Advertisements

ಮೊದಲ ಬಾರಿ ತಮ್ಮನಿಗೆ ಆರತಿ ಬೆಳಗಿ ರಾಖಿ ಕಟ್ಟಿದ ಐರಾ, ಫೋಟೋಗಳನ್ನು ಅಂಚಿಕೊಂಡ ರಾಧಿಕಾ ಪಂಡಿತ್.

Uncategorized

ಅಣ್ಣ ತಂಗಿಯರು ಅಕ್ಕ ತಮ್ಮಂದಿರು ರಕ್ತ ಸಂಬಂಧ ಇರಲಿ ಇಲ್ಲದೇ ಇರಲಿ ಸಹೋದರತೆಯ ಭಾವನೆಯಿಂದ ಒಬ್ಬರಿಗೊಬ್ಬರು ರಕ್ಷಾ ಕವಚವಾಗಿ ನಿಲ್ಲುವುದೇ ಈ ರಕ್ಷಾಬಂಧನದ ಅಮೂಲ್ಯವಾದ ಅರ್ಥ ಇನ್ನೂ ರಕ್ಷಾ ಬಂಧನ ದಿನದಂದು ಜನಸಾಮಾನ್ಯರು ಮಾತ್ರವಲ್ಲದೆ ಸ್ಯಾಂಡಲ್ ವುಡ್ ನಟ ನಟಿಯರ ಮನೆಗಳಲ್ಲಿಯೂ ಸಹ ರಕ್ಷಾ ಬಂಧನದ ಹಬ್ಬವನ್ನು ಅದ್ದೂರಿಯಾಗಿ ನಡೆದಿದೆ.

Advertisements

ಇನ್ನು ರಾಕಿಂಗ್ ಸ್ಟಾರ್ ದಂಪತಿಯ ಪುತ್ರಿ ಐರಾ ಮುದ್ದಾದ ತಮ್ಮನಿಗೆ ಮೊದಲ ಬಾರಿ ರಕ್ಷನಾಬಂದನದಂದು ರಾಖಿ ಕಟ್ಟುತ್ತಿರುವ ಕ್ಷಣಗಳ ಪೋಟೊವನ್ನು ನಟಿ ರಾಧಿಕ ಪಂಡಿತ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ‌.

ರಕ್ಷಾಬಂಧನವು ಕೂಡ ಒಂದು ಹಬ್ಬದ ಸಡಗರ ಎನ್ನಬಹುದು ಈ ರಕ್ಷಾಬಂಧನವನ್ನು ಇಡೀ ಬಾರತವೇ ಆಚರಿಸುತ್ತದೆ. ಅಣ್ಣ ತಮ್ಮಂದಿರು ಚೆನ್ನಾಗಿ ಇರಲಿ ನೂರಾರು ಕಾಲ ಬಾಳಲಿ ಎಂದು ಹರಸಿ ಅಕ್ಕ ತಂಗಿಯರು ಈ ರಕ್ಷನಾಬಂಧನದಂದು ರಾಖಿಯನ್ನು ಕಟ್ಟುತ್ತಾರೆ. ಹಾಗೆಯೇ ಸ್ಯಾಂಡಲ್ ವುಡ್ ನಟ ಯಶ್ ಅವರ ಮುದ್ದಿನ ಪುತ್ರಿ ಐರಾ ಕೂಡ ತಮ್ಮ ಮುದ್ದಿನ ತಮ್ಮನಿಗೆ ಮೊದಲಬಾರಿಗೆ ರಾಖಿಯನ್ನು ಕಟ್ಟಿ ಖುಷಿಪಟ್ಟಿದ್ದಾಳೆ. ಈ ಫೋಟೊಗಳು ಸಾಮಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ನಟಿ ರಾಧಿಕ ಪಂಡಿತ್ ಐರಾ ತನ್ನ ತಮ್ಮನಿಗೆ ಆರತಿಯನ್ನು ಬೆಳಗಿ ರಾಖಿ ಕಟ್ಟಿದ ಪೊಟೊಗಳನ್ನು ಅಂಚಿಕೊಂಡಿದ್ದಾರೆ. ಅವರ ಮೊದಲ ರಕ್ಷಾಬಂಧನ, ಜೊತೆಯಲ್ಲಿ ಹುಟ್ಟಿದವರ ಅಮೂಲ್ಯವಾದ ಬಂಧನಕ್ಕೆ ಬೆಲೆಯನ್ನು ಕಟ್ಟಲು ಹಾಗುವುದಿಲ್ಲ. ಎಂದು ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಪೊಟೊಗಳಲ್ಲಿ ಜೂನಿಯರ್ ರಾಖಿ ಬಿಳಿ ಬಣ್ಣದ ಪೈಜಾಮವನ್ನು ತೊಟ್ಟು ಮಿಂಚುತ್ತಿದ್ದರೆ, ಬೇಬಿ ಐರಾ ಕೇಸರಿ ಮತ್ತು ಗಿಳಿ ಹಸಿರು ಬಣ್ಣದ ಬಟ್ಟೆಯನ್ನು ತೊಟ್ಟು ಮುದ್ದಾಗಿ ಕಾಣಿಸುತ್ತಿದ್ದಾಳೆ.