Advertisements

ಭಿಕ್ಷುಕ ಎಂದುಕೊಂಡು ಖ್ಯಾತ ನಟನಿಗೆ 10 ರೂಪಾಯಿ ಕೊಟ್ಟ ಮಹಿಳೆ.. ನಂತರ ಈ ನಟ ಕೊಟ್ಟಿದ್ದು 10 ಕೋಟಿ ರೂಪಾಯಿ. ಹೇಗೆ ಗೊತ್ತಾ? ನೋಡಿ..

Cinema Kannada Mahiti

ನಮಸ್ತೆ ಸ್ನೇಹಿತರೆ, ಕಣ್ಣಿಂದ ನೋಡಿದರು ಪ್ರಮಾಣಿಸಿ ನೋಡು ಎಂದು ಹೇಳುತ್ತಾರೆ.. ಯಾಕೆಂದರೆ ಕಣ್ಣಿಂದ ನೋಡಿ ನಾವು ಅಂದುಕೊಂಡಿದ್ದೆಲ್ಲಾ ನಿಜ ಆಗದೆ ಇರಬಹುದು. ಈ ಘಟನೆ ಕೂಡ ಹಾಗೆ.. ಬಹುಶಃ ಈ ಸ್ಟೋರಿ ಕೇಳಿದರೆ ಈಗೂ ಆಗಬಹುದಾ ಅನಿಸುತ್ತದೆ. ಒಬ್ಬ ಅನಾಮಿಕ ಮಹಿಳೆ ಖ್ಯಾತ ನಟನಿಗೆ 10 ರೂಪಾಯಿ ಕೊಡುತ್ತಾರೆ. ಯಾಕಾಗಿ ಕೊಡುತ್ತಾರೆ.. ಅಷ್ಟಕ್ಕೂ ಅಲ್ಲಿ ನಡೆದ ಘಟನೆ ಏನು ಎಂದು ನೋಡೊಣ. ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದು ಜೀವನದ ಹಾದಿಯನ್ನು ಕಂಡುಕೊಂಡು. ನಂತರ ನಟನಾಗಿ ಸೂಪರ್ ಸ್ಟಾರ್ ಆಗಿ ಬೆಳೆದವರು ರಜನಿಕಾಂತ್..

Advertisements

ಜೀವನದಲ್ಲಿ ಬೇಕಾದಷ್ಟು ಹಣ ನೋಡಿರುವ ರಜನಿಕಾಂತ್ ಅದರ ಬಗ್ಗೆ ಆಸಕ್ತಿಯನ್ನೇ ಕಳೆದುಕೊಂಡು ಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವನ ನಡೆಸುತ್ತಿದ್ದಾರೆ. ಒಂದು ದಿನ ಬೆಂಗಳೂರಿಗೆ ಬಂದಿದ್ದ ರಜನಿಕಾಂತ್ ದೇವಸ್ತಾನಕ್ಕೆ ಹೊಗೋಣ ಎಂದು ತಮ್ಮ ಸ್ನೇಹಿತರ ಬಳಿ ಹೇಳಿದರು.. ಆದರೆ ನೀವು ದೇವಸ್ತಾನಕ್ಕೆ ಹೋದರೆ ನಿಮ್ಮನ್ನು ನೋಡಲು ತುಂಬಾ ಜನ ಸೇರುತ್ತಾರೆ. ಹಾಗಾಗಿ ಕಷ್ಟ ಎಂದರು ಸ್ನೇಹಿತರು.. ಹಾಗ ಒಂದು ಪ್ಲಾನ್ ಮಾಡಿದ ರಜನಿಕಾಂತ್ ಹಳೆ ಶರ್ಟ್, ಹಳೆ ಪಂಚೆ, ಒಂದು ಟವಲ್ ಹಾಕಿಕೊಂಡು.. ಯಾರಿಗೂ ಗುರುತು ಸಿಗದಂತೆ ರೆಡಿಯಾಗಿ ದೇವಸ್ತಾನಕ್ಕೆ ಹೋದರು.

ರಜನಿಕಾಂತ್ ದೇವಸ್ತಾನಕ್ಕೆ ಹೋಗುತ್ತಿದ್ದಂತೆ ಅವರ ವೇಷ ಭೂಷಣ ನೋಡಿ ಭಿಕ್ಷುಕ ಇರಬಹುದು ಎಂದು ಭಾವಿಸಿದ ಒಬ್ಬ ಮಹಿಳೆ ರಜನಿಕಾಂತ್ ಗೆ ಹತ್ತು ರೂಪಾಯಿ ಭಿಕ್ಷೆ ಕೊಟ್ಟರು. ಆಗ ಏನು ಮಾತನಾಡದ ರಜನಿಕಾಂತ್ ವಿನಮ್ರವಾಗಿ ಆ ಮಹಿಳೆ ಕೊಟ್ಟ ಹತ್ತು ರೂಪಾಯಿ ತೆಗೆದುಕೊಂಡು ಮುಂದೆ ಸಾಗಿದರು. ಆದರೆ ನಂತರ ಹುಂಡಿಯಲ್ಲಿ ರಜನಿಕಾಂತ್ ಹಾಕುತ್ತಿದ್ದ ಹಣದ ಮೊತ್ತ ನೋಡಿ ಶಾಕ್ ಆದರು ಆ ಮಹಿಳೆ.. ಇದರ ಮಧ್ಯೆ ರಜನಿಕಾಂತ್ ಅವರನ್ನು ಗುರುತು ಹಿಡಿದ ಅಲ್ಲಿನ ಜನ ಆ ಮಹಿಳೆಗೆ ಬೈದು..

ಅವರು ಭಿಕ್ಷುಕರಲ್ಲ ರಜನಿಕಾಂತ್ ಎಂದು ಹೇಳಿದರು. ರಜನಿಕಾಂತ್ ಇನ್ನೇನು ಕಾರು ಅತ್ತಬೇಕು ಅನ್ನುವಷ್ಟರಲ್ಲಿ ಆ ಮಹಿಳೆ ಓಡಿ ಬಂದು ಅವರ ಬಳಿ ಕ್ಷಮೆ ಕೇಳಿ.. ತಿಳಿಯದೆ ತಪ್ಪು ಮಾಡಿದೆ ನಮ್ಮ ಹಣ ಬೇಕಾದರೆ ವಾಪಸ್ ಕೊಡಿ ಎಂದು ಕೇಳಿದರು. ಆದರೆ ರಜಿನಿ ಮಾತ್ರ ಆಕೆಯನ್ನು ಸಮಾಧಾನ ಮಾಡಿ ಇದರಲ್ಲಿ ನಿಮ್ಮ ತಪ್ಪೇನಿಲ್ಲ ನಾನೊಬ್ಬ ಸಾಮಾನ್ಯ ವ್ಯಕ್ತಿ ಎಂದು ನಿಮ್ಮ ಮೂಲಕ ನನಗೆ ದೇವರು ತಿಳಿಸಿಕೊಟ್ಟಿದ್ದಾನೆ ಎಂದು ಹೇಳಿದರು.

ವಾಪಸ್ ಹೋದ ರಜನಿಕಾಂತ್ ಮಹಿಳೆ ಕೊಟ್ಟ ಹತ್ತು ರೂಪಾಯಿ ಸೇರಿಸಿ ಹತ್ತು ಕೋಟಿಯನ್ನು ಒಂದು ಅನಾಥ ಆಶ್ರಮಕ್ಕೆ ಕೊಟ್ಟರು.. ಅಷ್ಟೇ ಅಲ್ಲದೇ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ಅನಾಥ ಆಶ್ರಮಗಳಿಗೆ ಸುಮಾರು ಹತ್ತು ಕೋಟಿ ರುಪಾಯಿಗು ಹೆಚ್ಚು ಹಣವನ್ನು ದೇಣಿಗೆಯಾಗಿ ಕೊಟ್ಟರು. ಆ ಮಹಿಳೆ ತನ್ನನ್ನು ಭಿಕ್ಷುಕ ಎಂದು ಭಾವಿಸಿದರು ಕೋಪ ಮಾಡಿಕೊಳ್ಳದೇ ಅದರಲ್ಲಿ ಒಳ್ಳೆಯ ಅರ್ಥ ಹುಡುಕಿದ ರಜನಿಕಾಂತ್ ಅವರ ಒಳ್ಳೆಯ ಭಾವನೆಯನ್ನು ಮೆಚ್ಚಲೇ ಬೇಕು.