Advertisements

ಈ ದೇವಸ್ಥಾನದಲ್ಲಿ ಈ ಕೋತಿಯೇ ಪೂಜಾರಿ.. ಏನೆಲ್ಲಾ ಮಾಡುತ್ತದೆ ಗೊತ್ತಾ? ಇಂತಹ ವಿಚಿತ್ರ ಎಲ್ಲಿಯೂ ನೋಡಲು ಸಾಧ್ಯವೇ ಇಲ್ಲ..

Temples

ನಮಸ್ಕಾರ ಸ್ನೇಹಿತರೆ ಭಾರತದಲ್ಲಿ ಸ್ಥಿತಗೊಂಡಿರುವ ಒಂದು ಅದ್ಭುತ ದೇವಸ್ಥಾನದಲ್ಲಿ ಆಂಜನೇಯ ರೂಪದಲ್ಲಿರುವ ಒಂದು ಕೋತಿ ದೇವಸ್ಥಾನದಲ್ಲಿ ಸ್ಥಾಪಿಸಿಕೊಂಡಿರುವ ಅಂತಹ ದೇವರಿಗೆ ಪೂಜೆ ಪುನಸ್ಕಾರ ತಿಲಕ ಹಚ್ಚುವುದು ಆರತಿ ಮಾಡುವುದು ಗಂಟೆ ಬಾರಿಸುವುದು ನೈವೇದ್ಯ ಮಾಡುವುದು ಹಾಗೂ ಇನ್ನಿತರ ಪಾಠಗಳನ್ನು ಮಾಡುತ್ತದೆ ಅಂದರೆ ಅಚ್ಚರಿ ಪಡಬೇಕಾಗಿಲ್ಲ. ಒಂದು ಮಾನ್ಯತೆ ಪ್ರಕಾರ ಈ ದೇವಸ್ಥಾನದಲ್ಲಿ ಅರ್ಚಕರಾಗಲಿ ಪೂಜಾರಿಯಾಗಲಿ ಎಲ್ಲವೂ ಆಂಜನೇಯ ರೂಪದಲ್ಲಿರುವ ಈ ಕೋತಿಯೆ ಹಾಗಿದೆ, ಹೌದು ಸ್ನೇಹಿತರೆ ನೀವು ಕೇಳಿದ್ದು ನಿಜ ನೋಡಿದ್ದು ನಿಜ ಇದು ವಿಶ್ವದಲ್ಲಿ ಇಂತಹ ವಿಚಿತ್ರ ದೇವಸ್ಥಾನ ನೀವು ಎಲ್ಲಿಯೂ ನೋಡಲು ಸಾಧ್ಯವೇ ಇಲ್ಲ.. ಯಾಕೆಂದರೆ ಒಂದು ದೇವಸ್ಥಾನದ ಸಂಪೂರ್ಣ ಜವಾಬ್ದಾರಿಯನ್ನು ಈ ಒಂದು ಕೋತಿ ಮಾಡುತ್ತದೆ ಅಂದರೆ ನಿಜಕ್ಕೂ ಅಚ್ಚರಿ ಪಡೆಯುವಂಥ ವಿಷಯವಾಗಿದೆ. ಈ ವಿಷಯ ಕೇಳಿ ನಿಮಗೂ ಕೂಡ ಆಶ್ಚರ್ಯ ವಾಗಿರಬೇಕು.. ಹಾಗಾದರೆ ಇಂತಹ ವಿಸ್ಮಯಕಾರಿ ದೇವಸ್ಥಾನ ಆಗಲಿ, ಆ ಕೋತಿ ಆಗಲಿ ಎಲ್ಲಿದೆ ಹೇಗಿದೆ ಎಂಬುವುದರ ಆಶ್ಚರ್ಯಕರ ವಿಷಯವನ್ನು ನೋಡಿ..

[widget id=”custom_html-3″]

Advertisements

ಭಾರತ ದೇಶದ ರಾಜಸ್ಥಾನ್ ರಾಜ್ಯದ ಅಜ್ಮೀರ್ ನಲ್ಲಿ ಒಂದು ವಿಸ್ಮಯಕಾರಿ ಆಂಜನೇಯನ ದೇವಾಲಯವಿದೆ. ಹಿಂದೆ ಇಲ್ಲಿಯೇ ಮಹಾಭಾರತದ ಸಮಯದಲ್ಲಿ ಭಜರಂಗಬಲಿ ಭೀಮನ ಗರ್ವವನ್ನು ಮುರಿದಿದ್ದ ಎಂದು ನಂಬಲಾಗಿದೆ. ಈ ದೇವಸ್ಥಾನವನ್ನು ಇಲ್ಲಿ ಬಜರಂಗ್ ಗಾರ್ಡನ್ ಮಂದಿರ್ ಎಂದು ಕರೆಯಲಾಗುತ್ತದೆ. ಅಜ್ಮೀರ್ ನಲ್ಲಿ ಇರುವಂತಹ ಸುಂದರ ಸರೋವರದ ಪಕ್ಕದಲ್ಲಿ ಅದ್ಭುತ ದೇವಸ್ಥಾನ ಸ್ಥಿತಗೊಂಡಿದೆ. ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಈ ಅದ್ಭುತವಾದ ನೈಸರ್ಗಿಕ ಆಂಜನೇಯ ದೇವಸ್ಥಾನಕ್ಕೆ ಪ್ರತಿನಿತ್ಯ ಭೇಟಿ ಕೊಡುತ್ತಾರೆ. ಈ ದೇವಸ್ಥಾನದ ವಿಶೇಷ ಏನೆಂದರೆ ನಿಮಗೆ ದೇಹದಲ್ಲಿ ಯಾವುದೇ ರೀತಿಯ ಶಕ್ತಿ ಕುಗ್ಗಿದಾಗ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು ಆಂಜನೇಯನಿಗೆ ಒಂದು ಬಾಳೆಹಣ್ಣು ನೈವೇದ್ಯ ಮಾಡಿದರೆ ಸಾಕು ನಿಮಗೆ ನಿಮ್ಮಲ್ಲಿ ಬೇಕಾಗುವಂತಹ ಶಕ್ತಿಯೂ ವಾಪಸ್ಸು ದೊರೆಯುತ್ತದೆ ಎನ್ನುವ ಅಪಾರ ನಂಬಿಕೆ ಇಲ್ಲಿನ ಭಕ್ತಿ ಮಂಡಳಿಯಲ್ಲಿದೆ. ಇಲ್ಲಿರುವ ಆಂಜನೇಯನ ಮೂರ್ತಿಯು ವಿಶ್ವದಲ್ಲಿಯೇ ಅತಿ ಸುಂದರವಾಗಿದೆ. ಕಾರಣ ಆಂಜನೇಯನ ಮೂಗು ಹಾಗೂ ಬಾಯಿ ಒಂದು ರಂದ್ರದ ಹಾಗೆ ಇದೆ ಇಲ್ಲಿನ ಮಾನ್ಯತೆ ಪ್ರಕಾರ ಈ ರಂದ್ರದ ಮೂಲಕ ಏನನ್ನಾದರೂ ನೀವು ನೈವೇದ್ಯ ಮಾಡಿದರೆ ನೇರವಾಗಿ ಆಂಜನೇಯನಿಗೆ ತಲುಪುತ್ತದೆ ಎಂದು ಭಕ್ತರ ನಂಬಿಕೆಯಾಗಿದೆ.

[widget id=”custom_html-3″]

ಈ ದೇವಸ್ಥಾನದ ವಿಸ್ಮಯ ಇಲ್ಲಿದೆ ಹೌದು ಅದು ಏನೆಂದರೆ ಇಲ್ಲಿರುವ ಕೋತಿ ಈ ದೇವಸ್ಥಾನದ ಮುಖ್ಯ ಆಕರ್ಷಣೆಯೇ ರಾಮು ಎಂಬ ಕೋತಿ, ರಾಮು ಈ ದೇವಸ್ಥಾನದಲ್ಲಿ ಸ್ಥಿತ ಗೊಂಡಿರುವ ಮಾರುತಿಯ ಪೂಜೆಯನ್ನು ಭಕ್ತಿ ಭಾವದಿಂದ ನಿಷ್ಠೆಯಿಂದ ಪ್ರತಿನಿತ್ಯ ಮಾಡುತ್ತಾನೆ. ಅಂದಹಾಗೆ ಈ ದೇವಸ್ಥಾನದಲ್ಲಿ ರಾಮು ಆಂಜನೇಯನ ಅಭಿಷೇಕ ಪೂಜೆ, ಪುನಸ್ಕಾರ ನೈವೇದ್ಯ ಆಗಲಿ ಗಂಟೆ ಬಾರಿಸುವುದಾಗಲಿ ಇಲ್ಲಿ ಬರುವ ಭಕ್ತರಿಗೆ ಪ್ರಸಾದ ನೀಡುವುದಾಗಲಿ ಹಾಗೂ ಆಶೀರ್ವಾದವನ್ನು ಕೊಡುವುದಾಗಲಿ ಎಲ್ಲ ಕಾರ್ಯಕ್ರಮಗಳನ್ನು ಚಾಚು ತಪ್ಪದೆ ಆನಂದವಾಗಿ ಸಲೀಸಾಗಿ ಮಾಡುತ್ತಾನೆ. ಇದೇ ಕಾರಣ ಇಲ್ಲಿಗೆ ಬರುವ ಭಕ್ತರು ಮೊದಲು ಆಂಜನೇಯನ ದರ್ಶನ ಪಡೆದು ಆಮೇಲೆ ಈ ರಾಮುವಿನ ದರ್ಶನ ಕೂಡ ಪಡೆಯುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಈ ದೇವಸ್ಥಾನದಲ್ಲಿ ನುಡಿಯುವ ಹನುಮಾನ್ ಚಾಲೀಸ ವನ್ನು ರಾಮು ಆನಂದದಿಂದ ಭಕ್ತಿಭಾವದಿಂದ ಕೇಳುತ್ತಾನೆ. ಹನುಮಾನ್ ಚಾಲೀಸ ಮುಗಿದ ನಂತರ ರಾಮು ದೇವಸ್ಥಾನದ ಗಂಟೆಯನ್ನು ಕೂಡ ಬಾರಿಸುತ್ತಾನೆ. ಈ ಕಾರ್ಯಕ್ರಮವನ್ನು ನೋಡುವ ಈ ಎಲ್ಲಾ ಭಕ್ತ ಮಂಡಳಿ ರಾಮುವನ್ನು ಆಂಜನೇಯನ ರೂಪವೆಂದೇ ನಂಬಿದ್ದಾರೆ. ಅಂದ ಹಾಗೆಯೇ ಈ ಆಂಜನೇಯ ಭಕ್ತ ಈ ದೇವಸ್ಥಾನಕ್ಕೆ ಬಂದಿದ್ದಾದರೂ ಹೇಗೆ ಎನ್ನುವ ಕುತೂಹಲಕಾರಿ ವಿಷಯವನ್ನು ಮೊದಲು ತಿಳಿಯೋಣ.

[widget id=”custom_html-3″]

ರಾಮುವಿನ ಭೂತಕಾಲವನ್ನು ಈ ದೇವಸ್ಥಾನದ ಚೌಕಿದಾರ ಆದಂತಹ ಓಂಕಾರ್ ಸಿಂಗ್ ಹೇಳುವ ಪ್ರಕಾರ ರಾಮು ಅವರ ಅತ್ಯಂತ ಪ್ರೀತಿಯ ಕೋತಿ ಗಿಂತ ಒಬ್ಬ ವ್ಯಕ್ತಿ ಆಗಿದ್ದಾರೆಂದು ನಂಬಿದ್ದಾರೆ. ಸುಮಾರು 7 ರಿಂದ 8 ವರ್ಷಗಳ ಹಿಂದೆ ಒಬ್ಬ ಕೋತಿ ಆಡಿಸುವವ ಈ ದೇವಸ್ಥಾನದ ಹತ್ತಿರ ಅನಾರೋಗ್ಯದಿಂದ ಬಳಲುತ್ತಿದ್ದ ಈ ಕೋತಿಯನ್ನು ಇಲ್ಲಿಯೇ ಬಿಟ್ಟು ಹೋಗಿದ್ದ. ಆ ಸಮಯದಲ್ಲಿ ಒಂದು ರಾತ್ರಿ ಚಳಿಯಿಂದ ನಡುಗುತ್ತಿದ್ದ ಕೋತಿಯ ಮೇಲೆ ಓಂಕಾರ್ ಸಿಂಗ್ ಅವರ ಕಣ್ಣು ಬೀಳುತ್ತದೆ. ಆಗ ಓಂಕಾರ್ ಸಿಂಗ್ ಆ ಕೋತಿಯ ಆರೈಕೆಯನ್ನು ಮಾಡಿ ಸಾ’ಯು’ತ್ತಿದ್ದ ಕೋತಿಯನ್ನು ಬದುಕಿಸುತ್ತಾರೆ. ಸ್ವಲ್ಪ ದಿನಗಳ ನಂತರ ಆ ಕೋತಿ ಚೇತರಿಸಿ ಕೊಳ್ಳುತ್ತದೆ. ಹಾಗೂ ಓಂಕಾರ್ ಸಿಂಗ್ ಅವರ ಜೊತೆಯಲ್ಲಿ ದೇವಸ್ಥಾನದಲ್ಲಿ ಕಾಲವನ್ನು ಕಳೆಯಲು ಪ್ರಾರಂಭ ಮಾಡುತ್ತದೆ. ಹೇಳಿದ ಒಂದೊಂದು ಕೆಲಸವನ್ನು ಚಾಚು ತಪ್ಪದೆ ಮಾಡಲು ಪ್ರಾರಂಭಿಸುತ್ತದೆ. ಹೀಗಿರುವಾಗ ಓಂಕಾರ್ ಸಿಂಗ್ ಕೋತಿಗೆ ರಾಮು ಎಂದು ನಾಮಕರಣ ಮಾಡುತ್ತಾರೆ.

[widget id=”custom_html-3″]

ನೋಡು ನೋಡುತ್ತಲೇ ಆ ರಾಮು ಪೂಜಾರಿಗಳ ಕೆಲಸ ಓಂಕಾರ್ ಸಿಂಗ್ ಅವರ ಕೆಲಸ ಹಾಗೂ ಇನ್ನಿತರ ದೇವಸ್ಥಾನದ ಕೆಲಸಗಳನ್ನು ಸಂಪೂರ್ಣವಾಗಿ ಮಾಡಲು ಪ್ರಾರಂಭಿಸುತ್ತದೆ. ಮನುಷ್ಯರಿಂದ ಆಗದೇ ಇರುವಂತಹ ಹಲವಾರು ಕೆಲಸಗಳನ್ನು ರಾಮು ಖುದ್ದಾಗಿ ಮಾಡಲು ಪ್ರಾರಂಭಿಸುತ್ತಾನೆ. ಹೀಗೆ ಇಲ್ಲಿರುವ ಆಂಜನೇಯ ಎಷ್ಟು ಮುಖ್ಯವಾಗಿದ್ದನೊ ಅಷ್ಟೇ ಮುಖ್ಯ ಈ ದೇವಸ್ಥಾನದಲ್ಲಿರುವ ಈ ಕೋತಿ ಅಂದರೆ ರಾಮು ಕೂಡ ಅಂದರೆ ತಪ್ಪಾಗಲಾರದು. ಇದೇ ಕಾರಣ ರಾಮು ಇಲ್ಲಿ ಆಂಜನೇಯನ ರೂಪವೆಂದೇ ನಂಬಿ ಎಲ್ಲರೂ ಆಶೀರ್ವಾದವನ್ನು ಪಡೆಯುತ್ತಾರೆ. ಸ್ನೇಹಿತರೆ ನಿಮಗೂ ಕೂಡ ಎಂದಾದರೂ ಅಜ್ಮೀರ್ ಗೆ ಹೋಗುವ ಅವಕಾಶ ಸಿಕ್ಕರೆ ಈ ಆಂಜನೇಯನ ದೇವಸ್ಥಾನಕ್ಕೆ ಬೇಟಿ ಕೊಡಿ ಜೊತೆಗೆ ಆ ರಾಮುವಿನ ಆಶೀರ್ವಾದ ಪಡೆಯಿರಿ ಎಂದು ನಾವು ಕೂಡ ಆಶಿಸುತ್ತೇವೆ..