Advertisements

ಸಿನಿಮಾ ರಂಗದಲ್ಲಿ ಬಹಳ ಬೇಡಿಕೆಯಿದ್ದ ನಟಿ ರಮ್ಯಾ ಎಲ್ಲಿ ಹೋದ್ರು.. ಯಾಕೆ ನಟಿಸುತ್ತಿಲ್ಲ ಗೊತ್ತಾ?

Cinema

ಪ್ರಿಯ ಸ್ನೇಹಿತರೆ ನಮಸ್ಕಾರ ಈ ಸಿನೆಮಾ ಇಂಡಸ್ಟ್ರಿ ಎಂಬುವುದೇ ಒಂದು ಅದ್ಭುತ. ಇಲ್ಲಿ ಅನೇಕ ಜ‌ನ‌ ಕಲಾವಿದರು ಬಣ್ಣ ಹಣ್ಣಿ ತಮ್ಮ ಲೈಪ್ನಾ ಕಲರ್ ಫುಲ್ ಮಾಡಿಕೊಂಡಿದ್ದಾರೆ. ಇದರಲ್ಲಿ ಅದ್ಭುತ ನಟನೆ ಮಾಡಿ ಸಿನಿ ಪ್ರಿಯರನ್ನು ಮೆಚ್ಚಸಿ ಕನ್ನಡದ ಟಾಪ್ ನಟನಟಿಯರಾಗಿಯೂ ಮಿಂಚಿದವರು ಕಣ್ಮುಂದೆ ಇದ್ದಾರೆ. ಚಂದನವನ ಎಂದೇ ಖ್ಯಾತಿ ಪಡೆದಿರುವ ಕನ್ನಡ ಸಿನೆಮಾ ಇಂಡಸ್ಟ್ರಿ ಯು ತನ್ನದೆ ಆದ ಕಲಾ ಬಳಗವನ್ನು ಹೊಂದಿದೆ. ಶಿವರಾಜ್ ಕುಮಾರ್ ಅವರನ್ನು ಕನ್ನಡದ ಸ್ಯಾಂಡಲ್ ವುಡ್ ಕಿಂಗ್ ಎಂದರೆ ಸ್ಯಾಂಡಲ್ ವುಡ್ ಕ್ವಿನ್ ಎಂದು ಮೋಹಕ ತಾರೆ ರಮ್ಯಾರನ್ನು ಕರೆಯುತ್ತಾರೆ. ಇವರ ಸೌಂದರ್ಯ, ವಿಭಿನ್ನ ನಟನಾ ಕೌಶಲ್ಯದ ಮೂಲಕ ಸಿನಿ ಪ್ರಿಯರ ಮನಗೆದ್ದು ಕನ್ನಡ ಟಾಪ್ ನಟಿಯರಲ್ಲಿ ‌ಒಬ್ಬರಾಗಿದ್ದು ಚಂದನವನದ ರಾಣಿ ಎಂಬ ಪಟ್ಟವನ್ನು ತಮ್ಮ ಮುಡಿಗೆರಿಸಿಕೊಂಡವರು ನಟಿ ರಮ್ಯಾ.

[widget id=”custom_html-3″]

Advertisements

ಸದ್ಯ ಸಿನೆಮಾದಿಂದ ಕೊಂಚ ‌ಮರೆಯಾಗಿರುವ ರಮ್ಯಾಳ ಕುರಿತ ಸುದ್ದಿ ಹರಿದಾಡುತ್ತಿದೆ ಅದು ಏನು ಅಂತೀರಾ ಹಾಗಿದ್ದರೆ ನೋಡಿ.. ಪುನೀತ್ ರಾಜ್‍ಕುಮಾರ್ ನಟನೆಯ ಅಭಿ ಚಿತ್ರದ‌ ಮೂಲಕ ಸಿನೆ ಲೋಕಕ್ಕೆ ಪಾದಾರ್ಪಣೆ ಮಾಡಿದ ರಮ್ಯಾ ಮೊದಲ ಚಿತ್ರದಲ್ಲೆ ಹಿಟ್ ಪಡೆದು ಪಾಪುಲರ್ ಆದ ನಟಿ. ಇದಾದ ನಂತರ ಅನೇಕ‌ ಸಿನೆಮಾಗಳಲ್ಲಿ‌ ನಟಿಸುವ ಅವಕಾಶ ಪಡೆದು ಕೊಂಡ ನಟಿ‌ ರಮ್ಯಾ ಮೋಹಕ‌ ತಾರೆ ಎಂಬ ಹೆಸರನ್ನು ಗಳಿಸಿಕೊಂಡರು. ಬಾಗ್ಯಾದ ಬಳೆಗಾರ, ಹುಚ್ಚ, ಮೀರಾ ಮಾಧವ ರಾಘವ, ಅಮೃತ ಧಾರೆ, ಎಕ್ಸ ಕ್ಯೂಸ್ ಮಿ ಹೀಗೆ ಅದ್ಬುತ ಕಥೆಗಳಲ್ಲಿ ನಟಿಸಿ ಮತ್ತಷ್ಟು ಹೆಚ್ಚು ಅವಕಾಶಗಳನ್ನು ಪಡೆದುಕೊಂಡಿದ್ದರು. ಅನಂತರ ಪುನೀತ್ ರಾಜ್‍ಕುಮಾರ್ ಅವರ ಜೊತೆ ಅರಸು, ಶಿವರಾಜ್ ಕುಮಾರ್ ಅವರೊಂದಿಗೆ ಆರ್ಯನ, ಉಪೇಂದ್ರ ನಟನೆಯ ಕಠಾರ ವೀರ ಸುರಸುಂದರಾಂಗಿ, ಯಶ್ ಜೊತೆ ಲಕ್ಕಿ ಹೀಗೆ ಹಲವು ಕನ್ನಡದ‌ ಟಾಪ್‌‌ ನಟರೊಂದಿಗೆ ತರೆ ಹಂಚಿಕೊಂಡವರು ರಮ್ಯಾ.

[widget id=”custom_html-3″]

ಇದಾದ ನಂತರ ಇವರಿಗೆ ಹೆಚ್ಚು ಹೆಸರು ತಂದು ಕೊಟ್ಟಿದ್ದು ಸಂಜು ವಿಡ್ಸ್ ಗೀತಾ. ನಂತರ ರಮ್ಯಾ ಅವರು ಸಿನೆಮಾ ಕ್ಷೇತ್ರ ಕಾಣಿಸಿಕೊಂಡಿದ್ದು ಕಡಿಮೆ. ವಿದೇಶಿದಲ್ಲಿ‌ ನೆಲೆಸಿದ ರಮ್ಯಾ ಇದೀಗ ಕೆಲವೊಮ್ಮೆ ಸುದ್ದಿಯಲ್ಲಿದ್ದು ಕ್ಯಾಮರಾ ಮುಂದೆ ಕಾಣಿಸಿಕೊಳ್ಳುತ್ತಾರೆ. ನಟಿಯಾಗಿ ಮಾತ್ರವಲ್ಲದೆ ರಮ್ಯಾ ಕೆಲಕಾಲ ರಾಜಕೀಯ ಕ್ಷೇತ್ರದಲಿಯೂ ಕೆಲಕಾಲ ಸುದ್ದಿಯಲ್ಲಿದ್ದರೂ. ಟಾಪ್ ನಟಿ ರಮ್ಯಾ ನಟನೆ ಮಾತ್ರವಲ್ಲದೆ ಹಲವು ವಿವಾದಾತ್ಮಕ ಸುದ್ದಿಗಳಿಗು ಗುರಿಯಾಗಿದ್ದರು.ಅದೇನೆಂದರೆ ಹಿರಿಯ ನಟ ಅಂಬರೀಶ್ ಅವರು ವಿಧಿವಶರಾಗಿದ್ದಾಗ ಅಂತ್ಯ ಸಂಸ್ಕಾರಕ್ಕೆ ಬರದಿರುವುದು. ಹೌದು ಹೀಗೆ ಅವರ ವರ್ತನೆಯ ಕುರಿತು ಹಲವರು ಟೀಕಿಸಿದರು. ಈ ಕುರಿತಾಗಿ ರಮ್ಯಾ ತನಗೆ ಆರೋಗ್ಯ ತೊಂದರೆಯ ಕುರಿತಾಗಿ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದರು.

[widget id=”custom_html-3″]

ಕನ್ನಡ ಜನಪ್ರಿಯ ಪ್ರಸಾರ ವಾನಿಯಾದ ಜೀ ಕನ್ನಡ ಪ್ರಸಾರವಾಗುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ನಿರೂಪಣೆಯ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ರಮ್ಯಾ ಅವರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದ್ದು. ಈಗಾಗಲೇ ಜೀ ಕನ್ನಡದ ತಂಡ ಈ ಕುರಿತಂತೆ ರಮ್ಯಾರವರ ಜೊತೆಗೆ ಸಂಪರ್ಕದಲ್ಲಿದೆ ಎಂದು ಹೇಳಲಾಗುತ್ತಿದೆ. ರಮ್ಯಾ ಅವರು ಈ ಕಾರ್ಯಕ್ರಮಕ್ಕೆ ಬರುವುದಕ್ಕೆ ಒಪ್ಪುತ್ತಾರಾ ಇಲ್ಲವೋ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ. ಒಂದು ವೇಳೆ ರಮ್ಯಾರವರು ಒಪ್ಪಿದರೆ ಖಂಡಿತವಾಗಿ ಇದು ಅಭಿಮಾನಿಗಳಿಗೆ ಸಾಕಷ್ಟು ದೊಡ್ಡ ಮಟ್ಟದ ಸುದ್ದಿಯಾಗಲಿದೆ. ಹಲವು ವರ್ಷಗಳಿಂದ ಕ್ಯಾಮರೆದಿಂದ ದೂರ ಉಳಿದಿರುವ ನಟಿ ರಮ್ಯಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರಾ ಕಾದು ನೋಡಬೇಕಿದೆ..

[widget id=”custom_html-3″]