Advertisements

ಅಣ್ಣಾವ್ರ ಅಂತಿಮ ದರ್ಶನಕ್ಕೆ ಬಂದ ವಿಷ್ಣುವರ್ಧನ್ ಪಾರ್ವತಮ್ಮರಿಂದ ಬೈಸಿಕೊಂಡಿದ್ಯಾಕೆ? ನೋಡಿ..

Cinema

ಪ್ರಿಯ ವೀಕ್ಷಕರೆ ಚಂದನವನ ಎಂದರೆ ನಮ್ಮ‌ ಕಣ್ಣ ಮುಂದೆ‌ ಒಂದು‌ ಕ್ಷಣ ನೆನಪಿನ ಮಿಂಚು ಹಾದುಹೋಗು. ಇನ್ನು ಕನ್ನಡ ಚಿತ್ರರಂಗವನ್ನು ಕಟ್ಟಿ ಬೆಳೆಸುವಲ್ಲಿ ಹಲವು ನಾಯಕ ನಟರು ಮುಖ್ಯ ಪಾತ್ರವಹಿಸುತ್ತಾರೆ. ಇಂದು ಅವರೆಲ್ಲ ನಮ್ಮ ಮಧ್ಯ ಇಲ್ಲದಿದ್ದರು ಅವರ ನಟನೆ, ಪ್ರೀತಿ ಎಲ್ಲವು ಕನ್ನಡಭಿಮಾನಿಗಳ ಮನೆಮನದಲ್ಲಿ ಅಚ್ಚಳಿಯದ ಹಾಗೆ ಗಟ್ಟಿಯಾಗಿ ಬೇರುರಿದೆ. ಅಂತಹ ನಾಯಕರಲ್ಲಿ ಡಾ. ರಾಜ್ ಕುಮಾರ್ ಹಾಗೂ ಡಾ. ವಿಷ್ಣುವರ್ಧನ್ ಕೂಡ ಒಬ್ಬರು. ಇನ್ನು ಹೇಳುವುದಾದರೆ ಡಾ. ರಾಜ್ ಕುಮಾರ್ ಹಾಗೂ ಡಾ. ವಿಷ್ಣುವರ್ಧನ್ ನಟನೆಯ ಕಾಲ ಬೇರೆ ಬೇರೆ. ಇವರಿಬ್ಬರ ನುಡುವೆ ಎರೆಡು ದಶಕಗಳ ಅಂತರವಿದ್ದರು ಹಲವು ವಿಷಯಗಳ ಮೂಲಕ ಈ ನಟರನ್ನು ಹೋಲಿಕೆ ಮಾಡಲಾಗುತ್ತದೆ. ಡಾ ರಾಜ್ ಕುಮಾರ್ 150ಚಿತ್ರಗಳಲ್ಲಿ ನಟಿಸಿದ ಬಳಿಕ ಡಾ‌. ವಿಷ್ಣುವರ್ಧನ್ ಆಗಷ್ಟೆ ಸಿನೆಮಾ ರಂಗಕ್ಕೆ ಕಾಲಿಟ್ಟಿದ್ದರು‌. ಇವರಿಬ್ಬರ ನಡುವೆ ಉತ್ತಮ ಸ್ನೇಹ, ಆತ್ಮೀಯತೆ ಗೌರವ ಮನೋಭಾವನೆ ಇತ್ತು. ಅದಷ್ಟೆ ಕೆಲವು ವಿ’ವಾ’ಧಗಳು ಇವರಿಬ್ಬರ ಮಧ್ಯ ಇದ್ದವು ಎಂಬುವುದು ಹಲವರ ಅಭಿಪ್ರಾಯ.

[widget id=”custom_html-3″]

Advertisements

ಗಂಧದ ಗುಡಿ ಸಿನೆಮಾದ ಮೂಲಕ ಜನ್ಮ ತಾಳಿದ ವಿವಾದ ಡಾ. ವಿಷ್ಣುವರ್ಧನ್ ಅವರಿಗೆ ಸಾಕಷ್ಟು ನೋವನ್ನುಂಟು ಮಾಡಿದ್ದವು. ಅವರ ಬ್ಯಾನರ್ ಹರಿದು ಹಾಕುವುದು‌‌, ಅಭಿಮಾನಿಗಳ ಮೇಲೆ ಹ’ಲ್ಲೆ ಮಾಡುವುದು, ಸಿನೆಮಾ ರಿಲೀಸ್ ಗೂ ಅನೇಕ ಅಡಚಣೆಗಳನ್ನು‌ ಮಾಡಲಾಗುತಿತ್ತು. ಡಾ. ರಾಜ್ ಕುಮಾರ್ ಅವರಿಗೂ ಕೂಡ ಧಿಕ್ಕಾರ ಕೂಗು, ಹ’ಲ್ಲೆ’ಗೆ ಪ್ರಯತ್ನಿಸಲಾಗಿತ್ತು ಎಂಬುವುದು ಮೂಲಗಳಿಂದ ಬಂದ ವಿಷಯ. ಇವರಿಬ್ಬರ ಸಂಭಂದ ಸರಿಯಿದ್ದರು ಅದನ್ನು ವಿಭಿನ್ನವಾಗಿ ಬಣ್ಣಿಸಲು ಹಲವರು ಪ್ರಯತ್ನಿಸಿದ್ದಾರೆ. ನಾಗರ ಹಾವು ಸಿನೆಮಾದಲ್ಲಿ ಮಿಂಚಿ ಹೆಸರಾದ ವಿಷ್ಣುವರ್ಧನ್, ಗಂಧದ ಗುಡಿ ಸಿನೆಮಾದಲ್ಲಿ ವಿ’ಲ’ನ್ ಆಗಿ ನಟಿಸುತ್ತಾರೆ. ಇನ್ನು ಅಂದಿನ ಗೋಕಾಕ್ ಚಳುವಳಿಯಲ್ಲಿ ನಡೆದ ಕೆಲವು‌ ಘ’ಟ’ನೆಗಳನ್ನು ಅವರ ಕುಟುಂಬ ‌ಸ್ನೇಹಿತ ಹರಿಹರನ್ ಹಂಚಿಕೊಂಡಿದ್ದಾರೆ. 1982ರಲ್ಲಿ ನಡೆದ ಚಳುವಳಿ ಸಂದರ್ಭದಲ್ಲಿ ಭಾಷಣ ಮಾಡುವ ಸಂದರ್ಭದಲ್ಲಿ ವಿಷ್ಣುವರ್ಧನ್ ರಾಜ್ ಕುಮಾರ್ ‌ಅವರ ಕಾಲಿಗೆ ನಮಸ್ಕರಿಸುತ್ತಾರೆ ಆದರೆ ಇದನ್ನು ಸಹ ತೋರಿಕೆ ರೀತಿಯಲ್ಲಿ ಬಿಂಬಿಸಲಾಗುತ್ತದೆ.

[widget id=”custom_html-3″]

76 ನೇ ವಯಸ್ಸಿನಲ್ಲಿ ಡಾ. ರಾಜ್ ಕುಮಾರ್ ಅವರು ವಿ’ಧಿ’ವಶರಾಗುತ್ತಾರೆ. ಆ ಸಂಧರ್ಭದಲ್ಲಿ ‌ಇಡೀ ಕರುನಾಡೆ ಕಣ್ಣೀರು ಹಾಕುತ್ತಿತ್ತು. ಅಲ್ಲಲ್ಲಿ ಗ’ಲಾ’ಟೆಗಳು, ಪ್ರತಿಭಟನೆಗಳು ಕಾಣಿಸುತ್ತಿದ್ದವು. ಸದಾಶಿವ ನಗರದಲ್ಲಿರುವ ರಾಜ್ ಮನೆಯಲ್ಲಿ ಅವರ ಪಾ’ರ್ಥಿ’ವ ಶರೀರ ದರ್ಶನಕ್ಕೆ ಕಲಾವಿದರಿಗೆ , ಇಂಡಸ್ಟ್ರಿಯಲ್ಲಿನವರಿಗೆ ಅವಕಾಶ ಮಾಡಿಕೊಡಲಾಗಿರುತ್ತದೆ. ಇದೇ ಸಮಯದಲ್ಲಿ ಅಂಬರೀಶ್ ಜೊತೆ ವಿಷ್ಣುವರ್ಧನ್ ಅಂತಿಮ ದರ್ಶನಕ್ಕೆ ಬಂದಿರುತ್ತಾರೆ. ಇದನ್ನು‌ ಗಮನಿಸಿದ ಪಾರ್ವತಮ್ಮಾ ರಾಜ್ ಕುಮಾರ್ ಅವರಿಬ್ಬರನ್ನು ಕೊಣೆಯೊಂದರಲ್ಲಿ‌ ಕರೆಸಿ ಅಂಬರೀಶ ಅವರಿಗೆ ಯಾಕೆ ವಿಷ್ಣುವರ್ಧನ್ ಅವರನ್ನು ಕರೆದುಕೊಂಡು ‌ಬಂದಿದ್ದು, ಮೊದಲೆ ಇಲ್ಲಿಯ ಸನ್ನಿವೇಶ ಸರಿಯಿಲ್ಲ ಎಂದು ಹೇಳುತ್ತಾರೆ.

[widget id=”custom_html-3″]

ವಿಷ್ಣುವರ್ಧನ್ ಅವರಿಗೂ ಕೂಡ ಯಾಕೆ ಇಲ್ಲಿವರೆಗು ಬಂದಿದ್ದು, ಏನಾದರು ಹೆಚ್ಚು ಕಡಿಮೆಯಾದರೆ ಏನು‌ ಮಾಡುವುದು. ಮೊದಲೆ ನಮ್ಮ ಮಧ್ಯ ತಂದಿಡಲು ಪ್ರಯತ್ನಸುತ್ತಿದ್ದಾರೆ ಅವರಿಗೆ ವಾಪಾಸ್ ಹೋಗುವಂತೆ ಕೇಳಿಕೊಳ್ಳುತ್ತಾರೆ. ಈ ರೀತಿ ಹೇಳುವುದು ಪಾರ್ವತಮ್ಮ ರಾಜ್‍ಕುಮಾರ್ ಅವರಿಗೆ ಅನಿವಾರ್ಯವಾಗಿತ್ತು. ಮೊದಲೆ ಗ’ಲಾ’ಟೆ ಪ್ರತಿಭಟನೆಗಳಾಗುತ್ತಿವೆ ಮತ್ತೆನಾದರು ಹೆಚ್ಚಕಡಿಮೆಯಾದರೆ ಏನು ಎಂಬುವುದು ಅವರ ಕಳವಳ ಮತ್ತು ಕಾಳಜಿ. ಹೀಗೆ ಸಿನೆಮಾ ಇಂಡಸ್ಟ್ರಿ ಎಂದರೆ ದಿನಕ್ಕೂಂದು ಸುದ್ದಿ ಇದ್ದೆ ಇರುತ್ತೆ. ಅದೇನೆ ಇರಲಿ ಯಾವಾಗಲೂ ರಾಜ್ ಕುಟುಂಭವಾಗಲಿ, ವಿಷ್ಣುವರ್ಧನ್ ಆಗಲಿ ಹಾಗಿದ್ದವರಲ್ಲ ಎಲ್ಲವೂ ಗಾಳಿ ಸುದ್ದಿ ಎಂಬಂತೆ. ಒಟ್ಟಿನಲ್ಲಿ ಅವರ ಭಾಂದವ್ಯ ಸುಗಮವಾಗಿತ್ತು.

[widget id=”custom_html-3″]