Advertisements

ಕಂಡಕ್ಟರ್ ಆಗಿದ್ದಾಗ ಪರಿಚಯವಿದ್ದ ಹುಡುಗಿಯನ್ನು ಈಗಲೂ ಹುಡುಕುತ್ತಿರುವ ರಜಿನಿ.. ನಿಜವಾದ ಕಾರಣ ಏನು ಗೊತ್ತಾ?

Cinema

ಸೂಪರ್‌ಸ್ಟಾರ್ ರಜನೀಕಾಂತ್ ಹೆಸರು ಗೊತ್ತಿಲ್ಲದೇ ಇರೋರೇ ಇಲ್ಲ. ಸಿನಿಮಾದಲ್ಲಿ ರಜನಿ ಸಿಗ’ರೇಟ್ ಸೇದುವ ಭಂ’ಗಿಯಂತೂ ಅಬ್ಬ ಎಷ್ಟೊಂದು ಜನಪ್ರಿಯವಾಗಿತ್ತು. ಆ ಕಾಲದಿಂದ ಈ ಕಾಲದವರೆಗೂ ರಜನಿ ಅಂದ್ರೆನೇ ಫೇಮಸ್ಸು. ಇತ್ತೀಚಿನ ದಿನಗಳಲ್ಲಿ ರಾಜಕೀಯಕ್ಕೆ ರಜನಿ ಎಂಟ್ರಿ ಕೊಡುತ್ತಾರೆ, ಸಪರೇಟ್ ಪಕ್ಷದ ಮೂಲಕ ಅಖಾಡಕ್ಕಿಳಿದು ತಮಿಳು ನಾಡಿನಲ್ಲಿ ಹೊಸ ಸಂಚಲನ ಮಾಡ್ತಾರೆ ಎಂಬೆಲ್ಲ ಸುದ್ದಿಯಾಗಿತ್ತು. ಅನಾರೋ’ಗ್ಯದ ನಿಮಿತ್ತ ಆಸ್ಪತ್ರೆ ಸೇರಿದ್ದ ರಜನಿ ಡಿಸ್ಚಾರ್ಜ್ ಆದ ಮೇಲೆ ರಾಜಕೀಯದತ್ತ ಈ ಭಾರೀ ಹೆಜ್ಜೆ ಇಡಲ್ಲ ಅಂತ ಸ್ಪಷ್ಟ ಪಡಿಸಿದ್ರು. ಇದು ಅದೆಷ್ಟೋ ಅಭಿಮಾನಿಗಳಿಗೆ ನಿರಾಸೆಯುಂಟು ಮಾಡಿದ್ದು ಹೌದು. ಇನ್ನು ರಜನಿಗೆ ಹಣ ಹಾಕಲು ಪ್ರೊಡ್ಯೂಸರ್ಸ್ ಕಾಯುತ್ತಾರೆ..

[widget id=”custom_html-3″]

Advertisements

ಪ್ರೇಕ್ಷಕರು ತೆರೆ ಮೇಲೆ ಸೂಪರ್ ಸ್ಟಾರ್‌ನ್ನು ನೋಡಲು ಹಾತೊರೆಯುತ್ತಾರೆ. ಆದರೆ ಈ ಸೂಪರ್‌ಸ್ಟಾರ್ ಮನಸ್ಸಿನಲ್ಲಿಯೂ ಒಂದು ಮಾಸದ ನೋ’ವಿದೆ. ದುಖಃದ ಕತೆಯಿದೆ. ರಜನಿಯ ಆ ವ್ಯತೆಯ ಕತೆಯನ್ನೇ ನಾವು ನಿಮಗೆ ಹೇಳಲಿಕ್ಕೆ ಹೊರಟಿರೋದು. ಹೌದು ಆರಂಭದ ದಿನಗಳಲ್ಲಿ ಬಸ್ ಕಂಡೆಕ್ಟರ್ ಆಗಿ ಕೆಲಸ ಮಾಡ್ತಿದ್ದ ರಜನಿ ಅವರು ಆಗಿನ್ನೂ ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ರು. ಒಂದು ದಿನ ಬಸ್ ಅಲ್ಲಿ ಒಬ್ಬಳು ಸುಂದರವಾದ ಹುಡುಗಿಯನ್ನು ರಜನಿ ಕಾಣ್ತಾರೆ. ಕಂಡ ತಕ್ಷಣ ಪ್ರೇಮ ಹುಟ್ಟಲಿಲ್ಲ. ಬದಲಿಗೆ ಆ ಹುಡುಗಿಗೆ ರಜನಿ ಅವರಿಗೆ ಕಿರಿಕ್ ಆಗತ್ತೆ. ಅಂದಹಾಗೆ ಆ ಹುಡುಗಿಯ ಹೆಸರು ನಿರ್ಮಲಾ. ನಿರ್ಮಲಾ ಬಸ್ ಹತ್ತಿದ ಕೆಲವೇ ಕ್ಷಣದಲ್ಲಿ ಬಸ್ ನಿಲ್ಲಿಸಿ ಅಂತ ಕೂಗಲು ಶುರು ಮಾಡ್ತಾರಂತೆ.

ಕಾರಣ ಆಕೆ ಹತ್ತ ಬೇಕಿದ್ದ ಬಸ್ಸೇ ಬೇರೆ. ಆಕೆ ಹತ್ತಿದ ಬಸ್ಸೇ ಬೇರೆ. ತಾನೂ ಹೋಗಬೇಕಿದ್ದ ಜಾಗಕ್ಕೆ ಈ ಬಸ್ ಹೋಗಲ್ಲ, ಬಸ್ ನಿಲ್ಲಿಸಿ ಅಂತ ರಜನಿಕಾಂತ್ ಅವರ ಬಳಿ ಕೇಳಿಕೊಳ್ತಾರೆ. ಆಗ ಸಿಟ್ಟಾದ ರಜನಿ ಬಸ್ ಹತ್ತುವ ಮುನ್ನ ನೋಡಿಕೊಂಡು ಬಸ್ ಹತ್ತೋದಕ್ಕೆ ಆಗಲ್ವಾ? ನಿಮ್ಮಿಂದ ಎಲ್ಲರ ಸಮಯ ವ್ಯರ್ಥ ಅಂತ ಸ್ವಲ್ಪ ರೂಡ್ ಆಗಿಯೇ ಮಾತಾಡ್ತಾರಂತೆ. ರಜನಿ ಮಾತಿಂದ ಬೇಸರಗೊಂಡ ನಿರ್ಮಲಾ ಮರು ಮಾತಾಡದೇ ಬಸ್ ಇಳಿದು ಹೋಗುತ್ತಾರೆ. ಹೀಗೆ ಮೊದಲ ಭೇಟಿಯಲ್ಲಿಯೇ ಕಿತ್ತಾಡಿಕೊಳ್ಳುವ ಇವರಿಬ್ಬರು ದಿನವೂ ಮುಖಾಮುಖಿಯಗುತ್ತಿದ್ದರಂತೆ. ಯಾಕೆಂದ್ರೆ ರಜನಿಕಾಂತ್ ಅವರು ಕೆಲಸ ಮಾಡ್ತಿದ್ದ ಬಸ್ ನಿರ್ಮಲಾ ಅವರ ಮನೆ ದಾರಿಯಲ್ಲಿಯೇ ಹೋಗುತ್ತಿತ್ತು.

[widget id=”custom_html-3″]

ಹೀಗೆ ಒಂದು ದಿನ ನಿರ್ಮಲಾ ಅವರು ಎದುರು ಬಂದಾಗ ರಜನಿ ಕ್ಷಮೆ ಕೇಳ್ತಾರೆ. ಆ ದಿನ ನಾನು ಒರಟಾಗಿ ಮಾತಾಡಿದೆ, ಕ್ಷಮಿಸಿ ಅಂತಾರೆ. ತದನಂತರ ಇವರಿಬ್ಬರು ಒಳ್ಳೆಯ ಸ್ನೇಹಿತರಾಗ್ತಾರೆ. ಸ್ನೇಹ ಪ್ರೀತಿಯಾಗಿ ಬದಲಾಗಲು ಹೆಚ್ಚು ದಿನ ಏನು ಬೇಕಾಗಿರಲಿಲ್ಲ. ಹೀಗೆ ನವ ಜೋಡಿಗಳು ಕಾಲ ಕಳೀತಾ ಇರ‍್ತಾರೆ. ಆಗ ಒಂದು ದಿನ ರಜನಿ ಅವರು ತಾನೂ ಅಭಿನಯಿಸಿದ ನಾಟಕ ನೋಡಲು ನಿರ್ಮಲಾ ಅವರನ್ನು ಕರೆಯುತ್ತಾರೆ. ರಜನಿ ಅಭಿನಯ ನೋಡಿ ಮೂಕವಿಸ್ಮಿತರಾದ ನಿರ್ಮಲಾ, ನೀನು ಅಭಿನಯವನ್ನು ಮುಂದುವರೆಸು ಅಂತ ಪ್ರೋತ್ಸಾಹ ಕೊಡ್ತಾರೆ. ಅದಕ್ಕೆ ರಜನಿ ಅಭಿನಯಿಸಲು ಅಭ್ಯಂತರ ಇಲ್ಲ, ಆದರೆ ಅಭಿನಯ ತರಗತಿಗೆ ಹೋಗಿ ನಂತರ ಸಿನಿಮಾಗಳಲ್ಲಿ ಅಭಿನಯಿಸಿದ್ರೆ ಒಳ್ಳೇದು.

ಆದ್ರೆ ಆಕ್ಟಿಂಗ್ ಕ್ಲಾಸ್‌ಗೆ ಹೋಗಲು ನನ್ನ ಬಳಿ ಹಣವಿಲ್ಲ ಅಂತಾರೆ. ಆಗ ನಿರ್ಮಲಾ ಹಿಂದೂ ಮುಂದು ನೋಡದೇ ತನ್ನ ಬಳಿಯಿದ್ದ ಕಾಲೇಜು ಫೀಸಿನ ಹಣ ಕೊಟ್ಟು ರಜನಿ ಅವರನ್ನು ಅಭಿನಯ ಕಲಿಯಲು ಮದ್ರಾಸ್‌ಗೆ ಕಳಿಸ್ತಾರೆ. ನಂತರ ಒಳ್ಳೆಯ ಅವಕಾಶಗಳು ರಜನಿಯನ್ನು ಹುಡುಕಿ ಕೊಂಡು ಬರಲಿಕ್ಕೆ ಶುರು ಆಗುತ್ತೆ. ಆಗ ರಜನಿ ತನ್ನನ್ನ ಈ ಸ್ಥಾನಕ್ಕೆ ಬರುವಂತೆ ಮಾಡಿದ ನಿರ್ಮಲಾ ಅವರನ್ನು ಹುಡುಕಿಕೊಂಡು ಬೆಂಗಳೂರಿಗೆ ಬರ‍್ತಾರೆ. ಅಷ್ಟರಲ್ಲಾಗಲೇ ನಿರ್ಮಲಾ ಅವರ ಕುಟುಂಬ ಮನೆ ಖಾಲಿ ಮಾಡಿ ಬೇರೆಕಡೆ ಹೋಗ್ತಾರೆ. ಎಷ್ಟುದಿನ ಊಟ ತಿಂಡಿ ಬಿಟ್ಟು ದಿನಗಟ್ಟಲೇ ಹುಡುಕಿದ್ರು ರಜನಿಗೆ ನಿರ್ಮಲಾ ಸಿಗಲೇ ಇಲ್ಲ
ಮೊಗ್ಗಾಗಿ ಅರಳುತ್ತಿದ್ದ ಪ್ರೇಮಕತೆ ಅರಳುವ ಮುನ್ನವೇ ಮುಕ್ತಾಯವಾಗುತ್ತದೆ.

[widget id=”custom_html-3″]

ಇದರಿಂದ ಮಾ’ನಸಿಕ ಒತ್ತಡಕ್ಕೆ ಒಳಗಾಗಿ ರಜನಿ ಕುಗ್ಗಿ ಹೋಗುತ್ತಾರೆ. ನಂತರ ಸ್ನೇಹಿತರು ನಿರಂತರವಾಗಿ ಪ್ರೋತ್ಸಾಹ ಕೊಟ್ಟು ರಜನಿಯನ್ನು ಆ ದುಖಃದಿಂದ ಹೊರಬರುವಂತೆ ಮಾಡುತ್ತಾರೆ. ಈ ಎಲ್ಲ ಕತೆಯನ್ನು ರಜನಿಯ ಆಪ್ತ ಸ್ನೇಹಿತ ದೇವನ್ ಬಿಚ್ಚಿಟ್ಟಿದ್ದಾರೆ.
ಇನ್ನೊಂದು ಇಂಟ್ರೆಸ್ಟಿಂಗ್ ವಿಷ್ಯ ಅಂದರೆ ಈಗಲೂ ರಜನಿ ಬೇರಬೇರೆ ಕಡೆ ಪ್ರಯಾಣ ಮಾಡುವಾಗ ತನ್ನ ಮೊದಲ ಪ್ರೇಮವನ್ನು ಹುಡುಕುತ್ತಾರಂತೆ, ನಿರ್ಮಲಾ ಸಿಗಬಹುದೇನೋ ಅನ್ನೋ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರಂತೆ,
ಸ್ನೇಹಿತರೇ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಪ್ರೇಮಕತೆಯ ಬಗ್ಗೆ ನಿವೇನು ಹೇಳ್ತಿರಾ..