Advertisements

ರಂಗಾಯಣ ರಘು ಎಂಬ ದೈತ್ಯ ಪ್ರತಿಭೆಯ ಬಗ್ಗೆ ನಿಮಗೆಷ್ಟು ಗೊತ್ತು? ನೋಡಿ..

Cinema

ನಮಸ್ಕಾರ ಸ್ನೇಹಿತರೆ.. ಈ ಫಿಲಂ ಇಂಡಸ್ಟ್ರಿಯಲ್ಲಿ ಬರುವವರು ಹತ್ತಾರ ಕನಸು ಹೊತ್ತು ಬರ್ತಾರೆ… ಆದರೆ ಕಲೆಗೆ ನೆಲೆ ಕಾಣಬೇಕಾದ್ರೆ ಅದರ ಹಿಂದೆ ಪೂರ್ವ ತಯಾರಿ ಇರಲೇಬೇಕಲ್ವ.. ಅಂತದ್ದೆ ಬಾರಿ ತಯಾರಿಯಿಂದ ಬಂದವರ ಇಂಟ್ರೆಸ್ಟಿಂಗ್ ಸ್ಟೋರಿ ಇದೆ.. ಕನ್ನಡದ ಕಳನಟ, ಹಾಸ್ಯ ಕಲಾವಿದ, ಮತ್ತು ಪೋಷಕ ಪಾತ್ರದ ಮೂಲಕ ಕನ್ನಡಿಗರ ಮನಸಿನಲ್ಲಿ ನೆಲೆಸಿದ ರಂಗಾಯಣ ರಘು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. ಬಹುಬೇಡಿಕೆ ಇರುವ ಹಾಸ್ಯನಟ ಎಂದರೆ ತಪ್ಪಾಗಲಾರದು.. ಗಂಭೀರ ಪೋಷಕ ಎಲ್ಲ ರೀತಿಯ ಪಾತ್ರವನ್ನು ರಘು ಮಾಡಿದ್ದಾರೆ.. 300 ಆಸುಪಾಸು ಸಿನೆಮಾಗಳಲ್ಲಿ ನಟಿಸಿದ ಹೆಗ್ಗಳಿಕೆ ಇವರಿಗೆ ಸಲುತ್ತದೆ. ಕೆವಲ ತೆರೆಯ ಮೇಲೆ ನಗಿಸಿ ಹೋಗುವ ರಂಗಾಯಣ ರಘು ಜೀವನದ ಇಣುಕು ನೋಟವನ್ನು ನೋಡೋಣ ಬನ್ನಿ.. ರಂಗಾಯಣ ರಘು ಮೂಲತಃ ತುಮಕೂರಿನ ಪಾವಗಡ ತಾಲೂಕಿನ ಕುತ್ತೂರಿನಲ್ಲಿ ಏಪ್ರಿಲ್ 17 1965 ರಲ್ಲಿ ಜನಿಸ್ತಾರೆ..

Advertisements

ತುಂಬ ಸ್ಥಿತಿವಂತ ಕುಟುಂಬ ಇವರದ್ದಾಗಿರುತ್ತದೆ..‌ ಇವರ ಮೂಲ ಹೆಸರು ಕುತ್ತೂರು ಚಿಕ್ಕ ರಂಗಪ್ಪ ರಘುನಾಥ್.. ಕೆಸಿ ರಘುನಾಥ್.. ರಘು ಒಂಬತ್ತನೇ ಮಗನಾಗಿ ಜನಿಸಿದರು.. ಆದರೆ ಜೀವನ ಎಷ್ಟು ಕ್ರೂರಿ ನೋಡಿ.. ರಂಗಾಯಣ ರಘು ಒಂದುವರೆ ವರ್ಷದ ಮಗುವಿದ್ದಾಗಲೇ ಅವರ ಅಮ್ಮ ತೀರಿ ಹೋಗ್ತಾರೆ. ಅಮ್ಮನ ಪ್ರೀತಿಯನ್ನು ಅತೀ ಚಿಕ್ಕ ವಯಸ್ಸಿನಲ್ಲೇ ರಘು ಕಳೆದುಕೊಳ್ಳುತ್ತಾರೆ.. ಆದರೆ ಅವರ ಆ ಕೂಡು ಕುಟುಂಬ ಮಾತ್ರ ತಾಯಿಯ ಪ್ರೀತಿ ಕೊರತೆಯಾಗದ ಹಾಗೆ ನೋಡಿಕೊಳ್ತಾರೆ.. ಕತ್ತೂರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸುತ್ತಾರೆ.. ನಂತರ ಅವರನ್ನು ಬೆಂಗಳೂರಿನ ಅಡ್ಮಿಶನ್ ಮಾಡ್ತಾರೆ.‌ ಹಳ್ಳಿಯಲ್ಲಿ ಬೆಳೆದ ಹುಡುಗನಿಗೆ ಸಿಟಿ ಲೈಫ್ ಬೇಗ ಹೊಂದಿಕೊಳ್ಳುವುದಿಲ್ಲ.. ಆದರೆ ಓದಿಗಿಂತ ಕಲೆಯ ಬಗ್ಗೆ ಆಸಕ್ತಿ ಹೊಂದಿದ ರಘು ಬಣ್ಣದ ಲೋಕದ ಹಾದಿ ಹಿಡಿಯುವಂತೆ ಮಾಡಿತು.

ಆದರೆ ರಘು SSLC ಪರೀಕ್ಷೆಯಲ್ಲಿ ಪೇಲ್ ಆಗ್ತಾರೆ..‌ ಮುಂದೆ ಸಪ್ಲಿಮೆಂಟ್ರಿ ಕಟ್ಟಿ ಪಾಸ್ ನಂತರ ಅದೆ ನ್ಯಾಶನಲ್ ಕಾಲೇಜ್ ನಲ್ಲಿ ಅಡ್ಮಿಶನ್ ಮಾಡ್ತಾರೆ… ನಂತರ ರಘು ರಂಗಾಯಣ ರಘು ಆಗಿ ಬದಲಾಗಿದ್ದು ಒಂದು ದೊಡ್ಡ ರೋಚಕ ಕಥೆ.. ಹೌದು ಓದುವ ಸಮಯದಲ್ಲಿ ರಘು ಸ್ತ್ರೀ ಪಾತ್ರದ ಜೊತೆ ಪೋಷಕ ಪಾತ್ರದಲ್ಲೂ ನಟಿಸುತ್ತಿದ್ದರು. ಸ್ಕ್ರಿಪ್ಟ್ ಸಹ ಮಾಡ್ತಿದ್ರು. ನ್ಯಾಷನಲ್ ಕಾಲೇಜ್ ನಲ್ಲಿ ಕೆಲವು ಅವಾರ್ಡ್ ಗಳನ್ನು ಸಹ ಪಡೆದುಕೊಂಡಿದ್ದರು.. ಪದವಿ ಕೊನೆಯ ಹಂತದಲ್ಲಿರುವಾಗ ರಾಜಶೇಖರ್ ಕಂಬಾರ್ ಪರಿಚಯವಾಗುತ್ತದೆ. ರಾಜಶೇಖರ್ ಕಂಬಾರ್ ಚಂದ್ರಶೇಖರ್ ಕಂಬಾರರ ಮಗ.. ಇಬ್ಬರು ಸೇರೆ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು.. ರಾಜಶೇಖರ ಕಂಬಾರ್ ರಘು ಅವರನ್ನು ಚಂದ್ರಶೇಖರ್ ಕಂಬಾರರಿಗೆ ಪರಿಚಯ ಮಾಡಿಸ್ತಾರೆ.. ಈ ಪರಿಚಯ ಮೈಸೂರಿನ ರಂಗಾಯಣಕ್ಕೆ ಪ್ರವೇಶ ಪಡೆಯಲು ಸಹಾಯ ಮಾಡಿತ್ತದೆ..

ಗುರು ಇದಲ್ಲದೆ ಗುರಿ ಕಡೆ ನಡೆಯುತ್ತಿರುವ ರಘುಗೆ ರಂಗಾಯಣ ಒಳ್ಳೆಯ ವೇದಿಕೆ ಆಯ್ತು.‌ ರಂಗಾಯಣಕ್ಕೆ ಬರುವ ಮೊದಲೆ ಅವರ ತಂದೆ ತೀರಿ ಹೋಗ್ತಾರೆ. ಈ ರಂಗಾಯಣದಲ್ಲಿ ಅಷ್ಟೂ ಸುಲಭವಾಗಿರಲಿಲ್ಲ.. ಓದು ನಡೆ ನುಡಿ ಸಂಸ್ಕಾರ ಎಲ್ಲವೂ ಇತ್ತು.. ಮಂಡ್ಯ ರಮೇಶ್ ಅರುಣ್ ಸಾಗರ್ ಅವರು ಸಹ ಅಲ್ಲಿ ಇದ್ದರು… ರಘು ನಟಿಸಿದ ಮೊದಲೆರಡು ಸಿನಿಮಾ ಎಷ್ಟು ಯಶಸ್ಸು ಸಿಗಲಿಲ್ಲ ಇದೆ ಹಠದಿಂದ ಜನರಿಗೆ ಇಷ್ಟವಾಗುವ ರೀತಿ ಮತ್ತೆ ಭೂಮಿತಾಯಿಯ ಚೊಚ್ಚಲ ಮಗ ಸಿನೆಮಾದಲ್ಲಿ ನಟಿಸುತ್ತಾರೆ.. ಧಮ್ ಎಂಬ ಸುದೀಪ್ ಸಿನೆಮಾ ರಘು ಗುರುತಿಸಿಕೊಳ್ಳುವಂತೆ ಮಾಡಿತು‌.. ಹೀಗೆ ಸಿನಿ ರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಲು ಆರಂಭಿಸಿದರು. ಮೂನ್ನುರಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ. ಇನ್ನು ಅವರ ಪತ್ನಿ ಮಂಗಳ ಮಕ್ಕಳ ನಾಟಕ ಶಿಕ್ಷಕಿ.. ಸಂಚಾರಿ ಥೇಟರ್ ನಟನಾ ಶಾಲೆ ಆರಂಭಿಸಿದ್ದಾರೆ. ಎರಡು ದಶಕ ಕಳೆದ್ರು ರಂಗಾಯಣ ರಘು ಮಾತ್ರ ಇನ್ನು ಎವರ್ ಗ್ರೀನ್ ಆಗಿದ್ದಾರೆ..