ಕೊರೋನಾ ಹಿನ್ನಲೆ ಲಾಕ್ ಡೌನ್ ಆಗಿದ್ದ ಕಾರಣ ಜನರಿಗೆ ಮನೆಯಲ್ಲೇ ಕುಳಿತು ಕಾಲ ಕಳೆಯುವುದು ತುಂಬಾ ಕಷ್ಟವಾಗಿತ್ತು. ಆಗ 80ರ ದಶಕದಲ್ಲಿ ಪ್ರಸಾರವಾಗಿದ್ದ ರಾಮಾಯಣ ಧಾರಾವಾಹಿಯನ್ನ ಮತ್ತೆ ಮರು ಪ್ರಸಾರ ಮಾಡಬೇಕೆಂದು ಬೇಡಿಕೆ ಹೆಚ್ಚಾಗಿತ್ತು. ಹಾಗಾಗಿ ಮತ್ತೆ ಹಿಂದಿ ಅವತರಣಿಕೆಯ ಈ ಪೌರಾಣಿಕ ಧಾರಾವಾಹಿಯನ್ನ ಮರು ಪ್ರಸಾರಮಾಡಲಾಯಿತು.

ಬರೋಬ್ಬರಿ 33 ವರ್ಷಗಳ ಬಳಿಕ ಮರು ಪ್ರಸಾರವಾದ ‘ರಾಮಾಯಾಣ’ ಧಾರಾವಾಹಿಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಜನರಿಂದ ಸಿಕ್ಕಿತು. ಇದು ಎಷ್ಟರಮಟ್ಟಿಗೆ ಜನಪ್ರಿಯತೆ ಗಳಿಸಿತು ಎಂದರೆ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿ ವರ್ಲ್ಡ್ ರೆಕಾರ್ಡ್ ನ್ನಷ್ಟೇ ಸೃಷ್ಟಿ ಮಾಡಿತು. ಮಾಹಿತಿಗಳ ಪ್ರಕಾರ ಇಡೀ ಜಗತ್ತಿನಲ್ಲೆಯೇ ಅತೀ ಹೆಚ್ಚು ವೀಕ್ಷಣೆ ಕಂಡ ಹಾಗೂ ಜಗತ್ತಿನಾದ್ಯಂತ ಇದ್ದ ವೀಕ್ಷಕರ ಎಲ್ಲಾ ದಾಖಲೆಗಳನ್ನ ಮುರಿದು ಹಾಕಿದ, ದೊಡ್ಡ ವಿಶ್ವದಾಖಲೆಯನ್ನ ಮರುಪ್ರಸಾರವಾದ ರಾಮಾಯಣ ಧಾರವಾಹಿ ನಿರ್ಮಿಸಿತ್ತು.

ಇನ್ನು ಈಗ ಇದೇ ರಾಮಾಯಣ ಧಾರವಾಹಿ ಈಗ ಕನ್ನಡಕ್ಕೆ ಬರುತ್ತಿದೆ. ಹಿಂದಿ ಅವತರಣಿಕೆಯ ರಾಮಾಯಾಣ ಕನ್ನಡಕ್ಕೆ ಡಬ್ ಆಗಿದ್ದು, ಕನ್ನಡದ ಖಾಸಗಿ ವಾಹಿನಿ ಸ್ಟಾರ್ ಸುವರ್ಣ ಟಿವಿಯಲ್ಲಿ ಕನ್ನಡ ರಾಮಾಯಣದ ಪ್ರೋಮೋವನ್ನ ಪ್ರಸಾರ ಮಾಡಲಾಗುತ್ತಿದೆ. ಇನ್ನು ಯಾವ ಸಮಯಕ್ಕೆ ಪ್ರಸಾರವಾಗಲಿದೆ ಎಂದು ಮಾಹಿತಿ ಇಲ್ಲವಾದರೂ ಪ್ರೋಮೋ ಪ್ರಸಾರವಾಗುತ್ತಿರುವ ಹಿನ್ನಲೆಯಲ್ಲಿ ಸದ್ಯದಲ್ಲೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ರಾಮಾಯಣವನ್ನ ಕನ್ನಡ ಭಾಷೆಯಲ್ಲಿ ಕನ್ನಡಿಗರು ನೋಡಬಹುದಾಗಿದೆ. ಇನ್ನು ಸ್ಟಾರ್ ಸುವರ್ಣ ವಾಹಿನಿ ಈಗಾಗಲೇ ಹಿಂದಿಯ ‘ಮಹಾಭಾರತ’ ಸೇರಿದಂತೆ, ‘ರಾಧಾ ಕೃಷ್ಣ’ ಧಾರಾವಾಹಿಗಳನ್ನ ಪ್ರಸಾರ ಮಾಡುತ್ತಿದ್ದು ವೀಕ್ಷಕರ ಮನಗೆದ್ದಿವೆ.