Advertisements

ಶಿರಡಿ ಸಾಯಿಬಾಬಾ ಪವಾಡ! ನಡೆದ ಸತ್ಯ ಘಟನೆ ನೋಡಿ..

Adyathma

20ನೇ ಶತಮಾನದ ಪವಾಡಪುರುಷ ಶ್ರೀ ಶಿರಡಿ ಸಾಯಿಬಾಬಾ ಇವರು ಆಗಿನಕಾಲದಲ್ಲಿ ಕುದಿಯುವ ಅನ್ನಕ್ಕೆ ಕೈಹಾಕಿದ್ದರು, ನೀರಿನಿಂದ ದೀಪ ಬೆಳಗಿಸಿದರು, ಕುಷ್ಟ ರೋಗಿಯ ರೋಗವನ್ನು ವಾಸಿ ಮಾಡಿದ್ದರು. ನಂಬಿದವರನ್ನು ಕೈ ಹಿಡಿದು ನಡೆಸಿದರು. ಈಗಲೂ ಬಡವರ ಪಾಲಿಗೆ ಬಾಬಾ ಜೀವಂತವಾಗಿದ್ದಾರೆ. ಇದಕ್ಕೆ ಒಂದು ನಿದರ್ಶನ ಈ ಘಟನೆ. ಅದೇನಂತ ಹೇಳತೀವಿ ಈ ಲೇಖನವನ್ನು ಪೂರ್ಣವಾಗಿ ಓದಿ. 1952 ಆಗಸ್ಟ್ ನಲ್ಲಿ ನಡೆದ ಘಟನೆ ಇದಾಗಿದೆ. ಬಾಬಾ ಅವರ ಭಕ್ತನೋರ್ವ ಮಹಾರಾಷ್ಟ್ರದ ಸತಾರದಲ್ಲಿ ನಡೆಸಿದ್ದಾನೆ. ಈತನ ಹೆಸರು ರಾಮನಾರಾಯಣ. ವೃತ್ತಿಯಲ್ಲಿ ಟೇಲರಿಂಗ್ ಮಾಡುತ್ತಿದ್ದು, ಸುತ್ತಮುತ್ತಲಿನ ಜನರ ಬಟ್ಟೆ ಹೊಲಿದು ತನ್ನ ಜೀವನವನ್ನು ನಡೆಸುತ್ತಿದ್ದ. ಹೀಗೆ ಇವನ ಜೀವನ ಸಾಗಿತ್ತು. ಹೀಗಿರುವಾಗ ಒಂದು ದಿನ ಆತನ ಮನೆಯ ಪಕ್ಕದಲ್ಲಿ ಒಬ್ಬ ಬಾಡಿಗೆ ಬರುತ್ತಾನೆ.ಈತನ ಹೆಸರು ಸೈಯದ್ ಆಗಿದ್ದು ಈತ ಮುಸ್ಲಿಮ್ ಆಗಿರುತ್ತಾನೆ. ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿರುತ್ತಾನೆ. ಪ್ರತಿ ದಿನ ನಮಾಜ್ ಮಾಡುವಾಗ ಮಷೀನ್ ಶಬ್ದದಿಂದಾಗಿ ಆತನಿಗೆ ಕಿರಿಕಿರಿಯಾಗುತ್ತಿತ್ತು.

Advertisements

ನಮ್ಮ ಮಾಡುವ ಸಮಯದಲ್ಲಿ ನೀನು ಕಲಿಯಬೇಕು ಎಂದು ಕೂಡ ರಾಮನಾರಾಯಣ ಸೈಯದ್ ಹೇಳಿದ್ದ. ದಿನಕ್ಕೆ ಐದು ಬಾರಿ ನಮಾಜ್ ಬಿಡುವ ಸೈಯದ ನ ಮಾತು ನಂಬಿ, ದಿನಕ್ಕೆ ಐದು ಬಾರಿ ಕೆಲಸ ಬಿಟ್ಟರೆ ಜೀವನ ಸಾಗದು ಎಂದು ಕೆಲಸ ಮುಂದು ವರೆಸಿದ್ದಾನು. ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳವಾದವು. ಕೆಲದಿನಗಳಲ್ಲಿ ದೀಪಾವಳಿ ಹಬ್ಬ ಸಮೀಪಿಸುತ್ತಿತ್ತು. ಗ್ರಾಮದ ಜನರು ರಾಮನಾರಾಯಣ ಬಳಿಯಲ್ಲಿ ಬಟ್ಟೆ ಹೊಲಿಸಲು ಹೆಚ್ಚಾಗಿ ಬರತೊಡಗಿದರು. ಹೀಗೆ ಹೆಚ್ಚಿನ ಪ್ರಮಾಣದಲ್ಲಿ ಬಟ್ಟೆಗಳು ಹೊಲಿಯಲು ಬಂದಾಗ ರಾಮನಾರಾಯಣ್ ಹಗಲಿರುಳು ಎನ್ನದೆ ಹೊಲಿಯುತ್ತ ಲೆ ಇದ್ದ. ಹೀಗೆ ಬಟ್ಟೆ ಹೊಲಿಯೋದು ಹೆಚ್ಚುತ್ತಲೆ ಹೋಯಿತು. ಅದೊಂದು ದಿನ ಬಟ್ಟೆಗೆ ಹೆಚ್ಚಿನ ದಾರ ಮತ್ತು ಸೂಚಿಗಳು ಬೇಕಾದವು. ಬೇಕಾದ ಇನ್ನೂ ಕೆಲ ವಸ್ತುಗಳನ್ನು ತರಲೆಂದು ಒಂದು ದಿನ ಮಿರಾಜ್ ಪಟ್ಟಣಕ್ಕೆ ರಾಮ ನಾರಾಯಣ ಹೋಗುತ್ತಾನೆ. ಇತ್ತ ಇದೇ ಒಳ್ಳೆ ಸಮಯ ಎಂದು ಸೈಯದ್ ಆತನ ಮಷೀನ್ ಅನ್ನು ಕದ್ದು ಬಿಡುತ್ತಾನೆ. ಇದರಿಂದ ದುಃಖದಲ್ಲಿ ಮುಳುಗುತ್ತಾನೆ ರಾಮನಾರಾಯಣ. ಇದ್ದ ಒಂದೇ ಒಂದು ಯಂತ್ರವು ಇದೀಗ ಕಳ್ಳತನವಾಗಿದೆ.

ನಾನು ಜೀವನವನ್ನು ಹೇಗೆ ನಡೆಸಲಿ? ಸಾಯಿಬಾಬಾ ನಾನು ನಿನ್ನನ್ನೇ ನಂಬಿದ್ದೇನೆ ಎಂದು ಕಳೆದ ದಿನದಿಂದ ತನ್ನ ಭಕ್ತಿಯನ್ನು ಹೆಚ್ಚಿಗೆ ತೋರಿಸಿ ದಿನನಿತ್ಯ ಪೂಜೆ ಮಾಡುತ್ತಿರುತ್ತಾನೆ. ಈತ ಬಾಬಾ ಅವರ ಅಪ್ಪಟ ಭಕ್ತರಾಗಿದ್ದು ಗ್ರಾಮದಲ್ಲಿ ಎಲ್ಲರಿಗೂ ತಿಳಿದಿರುತ್ತದೆ. ಆತನಿಗೆ ಬಾಬಾರ ಮೇಲೆ ನಂಬಿಕೆ ಇರುತ್ತದೆ. ಕದ್ದ ಮಷೀನ್ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಇರುತ್ತದೆ. ಇದೆ ಕಾರಣಕ್ಕೆ ಪೊಲೀಸರಿಗೆ ಈ ವಿಷಯವನ್ನು ತಿಳಿಸುವುದಿಲ್ಲ. ಇದು ಸೈಯದ್ ನ ಕೆಲಸ ಎಂದು ತಿಳಿದಿತ್ತು. ಆದ್ರೆ ಇದರ ಬಗ್ಗೆ ನನಗೆ ಏನು ಗೊತ್ತಿಲ್ಲ ಎಂದಿದ್ದ ಸೈಯದ್. ಇದಾದ ಎರಡು ದಿನಗಳ ನಂತರ ಸೈಯದ್ ನ ಕೈತುಂಬಾ ಗುಳ್ಳೆಗಳು ಬರುತ್ತವೆ. ವೈದ್ಯರಿಂದಲೂ ವಾಸಿಯಾಗುವುದಿಲ್ಲ.

ಬದಲಾಗಿ ದಿನಗಳದಂತೆ ಹೆಚ್ಚಾಗಿ ಹೋಗುತ್ತವೆ. ಹೀಗೆ ಮುಂದುವರೆದಿದೆ ಆದಲ್ಲಿ ನಿಮ್ಮ ಕೈಗಳನ್ನು ಕತ್ತರಿಸಬೇಕಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಗಾಬರಿಗೊಂಡ ಸೈಯದ್ ಗೆ ರಾತ್ರಿ ತಾನು ಮಾಡಿದ ತಪ್ಪಿನ ಅರಿವಾಗುತ್ತದೆ. ಆಗ ರಾತ್ರಿಯೆ ಹೋಗಿ ರಾಮನಾರಾಯಣ ಬಳಿ ಹೋಗಿ ಕ್ಷಮೆಯಾಚಿಸುತ್ತೇನೆ. ಕದ್ದ ಮಷೀನ್ ಕೂಡ ವಾಪಸ್ ನೀಡುತ್ತಾನೆ ನೀನು ನಂಬಿದ ಸಾಯಿಬಾಬಾ ನನಗೆ ತಕ್ಕ ಶಿಕ್ಷೆ ನೀಡಿದ್ದಾನೆ. ನಾನು ಇಂದಿನಿಂದಲೇ ಬಾಬಾರವರ ಆಗುತ್ತೇನೆ ಎಂದು ಹೇಳುತ್ತಾನೆ. ತನ್ನ ತಪ್ಪಿನ ಅರಿವಾದ ಸೈಯದ್ ಈಗಲೂ ಸಾಯಿಬಾಬಾ ಅವರ ಅಪ್ಪಟ ಬಕ್ತನಾಗಿದ್ದಾನೆ. ಪ್ರತಿ ವರ್ಷ ರಾಮ ನಾರಾಯಣ ಜೊತೆ ಶಿರಡಿಗೆ ಹೋಗಿ ಪೂಜೆ ಸಲ್ಲಿಸಿ, ಬಾಬಾರ ದರ್ಶನವನ್ನು ಪಡೆಯುತ್ತಿದ್ದಾನೆ. ನಂಬಿದ ಭಕ್ತರ ಕೈಬಿಡುವುದಿಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.