”custom_html-3″]

Advertisements

ರಘುವರನ್ ಮಲಯಾಳಂ, ತೆಲುಗು, ತಮಿಳು, ಕನ್ನಡ ಸೇರಿದಂತೆ 154 ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 1982 ರಲ್ಲಿ ಮಲಯಾಳಂ ಸಿನಿಮಾ ಒಂದರ ಮೂಲಕ ರಘುವರನ್ ಸಿನಿಮಾ ರಂಗಕ್ಕೆ ಕಾಲಿಟ್ಟರು.. ತೆಲುಗಿನ ರುದ್ರನೇತ್ರ, ಲಂಕೇಶ್ವುರುಡು, ಶಿವಾ ಚಿತ್ರಗಳು ರಘುವರನ್ ಅವರಿಗೆ ತುಂಬಾ ಹೆಸರು ತಂದುಕೊಟ್ಟವು. ಕನ್ನಡದಲ್ಲಿ ಕಲಾವಿದ, ಜೈ ಹಿಂದ್, ಸರ್ಕಲ್ ಇನ್ಸ್ಪೆಕ್ಟರ್, ದುರ್ಗಿ ಇನ್ನೂ ಮುಂತಾದ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದರು. ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್, ನಟ ರಘುವರನ್ ಅವರನ್ನು ತುಂಬಾ ಮೆಚ್ಚು ಕೊಳ್ಳುತ್ತಿದ್ದರು.. ರಘುವರನ್ ಸಿನಿಮಾದಲ್ಲಿ ಇದ್ದಾರೆ ಅಂದರೆ ಆ ಸಿನಿಮಾ ಪಕ್ಕಾ ಗೆಲ್ಲುತ್ತೆ. ರಘುವರನ್ ತುಂಬಾ ಲಕ್ಕಿ ಪರ್ಸನ್ ಎನ್ನುತ್ತಿದ್ದರು ರಜನಿಕಾಂತ್..

[widget id=”custom_html-3″]

1996 ರಲ್ಲಿ ನಟ ರಘುವರನ್ ಅವರು ತೆಲುಗು ನಾಯಕಿಯಾಗಿ ನಟಿಸುತ್ತಿದ್ದ ಹಾಗು ಕನ್ನಡದಲ್ಲಿ ವಿಷ್ಣುವರ್ಧನ್ ಅವರ ಜೊತೆ ಜಗದೇಕ ವೀರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ರೋಹಿಣಿ ಅವರನ್ನು ಮದುವೆ ಆದರು.. ಇವರಿಗೆ 1998 ರಲ್ಲಿ ರಿಶಿವರನ್ ಎಂಬ ಮಗ ಹುಟ್ಟಿದನು. ಕಾಲ ಕಳೆದಂತೆ ರೋಹಿಣಿ ಮತ್ತು ರಘುವರನ್ ಮಧ್ಯೆ ಭಿನ್ನಾಭಿಪ್ರಾಯಗಳು ಶುರುವಾದವು.‌‌. ಸಿನಿಮಾಗಳಲ್ಲಿ ರಘುವರನ್ ಅವರಿಗೆ ಅವಕಾಶಗಳು ಕೂಡ ಬರ ಬರುತ್ತಾ ಕಡಿಮೆ ಆದವು. ಮುಂಚೆಯಿಂದಲೂ ಮ’ಧ್ಯಕ್ಕೆ ದಾಸರಾಗಿದ್ದ ರಘುವರನ್ ಪತ್ನಿ ರೋಹಿಣಿ ಅವರ ಮಾತಿಗೆ ಬೆಲೆ ಕೊಟ್ಟು ಮಧ್ಯ ಹಾಗು ಇನ್ನಿತರ ಚ’ಟಗಳನ್ನು ಬಿಟ್ಟಿದ್ದರು. ಆದರೆ ಮದುವೆಯಾದ ನಾಲ್ಕು ವರ್ಷಗಳಲ್ಲಿ ರಘುವರನ್ ಮತ್ತೆ ಚ’ಟಗಳಿಗೆ ದಾಸರಾದರು..

[widget id=”custom_html-3″]

ಇದರಿಂದ ರೋಸಿ ಹೋದ ರೋಹಿಣಿ 2004 ರಲ್ಲಿ ರಘುವರನ್ ಅವರಿಗೆ ವಿ’ಚ್ಚೇದನ ನೀಡಿದರು. ಪತ್ನಿಯಿಂದ ದೂರವಾದ ರಘುವರನ್ ಒಂಟಿಯಾದರು.. ಸಿನಿಮಾಗಳಲ್ಲಿ ಅವಕಾಶಗಳು ಸಿಗದೇ ಕಂಗಾಲಾದರು. ಅನಾರೋಗ್ಯಕ್ಕೆ ಹೊಳಗಾದರು.. ಮಾರ್ಚ್ 19, 2008 ರಲ್ಲಿ ಕೇವಲ 49 ವರ್ಷಕ್ಕೆ ಮೇರು ನಟ ರಘುವರನ್ ನಿದ್ರೆಯಲ್ಲಿ ಇದ್ದಾಗಲೇ ಚಿರನಿದ್ರಿಗೆ ಜಾರಿದರು.. ರಘುವರನ್ ಸಾ’ವಿಗಿಡಾದಾಗ ರಘುವರನ್ ಅವರನ್ನು ಹತ್ತಿರದಿಂದ ನೋಡಿದವರು ಹಾಗು ಅವರ ಸ್ನೇಹಿತರು ಪಾಪ ರಘು ತನ್ನ ಲೈಪ್ ನ ತಾನೇ ಕೈಯಾರೆ ಹಾ”ಳುಮಾಡಿಕೊಂಡ.. ಎಷ್ಟು ಬುದ್ದಿ ಹೇಳಿದರು ಕೇಳಲಿಲ್ಲಾ.ಈ ರೀತಿ ಆಗಬಾರದಿತ್ತು ಎಂದು ಬೇಜಾರ್ ಆದರು..