Advertisements

ಸಾ’ರಾಯಿ ಮಾರಿ ಮಗನನ್ನು ಸಾಕಿದ ತಾಯಿ.. ಮಗ ದೊಡ್ಡವನಾಗಿ ತಾಯಿಗೆ ಮಾಡಿದ್ದೇನು ಗೊತ್ತಾ?

Inspire Kannada Mahiti

ನಮಸ್ತೆ ಸ್ನೇಹಿತರೆ, ತಾಯಿ ಮ’ಧ್ಯ’ವನ್ನು ಮಾರುತ್ತಾ ಮಗನನ್ನು ಸಾಕುತ್ತಾಳೆ.. ಇವರ ಮಗ ದೊಡ್ಡವನಾದ ನಂತರ ತಾಯಿಯ ಋಣವನ್ನು ತೀರಿಸಿದ್ದು ಹೇಗೆ ಅಂತ ತಿಳಿದರೆ ಅಚ್ಚರಿ ಪಡುತ್ತೀರಾ. ಒಬ್ಬ ಮಹಿಳೆಯ ಹೊಟ್ಟೆಯಲ್ಲಿ ಮಗು ಬೆಳೆಯುತ್ತಿರುವಾಗಲೇ ಅವರ ಪತಿ ತೀ’ರಿಕೊಳ್ಳುತ್ತಾನೆ.. ನಂತರ ಕುಟುಂಬದವರು ತಂದೆಯಿಲ್ಲದ ಈ ಮಗುವನ್ನು ಹೇಗೆ ಸಾಕುತ್ತಿಯಾ ಮಗುವನ್ನು ತ’ಗೆಸಿಬಿಡು ಎಂದು ಹೇಳುತ್ತಾರೆ. ಆದರೆ ಇವರ ಮಾತನ್ನು ಕೇಳದೆ ದೇಶಿ ಸಾ’ರಾ’ಯಿಯನ್ನು ಮಾರಿ ತನ್ನ ಮಗುವನ್ನು ಚೆನ್ನಾಗಿ ನೋಡಿಕೊಂಡು ಬೆಳೆಸುತ್ತಾಳೆ.. ಇನ್ನೂ ಈ ಸತ್ಯ ಘ’ಟ’ನೆ ರಾಜೇಂದ್ರ ಭಾರುದ್ ಅವರದ್ದು. ಇವರು 2013 ನೇ ಬ್ಯಾಚಿನ ಒಬ್ಬ ಐಎಎಸ್ ಅಧಿಕಾರಿ.. ರಾಜೇಂದ್ರ ಅವರು ಐಎಎಸ್ ಅಧಿಕಾರಿಯಾಗಲು ಅಷ್ಟೋಂದು ಸುಲಭವಿರಲಿಲ್ಲ.

Advertisements

ಬಡ ಕುಟುಂಬಕ್ಕೆ ಸೇರಿದ ಒಬ್ಬ ಗ’ರ್ಭಿಣಿ ಮಹಿಳೆ.. ಗಂಡ ತೀರಿಕೊಂಡ ನಂತರ ಸಂಬಂಧಿಕರು ಸಹಾಯ ಮಾಡುವ ಬದಲು ಮಗುವನ್ನು ತಗೆಸಿ ಬಿಡು ಎಂದು ಹಿಂ’ಸೆ ಕೊಡುತ್ತಾರೆ.. ನಂತರ ಇವರ ಹಿಂ’ಸೆ’ಯನ್ನು ತಾಳಲಾರದೇ ತನ್ನ ಹುಟ್ಟೂರಿಗೆ ಬಂದು ಅಲ್ಲಿ ಗುಡಿಸಲು ಹಾಕಿಕೊಳ್ಳುತ್ತಾಳೆ. ಒಂದು ಹೊತ್ತಿನ ಊಟಕ್ಕೂ ಸಹ ಹಣ ಇರಲಿಲ್ಲ. ನಂತರ ನಾನು ಜೀವನದಲ್ಲಿ ಸೋಲಬಾರದೆಂಬ ದೃಡ ನಿರ್ಧಾರವನ್ನು ಮಾಡುತ್ತಾಳೆ.. ಕೊನೆಗೆ ಜನವರಿ 7 1988 ರಲ್ಲಿ ಆಕೆ ಒಂದು ಗಂಡು ಮಗುವಿಗೆ ಜನ್ಮ ಕೊಡುತ್ತಾಳೆ.. ಆ ಮಗುವೇ ರಾಜೇಂದ್ರ ಭಾರೂದ್.. ಆದರೆ ರಾಜೇಂದ್ರ ಅವರ ತಾಯಿ ಕಮಲಾ ಭಾಯಿ ತುಂಬಾ ಚಿಂತೆಗೆ ಹೊಳಗಾಗುತ್ತಾರೆ. ಮಗುವನ್ನು ಹೇಗೆ ಸಾಕಲಿ ಕೈಯಲ್ಲಿ ಒಂದಷ್ಟು ಹಣ ಇಲ್ಲ..

ಮಗುವಿನ ಮುಂದಿನ ಭವಿಷ್ಯ ಹೇಗೆ ಎಂದು ತುಂಬಾ ಯೋಚನೆಯನ್ನು ಮಾಡುತ್ತಿರುತ್ತಾರೆ. ಆ ಸಮಯದಲ್ಲಿ ಸ್ನೇಹಿತರೊಬ್ಬರು ನೀನು ಮ’ಧ್ಯ’ವನ್ನು ಮಾರು ಅದರಿಂದ ಬಂದ ಹಣದಲ್ಲಿ ಮಗುವನ್ನು ನೋಡಿಕೋ ಎಂದು ಸಲಹೆಯನ್ನು ಕೊಡುತ್ತಾರೆ.. ಆದರೆ ಕಮಲಾ ಭಾಯಿಗೆ ಈ ಕೆಲಸವನ್ನು ಮಾಡಲು ಇಷ್ಟವಿರಲಿಲ್ಲ.. ಆದರೂ ಮಾಡಲೇಬೇಕಾದ ಪರಿಸ್ಥಿತಿ ಎದುರಾಗಿತ್ತು. ನಂತರ ಸರಾ’ಯಿಯನ್ನು ಮಾರುತ್ತಾ ತನ್ನ ಮಗವನ್ನು ನೋಡಿಕೊಳ್ಳುತ್ತಾ ಜೀವನ ನಡೆಸುತ್ತಿರುತ್ತಾಳೆ.. ನಿಧಾನವಾಗಿ ಮಗು ರಾಜೇಂದ್ರ ದೊಡ್ಡವನಾದ. ತನ್ನ ಮನೆಯ ಪರಿಸ್ಥಿತಿ ಏನು ಎಂದು ಅವನಿಗೂ ಅರ್ಥವಾಗತೊಡಗಿತು. ತನ್ನ ತಾಯಿ ಕಷ್ಟವನ್ನು ನೋಡಿದ ರಾಜೇಂದ್ರ ಅವರು ನಾನು ಚೆನ್ನಾಗಿ ಓದಿ ದೊಡ್ಟ ಅಧಿಕಾರಿಯಾಗಬೇಕು ಎನ್ನುವ ನಿರ್ಧಾರ ಮಾಡುತ್ತಾನೆ.‌‌‌.

ಇನ್ನೂ ತಾಯಿ ದುಡಿದ ಹಣದಲ್ಲಿ ಮನೆ ನಡೆಸುವುದೇ ಸಾಕಾಗುತ್ತಿತ್ತು ಇನ್ನೂ ಓದಿಸಲು ಎಲ್ಲಿಂದ ತರುತ್ತಾಳೆ ಎಂದು ಅರಿತ ರಾಜೇಂದ್ರ ಭಾರೂದ್ ಸಣ್ಣ ಪುಟ್ಟ ಅಂಗಡಿಗಳಲ್ಲಿ ಕೆಲಸವನ್ನು ಮಾಡಿಕೊಂಡು ತನ್ನ ಓದಿನ ಕಡಗೆ ಗಮನ ಕೊಟ್ಟ.. ಈ ಕಡೆ ತನ್ನ ತಾಯಿಗೂ ಕೂಡ ಸಹಾಯ ಮಾಡುತ್ತಿದ್ದ. ಯಾವುದೇ ಕಾರಣಕ್ಕೂ ರಾಜೇಂದ್ರ ಅವರು ಸಮಯವನ್ನು ವೇಸ್ಟ್ ಮಾಡುತ್ತಿರಲಿಲ್ಲ.. ಇನ್ನೂ 10ನೇ ತರಗತಿಯಲ್ಲಿ ರಾಜೇಂದ್ರ ಅವರು ಶೇಕಡಾ 85 ಪರ್ಸೆಂಟೇಜ್ ಗೂ ಅಧಿಕ ಅಂಕಗಳನ್ನ ಪಡೆದು ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದ್ದ. ನಂತರ ದ್ವಿತೀಯ ಪಿಯುಸಿಯಲ್ಲಿ 90 ಪರ್ಸೆಂಟ್ ಅಕಂಗಳನ್ನು ಪಡೆದಿದ್ದರು ರಾಜೇಂದ್ರ  ಅವರು.. ಇನ್ನೂ ರಾಜೇಂದ್ರ ಅವರಿಗೆ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಬೇಕೆಂಬ ಗುರಿಯನ್ನು ಇಟ್ಟುಕೊಂಡಿದ್ದರು.

ಅದೇ ರೀತಿ ಮುಂದೆ ಮೆಡಿಕಲ್ ನಲ್ಲಿ ಉತ್ತಮ ಅಂಕಗಳನ್ನು ಪಡೆದು.. 2011 ರಲ್ಲಿ ಬೆಸ್ಟ್ ಸ್ಟೂಡೆಂಟ್ ಅವಾರ್ಡ್ ಅನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಇಷ್ಟಕ್ಕೆ ಸುಮ್ಮನಿರದ ರಾಜೇಂದ್ರ ಅವರಿಗೆ ಐಎಎಸ್ ಆಗಬೇಕು ಎನ್ನುವ ಆಸೆ ಬರುತ್ತದೆ.. ಅಂದಿನಿಂದಲೇ ಐಎಎಸ್ ತರಬೇತಿಯನ್ನು ಪಡೆದು ಯುಪಿಎಸ್ ಸಿ ಎಕ್ಸಾಮ್ ಬರೆಯುತ್ತಾರೆ. ನಂತರ 2013 ರಲ್ಲಿ ಐಎಎಸ್ ಅಧಿಕಾರಿಯಾಗುವ ಕನಸನ್ನು ಪೂರ್ತಿ ಮಾಡಿಕೊಳ್ಳುತ್ತಾರೆ.. ನಂತರ ಅದೇ ಊರಿನವರು, ದೊಡ್ಡ ಅಧಿಕಾರಿಗಳು, ಕುಟುಂಬದವರು ರಾಜೇಂದ್ರ ಮನೆಗೆ ಬಂದು ಅವರ ಸಾಧನೆಗೆ ಬಗ್ಗೆ ಕೊಂಡಾಡಿದ್ದಾರೆ. ಇನ್ನೂ ತನ್ನ ಮಗನ ಸಾಧನೆ ನೋಡಿದ ಕಮಲಾ ಭಾಯಿಯವರ ಕುಷಿಗೆ ಪಾರವೇ ಇರಲಿಲ್ಲ.. ಆಕೆಯ ಕಣ್ಣಿನಲ್ಲಿ ಸಂತಸದ ಕಣ್ಣೀರು ತುಂಬಿತ್ತು. ಸ್ನೇಹಿತರೆ ರಾಜೇಂದ್ರ ಅವರ ಸಾಧನೆ ಬಗ್ಗೆ ನೀವು ಏನು ಹೇಳಲು ಇಷ್ಟಪಡುತ್ತೀರಾ..