Advertisements

ಈ ರೈತನ ಟೆಕ್ನಿಕ್ ನೋಡಲು ಇಲ್ಲಿಯವರೆಗೂ 10 ಲಕ್ಷ ಜನ ಬೇಟಿ ಕೊಟ್ಟಿದ್ದಾರೆ.. ಆ ಟೆಕ್ನಿಕ್ ಯಾವುದು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ವ್ಯವಸಾಯದಲ್ಲಿ ಪ್ರಯೋಗ ಮಾಡುವುದರ ಜೊತೆ ಶ್ರದ್ಧೆಯಿಂದ ಮಾಡಿದರೆ ಅದು ನಾವು ಊಹಿಸುವುದಕ್ಕಿಂತ ಎರಡು ಪಟ್ಟು ಲಾಭ ಕೊಡುತ್ತದೆ ಎಂದು ತೋರಿಸಿ ಕೊಟ್ಟಿದ್ದಾರೆ ಈ ರೈತ. ಐಟೇಕ್ ರೈತ ಎಂದು ಹೆಸರುವಾಸಿಯಾಗಿರುವ ಇವರ ತೋಟಕ್ಕೆ 10 ಲಕ್ಷ ಜನ ಬೇಟಿ ಕೊಟ್ಟಿದ್ದಾರೆ ಅಂದರೆ ನೀವೇ ಊಹೆ ಮಾಡಿಕೊಳ್ಳಿ ಈ ರೈತನ ಟೆ’ಕ್ನಿಕ್ ಎಷ್ಟು ಫೇಮಸ್ ಎಂದು.. ಉತ್ತರ ಪ್ರದೇಶದ ಬರ್ಬಂಗಿ ಜಿಲ್ಲೆಯ ಇವರ ಹೆಸರು ರಾಮ್ ಶರಣ್ ವರ್ಮಾ. ಯಾವುದೇ ಹೊಸ ಪ್ರಯೋಗ ಮಾಡದೇ ತಾತ ಮುತ್ತಾತರ ಕಾಲದಿಂದ ಮಾಡಿಕೊಂಡು ಬರುತ್ತಿದ್ದ ಒಂದೇ ಪದ್ದತಿಯ ವ್ಯವಸಾಯ ಮಾಡುತ್ತಿದ್ದ ತಂದೆಯನ್ನು ನೋಡಿ ರಾಮ್ ಅವರಿಗೆ ಬೇಜಾರ್ ಆಯ್ತು..

Advertisements

ಕಾರಣ ಬೆವರು ಸುರಿಸಿ ದುಡಿಯುತ್ತಿದ್ದ ತಂದೆಗೆ ಕೊನೆಗೆ ಒಂದು ರೂಪಾಯಿಯನ್ನು ಉಳಿಸಕೊಳ್ಳಲು ಆಗುತ್ತಿರಲಿಲ್ಲ. ಒಂದಷ್ಟು ಕಾಸನ್ನು ಜೋಡಿಸಿಕೊಂಡ ರಾಮು ಅವರು ಭಾರತದ ನಾನಾ ಪ್ರದೇಶಗಳಿಗೆ ಸುತ್ತಿದರು.. ಆಗಾಗಲೇ ಸಕ್ಸಸ್ ಆಗಿದ್ದ ರೈತರನ್ನು ಬೇಟಿ ಮಾಡಿ ಅವರಿಂದ ಮಾರ್ಗದರ್ಶನ ಪಡೆದು ವಾಪಸ್ ಊರಿಗೆ ಹೋಗಿ ನಾನು ಹೊಸ ವಿಧಾನದ ಮೂಲಕ ವ್ಯವಸಾಯ ಮಾಡುತ್ತೇನೆ ಎಂದು ತಂದೆಗೆ ಹೇಳಿದರು. ಆದರೆ ಅದಕ್ಕೆ ತಂದೆ ಒಪ್ಪಲಿಲ್ಲ.. ಆಗ ಒಂದು ಎಕರೆಯನ್ನು ಜಮೀನನ್ನು ತಂದೆಯಿಂದ ಪಡೆದ ರಾಮು ಅವರು ಅದರಲ್ಲಿ ಬಾಳೆ ಹಣ್ಣಿನ‌ ಗಿಡ ಹಾಕಿದರು. ಆಗಾದ್ರೆ ಅವರು ಉಪಯೋಗಿಸಿದ ವಿಧಾನ ಯಾವುದು ಗೊತ್ತಾ?

ಬನಾನ ಟಿ’ಷು ಕಲ್ಚರ್ ಅನ್ನು ಮಾಡಲು ಮುಂದಾದ ರಾಮು ಅವರು ಒಳ್ಳೆಯ ಪಸಲಿನ ಜೊತೆ ಒಳ್ಳೆಯ ರುಚಿಕರ ಬಾಳೆಹಣ್ಣು ಕೊಡುತ್ತಿದ್ದ ಗಿಡಗಳನ್ನು ತಂದು ತಾವೇ ಖುದ್ದಾಗಿ ತಮ್ಮ ತೋಟದಲ್ಲಿ ಟಿ’ಷು ಕಲ್ಚರ್ ಮೂಲಕ ಬಾಳೆ ಹಣ್ಣಿನ ಗಿಡಗಳನ್ನು ಬೆಳಸಿ ಅವುಗಳನ್ನು ತನ್ನ ಒಂದು ಎಕರೆ ಜಮೀನಿನಲ್ಲಿ ನೆಟ್ಟಿದರು.. ಒಂದು ಲಕ್ಷ ಇನ್ವೆಷ್ಟ್ ಮಾಡಿದ ರಾಮು ಅವರು ಗಳಿಸಿದ್ದು ನಾಲ್ಕು ಲಕ್ಷದಷ್ಟು ಲಾಭ. ಈಗೆ ವಿವಿಧ ಪ್ರಯೋಗಗಳನ್ನು ಮಾಡಿದ ರಾಮು ಅವರು ಬಳಸಿದ ನಾಲ್ಕು ತಂ’ತ್ರಗಳನ್ನು. ಮಣ್ಣಿನ ಫಲವತ್ತೆಯನ್ನು ಕಾಪಾಡಿ ಕೊಳ್ಳುವುದು.. ಕ್ರಾ’ಪ್ ರೊಟೇಷನ್ ಮಾಡೋದು.

ವಾತಾವರಣ ಅರ್ಥ ಮಾಡಿಕೊಂಡು ಒಳ್ಳೆಯ ತಳಿಯ ಬೀಜ ಉಪಯೋಗಿಸಿವುದು, ಆಗ ಹೊಸ ಹೊಸ ಪ್ರಯೋಗಗಳನ್ನು ಮಾಡುವುದು.. ಈಗೆ ತಂತ್ರಜ್ಞಾನ ಬೆಳಸಿಕೊಂಡ ರಾಮು ಅವರು ಈಗ 150 ಎಕರೆಯಲ್ಲಿ ವ್ಯವಸಾಯ ಮಾಡುತ್ತಿರುವ ರಾಮು ಅವರಿಗೆ ದೇಶ ವಿದೇಶಗಳಿಂದ ಆಹ್ವಾನ ಬರುತ್ತಿದೆ. ಇವರ ತೋಟಕ್ಕೆ ಇಲ್ಲಿಯವರೆಗೂ 10 ಲಕ್ಷ ಜನ ಬೇಟಿಕೊಟ್ಟಿದ್ದಾರೆ.. ಹಳ್ಳಿಯ ಜನ ನಗರಗಳಿಗೆ ಹೋಗದಂತೆ ನೋಡಿಕೊಳ್ಳುವುದೇ ನನ್ನ ಉದ್ದೇಶ ಎಂದು ಭಾವಿಸಿದ ರಾಮು ಅವರು..

21 ಸಾವಿರ ಜನರಿಗೆ ಉದ್ಯೋಗ ಕೊಟ್ಟು ಅವರಿಗೆ ಒಳ್ಳೆಯ ಕೂಲಿ ಕೊಡುತ್ತಿದ್ದಾರೆ.. ಒಂದು ಎಕರೆಯಲ್ಲಿ ವ್ಯವಸಾಯ ಪ್ರಾರಂಭಿಸಿದ ರಾಮು ಅವರು ಈ ದಿನ 150 ಎಕರೆಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ರಾಮು ಅವರಿಂದ ವ್ಯವಸಾಯದ ಟೆ’ಕ್ನಿಕ್ ತಿಳಿದುಕೊಂಡ ಅಷ್ಟು ಜನ ಇವತ್ತು ಕೃಷಿಯಲ್ಲಿ ಲಾಭ ಗಳಿಸುತ್ತಿದ್ದಾರೆ.. ತನ್ನ ಜೊತೆ ಸುತ್ತ ಮುತ್ತ ಇರುವವರು ಬೆಳೆಯಲಿ ಎಂದು ಆಶಿಸುವ ಒಬ್ಬೇ ಒಬ್ಬ ವ್ಯಕ್ತಿ ಅಂದರೆ ಅದು ರೈತ ಮಾತ್ರ ಅನಿಸುತ್ತದೆ. ಅದೇ ಕೆಲಸ ಮಾಡುತ್ತಿರುವ ರಾಮು ಅವರ ಆಲೋಚನೆ ಒಳ್ಳೆಯತನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..