Advertisements

ವರ್ಷಗಳಿಂದ ರಜಿನಿ ಮನೆ ಮೇಲೆ ಇರುವ ಗುಡಿಸಲು ಬಗ್ಗೆ ಯಾರಿಗೂ ತಿಳಿಯದ ಅಚ್ಚರಿ ರಹಸ್ಯಗಳು..

Cinema

ನಮಸ್ತೆ ಸ್ನೇಹಿತರೆ, ರಜಿನಿ‌ ತನ್ನ ಚಿತ್ರಗಳಿಗಿಂತ ಮಿಗಿಲಾಗಿ ತನ್ನ ಸಿಂಪ್ಲಿಸಿಟಿಯಿಂದ ಸೂಪರ್ ಸ್ಟಾರ್ ಆಗಿದ್ದಾರೆ. ತನ್ನ ಪ್ರಾರಂಭಿಕ ದಿನಗಳಲ್ಲಿ ತುಂಬಾ ಕಷ್ಟ ಪಟ್ಟವರು.. ಅವರ ಇತಿಹಾಸ ಪುಟಗಳಲ್ಲಿ ಒಂದು ಗುಡಿಸಲಿನ ಮನೆ ತುಂಬಾ ದೊಡ್ಡ ಪಾತ್ರ ವಹಿಸಿದೆ. ಆ ಗುಡಿಸಲು ಕಥೆ ಏನು ಎಂದು ನೋಡೊಣ ಬನ್ನಿ. ಅವಕಾಶ ಹುಡುಕಿಕೊಂಡು ಮದ್ರಾಸ್ ಗೆ ಹೋದ ರಜಿನಿ ಕೈಯಲ್ಲಿ ದುಡ್ಡಿಲ್ಲದೆ ಒಂದು ಬಿಲ್ಡಿಂಗ್ ಮೇಲೆ ಗುಡಿಸಲನ್ನು ಬಾಡಿಗೆ ಪಡೆದು ವಾಸವಿದ್ದರು. ಅಲ್ಲಿಂದ ಹೋಗಿ ಸಿನಿಮಾ ಅವಕಾಶಗಳಿಗಾಗಿ ಅಲೆದಾಡುತ್ತಿದ್ದರು.. ಕೊನೆಗೆ ಸಿನಿಮಾಗಳಲ್ಲಿ ಅವರಿಗೆ ಅವಕಾಶ ಸಿಕ್ಕಿತು.

Advertisements

ಆ ಗುಡಿಸಲಿನಲ್ಲಿ ನಟಿಸಿದ ರಜನಿಕಾಂತ್ ಅವರು ನಂತರ ಕೈಗೆ ಕಾಸು ಬಂದಮೇಲೆ ಬೇರೆ ಕಡೆ ಮನೆ ಮಾಡಿದರು. ರಜನಿಕಾಂತ್ ಹೀರೋ ಆಗಿ ಒಂದು ಹಂತಕ್ಕೆ ಬೆಳೆದ ಮೇಲೆ ತಾನು ವಾಸವಿದ್ದ ಗುಡಿಸಲನ್ನು ಹಾಗೂ ಆ ಬಿಲ್ಡಿಂಗ್ ಅನ್ನು ಖರೀದಿ ಮಾಡಲು ಭಯಸಿದರು. ಆದರೆ ಎಷ್ಟೇ ಕೇಳಿದರು ಅದನ್ನು ಮಾರಾಟ ಮಾಡಲು ಒಪ್ಪಿಕೊಳ್ಳಲಿಲ್ಲ ಬಿಲ್ಡಿಂಗ್ ಮಾಲಿಕ. ರಜಿನಿ ತನ್ನ ಹಳೆಯ ನೆನಪಿಗಾಗಿ ಆ ಗುಡಿಸಲನ್ನು ಖರೀದಿ ಮಾಡಲು ಬಯಸುತ್ತಿದ್ದಾರೆ ಎಂದು ಎಲ್ಲಾರು ಭಾವಿಸಿದ್ದರು. ಆದರೆ ರಜಿನಿ ಅಲೋಚನೆಯೇ ಭೇರೆಯಾಗಿತ್ತು.. ತಾನು ಎಷ್ಟೇ ಎತ್ತರಕ್ಕೆ ಬೆಳೆದರು ತಲೆಗೆ ಅ’ಹಂಕಾರ ಬರದಂತೆ ನಾನು ಯಾರು ನನ್ನ ಮೂಲ ಏನು.

ನಾನು ಎಲ್ಲಿಂದ ಬಂದಿದ್ದೇ‌ನೆ ಎಂದು ನೆನಪಿಸುವ ಸಲುವಾಗಿ ಗುಡಿಸಲನ್ನು ಖರೀದಿ ಮಾಡಲು ಬಯಸಿದ್ದರು ರಜನಿಕಾಂತ್.. ಆದರೆ ಅದನ್ನು ಖರೀದಿ ಮಾಡಲು ಸಾಧ್ಯವಾಗದಿದ್ದಾಗ ತೇಟ್ ಅಂತಹದ್ದೇ ಗುಡಿಸಲನ್ನು ತನ್ನ ಮನೆಯ ಮೇಲೆ ಕಟ್ಟಿಸಿಕೊಂಡಿದ್ದಾರೆ. ಮನೆಯಲ್ಲಿದ್ದಾಗ ಹೆಚ್ಚು ಸಮಯ ಆ ಗುಡಿಸಲಿನಲ್ಲಿಯೇ ಕಾಲ ಕಳೆಯುತ್ತಾರಂತೆ ರಜಿನಿ.. ಎಷ್ಟೇ ಎತ್ತರಕ್ಕೆ ಬೆಳೆದರು ತಗ್ಗಿ ಬಗ್ಗಿ ಬೆಳೆಯಬೇಕು ಅನ್ನೋದು ಗುಡಿಸಲನ್ನು ನೋಡಿದ ತಕ್ಷಣ ರಜಿನಿಗೆ ಅರ್ಥವಾಗುತ್ತದಂತೆ. ಈ ರೀತಿ ತನ್ನನ್ನು ತಾನು ತಿದ್ದಿಕೊಳ್ಳುತ್ತಿರುವುದರಿಂದಲೇ ರಜಿನಿ ಈಗಲೂ ಸೂಪರ್ ಸ್ಟಾರ್ ಆಗಿ ಉಳಿದಿರುವುದು.