Advertisements

ಪ್ರೇಯಸಿಯ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡ ರಾಣಾ – ನಿಚ್ಚಿತಾರ್ಥ ಸಂಭ್ರಮದ ಈ ಫೋಟೋಸ್ ನೋಡಿ

Cinema

ಇತ್ತೀಚೆಗಷ್ಟೇ, ಬಾಹುಬಲಿಯ ಬಲ್ಲಾಳದೇವ ಅಲಿಯಾಸ್ ರಾಣಾ ದಗ್ಗುಬಾಟಿ ತಾನು ಮದುವೆಯಾಗುವ ಹುಡುಗಿಯ ಫೋಟೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದು, ‘ಕೊನೆಗೂ ಅವಳು ಓಕೆ ಅಂದಳು ಅಂತ ಪೋಸ್ಟ್ ಮಾಡಿದ್ದರು.

Advertisements

ಹೌದು, ಚಿತ್ರರಂಗದ ಯಾವುದೇ ಹಿನ್ನಲೆ ಇಲ್ಲದ, ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಆಗಿರುವ ಮಿಹಿಕಾ ಬಜಾಜ್ ಎನ್ನುವವರ ಜೊತೆ ಬುಧವಾರವಷ್ಟೇ, ರಾಣಾ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಇನ್ನು ಕರೋನಾ ಹಿನ್ನಲೆ ಲಾಕ್ ಡೌನ್ ಇದ್ದರೂ ಸಹ ಟಾಲಿವುಡ್ ನಲ್ಲಿ ಸೆಲೆಬ್ರೆಟಿಗಳು ಒಬ್ಬರ ಹಿಂದೆ ಒಬ್ಬರಂತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಇನ್ನು ಬಾಹುಬಲಿ ಚಿತ್ರದ ಮೂಲಕ ಬಲ್ಲಾಳದೇವನಾಗಿ ಮಿಂಚಿದ ರಾಣಾ ದಗ್ಗುಬಾಟಿ ದೇಶದಾದ್ಯಂತ ದೊಡ್ಡದಾದ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಇನ್ನು ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್ ಡಿಸೆಂಬರ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಸಾಧ್ಯತೆಗಳಲಿವೆ ಎಂದು ಹೇಳಲಾಗಿದೆ.

ಇನ್ನು ಮದುವೆ ಸಿದ್ದತೆಗಳು ಆರಂಭವಾಗಲಿದ್ದು, ಮದುವೆ ದಿನಾನಕವನ್ನತಿಳಿಸುತ್ತೇವೆ ಎಂದು ರಾಣಾ ದಗ್ಗುಬಾಟಿಯ ತಂದೆಯಾಗಿರುವ ಸುರೇಶ ಬಾಬುರವರು ಮಾಧ್ಯಮಗಳಿಗೆ ಹೇಳಿದ್ದಾರೆ.