Advertisements

ಅಯೋದ್ಯೆ ರಾಮ ಮಂದಿರ ಭೂಮಿ ಪೂಜೆಗೆ ಈ 8 ಕರ್ನಾಟಕದ ಮಂದಿಗೆ ಅಹ್ವಾನ, ಯಾರ್ಯಾರು ಗೊತ್ತಾ?

Temples

ದೇಶದ ಕನಸು ನನಸಾಗುವ ಸಂದರ್ಭ ಅನೇಕ ವರ್ಷಗಳ ಪ್ರಯತ್ನ, ಬಹಳ ಜನರ ಆಸೇ ಇಡೇರುವ ಸಮಯ. ರಾಮಮಂದಿರ ನಿರ್ಮಾಣದ ಭೂಮಿಯ ಪೂಜೆಗೆ ಇನ್ನೇನು ಕ್ಷಣಗಣನೆ ಆರಂಭವಾಗಿದ್ದು ಪೂಜೆಯ ಸಿದ್ಧತೆಗಳು ಭರ್ಜರಿಯಾಗಿ ನಡೆಯುತ್ತಿವೆ. ಆಯೋದ್ಯೆಯ ಶ್ರೀರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ದೇಶದ ಹಲವು ಭಾಗಗಳ ಗಣ್ಯರಿಗೆ ಆಹ್ವಾನ ನೀಡಲಾಗಿದ್ದು ಇದರಲ್ಲಿ ಕರ್ನಾಟಕದ 8 ಗಣ್ಯರಿಗೆ ವಿಶೇಷ ಆಹ್ವಾನ ನೀಡಲಾಗಿದೆ‌.

Advertisements

ವಿಶೇಷ ಆಹ್ವಾನಿತರು ಯಾರಾರು ಎಂದರೆ. ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಶೃಂಗೇರಿ ಮಠದ ವಿಧುಶೇಖರ ಭಾರತೀ ಸ್ವಾಮೀಜಿ, ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮೀಜಿ, ಸುತ್ತೂರು ಮಠದ ಶ್ರೀಗಳು, ಇಸ್ಕಾನ್ ನ ಮಧುಪಂಡಿತ ದಾಸ್, ಆರ್ಟ್ ಆಫ್ ಲಿವಿಂಗ್ ರವಿಶಂಕರ್ ಗುರೂಜಿ.

ಕರ್ನಾಟಕದ ಈ 8 ಮಂದಿಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿಂದ ವೀಶೇಷ ಅಹ್ವಾನ ನೀಡಲಾಗಿದೆ. ಆಗಸ್ಟ್ 5 ರಂದು ಶ್ರೀ ರಾಮಮಂದಿರ ನಿರ್ಮಾಣದ ಶಿಲನ್ಯಾಸ ಕಾರ್ಯಕ್ರಮ ನಡೆಯಲಿದೆ. ಇನ್ನೂ ಈ ಕಾರ್ಯಕ್ರಮಕ್ಕೆ ತಯಾರಿ ಕೂಡ ಜೋರಾಗಿದ್ದು ಅಯೋದ್ಯೆಯ ಗಲ್ಲಿ ಗಲ್ಲಿಗಳಲ್ಲಿ ಅಲಂಕಾರಗೊಂಡಿದೆ. ಹೆಚ್ಚಾಗಿ ಭದ್ರತೆಯನ್ನು ಕೂಡ ಕೈಗೊಳ್ಳಲಾಗಿದೆ‌. ಕೋವಿಡ್ ಹಿನ್ನೆಲೆ ಸಾಮಾಜಿಕ ಅಂತರ ಫಾಲನೆ ಕಡ್ಡಾಯ ಹಾಗೂ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಸಹ ಕೈಗೊಂಡಿದೆ.