Advertisements

ನಾನು ಬದುಕುವ ಸಾಧ್ಯತೆಯೇ ಕಡಿಮೆ ಇತ್ತು ಎಂದು ಕಣ್ಣೀರು ಹಾಕಿದ ಬಾಹುಬಲಿಯ ಬಲ್ಲಾಳದೇವ !

Cinema

ನಮಸ್ತೇ ಸ್ನೇಹಿತರೇ, ಟಾಲಿವುಡ್ ನ ಖ್ಯಾತ ನಟರಲ್ಲಿ ರಾಣಾ ದಗ್ಗುಬಾಟಿ ಕೂಡ ಒಬ್ಬರು. ಇವರ ಹೆಸರಿನೊಂದಿಗೆ ನೆನಪಾಗುತ್ತೆ ಬಾಹುಬಲಿ ಚಿತ್ರದ ಬಲ್ಲಾಳದೇವನ ಪಾತ್ರ. ಇಡೀ ಭಾರತೀಯ ಚಿತ್ರರಂಗವೇ ಹಿಂತಿರುಗಿ ನೋಡಿದ್ದ ಬಾಹುಬಲಿ ಚಿತ್ರದ ಬಲ್ಲಾಳದೇವನ ಪಾತ್ರದಿಂದಾಗಿ ನಟ ರಾಣಾ ಕೂಡ ಫೇಮಸ್ ಆದರು. ಅಷ್ಟೇ ಅಲ್ಲದೆ ಬಾಲಿವುಡ್ ನಿಂದಲೂ ಅವರಿಗೆ ಅವಕಾಶಗಳು ಹುಡುಕಿಕೊಂಡು ಬಂದವು. ಕೆಲ ತಿಂಗಳ ಹಿಂದಷ್ಟೇ ನಟ ರಾಣಾ ದಗ್ಗುಬಾಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದರ ನಡುವೆಯೇ ಈಗ ತಮ್ಮ ಆರೋಗ್ಯದ ಬಗ್ಗೆ ಬಹಿರಂಗ ಮಾಡಿರುವ ರಾಣಾ ಕಣ್ಣೀರು ಹಾಕಿದ್ದಾರೆ.

ಹೌದು, ಖ್ಯಾತ ನಟಿ ಸಮಂತಾ ಅವರು ತೆಲುಗಿನ ಖಾಸಗಿವಾಹಿನಿಯಲ್ಲಿ ನಡೆಸಿಕೊಡುತ್ತಿರುವ ಟಾಕ್ ಶೋ ನಲ್ಲಿ ಗೆಸ್ಟ್ ಆಗಿ ಭಾಗವಹಿಸಿದ್ದ ರಾಣಾ ತಮಗೆ ಉಂಟಾಗಿದ್ದ ತೊಂದರೆಯೊಂದರ ಬಗ್ಗೆ ನೆನೆದು ಭಾವುಕರಾಗಿದ್ದಾರೆ. ನಾನು ಬದುಕಿ ಉಳಿಯುವ ಸಾಧ್ಯತೆಯೇ ಕಡಿಮೆ ಎಂದು ವೈದ್ಯರು ಹೇಳಿದ್ದರು ಎಂದು ರಾಣಾ ಕಣ್ಣೀರು ಹಾಕುತ್ತಾ ತಾವು ಎದುರಿಸಿದ ಅನಾರೋಗ್ಯದ ತೊಂದರೆಯ ಬಗ್ಗೆ ಹೇಳಿಕೊಂಡಿದ್ದಾರೆ. ವೈದ್ಯರು ಹೇಳಿದ ಹಾಗೆ ನನಗೆ ಹೃದಯದ ಸಮಸ್ಯೆಯ ಜೊತೆಗೆ ಚಿಕ್ಕಂದಿನಿಂದಲೇ ಬಿಪಿ ಇದೆ. ಇನ್ನು ಕಿಡ್ನಿ ವೈಫಲ್ಯವಾಗಿರುವ ಕಾರಣದಿಂದಾಗಿ ಶೇ ೭೦ರಷ್ಟು ಭಾಗ ದೇಹದಲ್ಲಿ ಅನಾರೋಗ್ಯದ ತೊಂದರೆಗಳಾಗುವ ಸಾಧ್ಯತೆ ಇದೆ.

Advertisements

ಹಾಗಾಗು ನೀವು ಉಳಿಯುವ ಸಾಧ್ಯತೆಗಳು ಕಡಿಮೆ ಇವೆ ಎಂದು ಡಾಕ್ಟರ್ ಗಳು ಹೇಳಿದ್ದರು ಎಂದು ರಾಣಾ ಹೇಳಿದ್ದಾರೆ. ಇನ್ನು ಈಗಾಗಲೇ ಈ ಕಾರ್ಯಕ್ರಮದ ಪ್ರೊಮೋ ಪ್ರಸಾರವಾಗಿದ್ದು ನಟ ರಾಣಾ ದಗ್ಗುಬಾಟಿ ಕಣ್ಣೇರು ಹಾಕಿರುವುದನ್ನ ನೋಡಿ ಕಾರ್ಯಕ್ರಮದಲ್ಲಿದ್ದ ಪ್ರೇಕ್ಷಕರು ಕೂಡ ಕಣ್ಣೀರು ಹಾಕಿರುವುದನ್ನ ಆ ಪ್ರೋಮೋದಲ್ಲಿ ನೋಡಬಹುದಾಗಿದೆ. ಇನ್ನು ಕಿಡ್ನಿ ವೈಫಲ್ಯ ಸೇರಿದಂತೆ ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವ ರಾಣಾ ಹೈದರಾಬಾದ್ ಹಾಗೂ ಮುಂಬೈನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ತೆಗೆದುಕೊಂಡಿದ್ದರೂ ಯಾವುದೇ ಚೇತರಿಕ ಕಾಣಲಿಲ್ಲ. ಹಾಗಾಗಿ ಅವರು ಹೆಚ್ಚಿನ ಚಿಕಿತ್ಸೆಗಾಗಿ ಚಿಕಾಗೋಗೆ ಹೋಗಿದ್ದರು.