Advertisements

ರಾಜ್ಯ ಪ್ರವೇಶಿಸಿದ ಮುಂಗಾರು ಮಳೆ..ಎಲ್ಲೆಲ್ಲಿ ಮಳೆಯಾಗಲಿದೆ ಗೊತ್ತಾ ?

News

ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತ ಉಂಟಾಗಿದ್ದು ಈಗಾಗಲೇ ಮುಂಗಾರು ಮಾರುತಗಳು ರಾಜ್ಯಕ್ಕೆ ಪ್ರವೇಶ ಮಾಡಿದ್ದು, ನಾಳೆ (ಭಾನುವಾರ)ದಿಂದ ರಾಜ್ಯದ ಹಲವಾರು ಭಾಗಗಳಲ್ಲಿ ಮಳೆಯಾಗಲಿದೆ ಎಂದು ರಾಜ್ಯದ ಹವಾಮಾನ ಇಲಾಖೆ ಹೇಳಿದೆ.

Advertisements

ಇನ್ನು ಭಾರತದ ದಕ್ಷಿಣ ಮತ್ತುಕೇಂದ್ರ ಭಾಗದಲ್ಲಿ ಮುಂದಿನ ವಾರದಿಂದ ಮುಂಗಾರು ಮಾರುತಗಳ ವೇಗ ಹೆಚ್ಚಾಗಲಿದ್ದು, ಭಾರತದಲ್ಲಿ ಈ ವರ್ಷ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇನ್ನು ಮುಂದಿನ ವಾರದಿಂದ ಬಂಗಾಳ ಕೊಲ್ಲಿಯಲ್ಲಿ ಉಂಟಾಗುವ ವಾಯುಭಾರ ಕುಸಿತದಿಂದ ಮುಂಗಾರು ಮಾರುತಗಳ ಚಲನೆ ಒರಿಸ್ಸಾ ಕಡೆ ಹೋಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇನ್ನು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಹೇಳಲಾಗಿದೆ. ಈಗಾಗಲೇ ನಿಸರ್ಗ ಚಂಡಮಾರುತದಿಂದಾಗಿ ರಾಜ್ಯದ ಕರಾವಳಿ ಸೇರಿದಂತೆ ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಿದ್ದು, ವ್ಯವಸಾಯ ಕೆಲಸಗಳು ಬಿರುಸುಗೊಂಡಿವೆ.