Advertisements

ಮಹಾರಾಷ್ಟ್ರದಲ್ಲಿ ಕನ್ನಡದಲ್ಲೇ ಪಾಠ ಮಾಡಿ 7 ಕೋಟಿ ಬಹುಮಾನ ಗೆದ್ದ ಮರಾಠಿ ಸರ್ಕಾರಿ ಶಾಲೆಯ ಶಿಕ್ಷಕ !

Inspire

ನಮಸ್ತೇ ಸ್ನೇಹಿತರೇ, ಈಗಾಗಲೇ ಭಾಷೆ, ಪ್ರಾದೇಶಿಕ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಕನ್ನಡ ಪರ ಸಂಘಟನೆಗಳಿಂದ ಧರಣಿಗಳು ನಡೆಯುತ್ತಿವೆ. ಆದರೆ ಇದೇ ವೇಳೆ ನಮ್ಮ ಪಕ್ಕದ ರಾಜ್ಯ ಮಹಾರಾಷ್ಟ್ರದ ಶಿಕ್ಷಕರೊಬ್ಬರು ಇಡೀ ಜಗತ್ತೇ ತಿರುಗಿ ನೋಡುವಂತಹ ಕೆಲಸ ಮಾಡಿದ್ದಾರೆ. ಹೌದು, ಮಹಾರಾಷ್ಟ್ರದಲ್ಲಿ ಅದೂ ನಮ್ಮ ಕನ್ನಡ ಭಾಷೆಯಲ್ಲೇ ಶಿಕ್ಷಣ ನೀಡಿ ಬರೋಬ್ಬರಿ 7 ಕೋಟಿಗಿಂತ ಹೆಚ್ಚು ಬಹುಮಾನದ ಹಣವನ್ನ ಗೆದ್ದುಕೊಂಡಿದ್ದಾರೆ. ನಾವು ಕನ್ನಡಿಗರು ತುಂಬಾ ಸಂತೋಷ ಪಡಲೇಬೇಕಾದ ವಿಷಯ ಇದು. ಮಹಾರಾಷ್ಟ್ರದ ಸೊಲ್ಲಾಪುರದವರಾದ ೩೨ ವರ್ಷ ವಯಸ್ಸಿನ ರಂಜಿತ್ ಸಿಂಗ್ ದಿಸಾಳೆ ಎನ್ನುವವರೇ ಶಿಕ್ಷಣ ಕ್ಷೇತ್ರದಲ್ಲಿ ಇಂತಹ ದೊಡ್ಡದಾದ ಕ್ರಾಂತಿಯನ್ನ ಹುಟ್ಟುಹಾಕಿರುವ ಶಿಕ್ಷಕ.

Advertisements

ಸೊಲ್ಲಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ ರಂಜಿತ್ ಸಿಂಹ. ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಹುಟ್ಟುಹಾಕಿದ ಇವರು ಮೊದಲು ಶಿಕ್ಷರಾಗಿ ಕೆಲಸ ಮಾಡುತ್ತಿದ್ದದ್ದು ತುಂಬಾ ಶಿಥಿಲಗೊಂಡಿದ್ದ ಶಾಲೆಯೊಂದರಲ್ಲಿ. ಇಲ್ಲಿ ಬರುತ್ತಿದ್ದ ವಿದ್ಯಾರ್ಥಿಗಳು ಹೆಚ್ಚಾಗಿ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದರು. ಆದರೆ ಅವರೆಲ್ಲರಿಗೂ ಗೊತ್ತಿದ್ದ ಭಾಷೆ ಒಂದೇ, ಅದು ಕನ್ನಡ. ಇನ್ನು ಪಠ್ಯ ಪುಸ್ತಕಗಳು ಮರಾಠಿ ಭಾಷೆಯಲ್ಲಿದ್ದ ಕಾರಣ ಅವರಿಗೆ ಶಿಕ್ಷಣ ಸಿಗದೇ ವಂಚಿತರಾಗುತ್ತಿದ್ದರು. ಇದನ್ನೆಲ್ಲಾ ಗಮನಿಸಿದ ರಂಜಿತ್ ಸಿಂಗ್ ಅವರು ತಾವೇ ಕನ್ನಡ ಭಾಷೆಯನ್ನ ಕಲಿತು ೪ನೇ ತರಗತಿವರೆಗಿನ ಮರಾಠಿ ಭಾಷೆಯಲ್ಲಿದ್ದ ಪುಸ್ತಕಗಲನ್ನೆಲ್ಲಾ ಕನ್ನಡಕ್ಕೆ ಅನುವಾದ ಮಾಡಿದ್ರು.

ಜೊತೆಗೆ ಕನ್ನಡದಲ್ಲೇ ಹಾಡುಗಗಳನ್ನು ಕೂಡ ಬರೆದ್ರು. ಇನ್ನು ಈ ಪುಸ್ತಕಗಳೆನ್ನಲ್ಲಾ ಕ್ಯೂಆರ್ ಕೋಡ್ ಗೆ ಪರಿವರ್ತನೆ ಮಾಡಿಸಿ, ವಿದ್ಯಾರ್ಥಿಗಳು ಇದನ್ನ ಸ್ಕ್ಯಾನ್ ಮಾಡಿದ್ರೆ ಸಾಕು ಇಡೀ ಪುಸ್ತಕದಲ್ಲಿರುವುದೆಲ್ಲಾ ಮೊಬೈಲ್ ಗೆ ಅಪ್ಲೋಡ್ ಹಾಗುವಂತೆ ಮಾಡಿದ್ರು. ಇನ್ನು ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ ಸಲುವಾಗಿ ಕನ್ನಡದಲ್ಲೇ ವಿಡಿಯೊಗಳನ್ನ ಮಾಡಿ ಅದಕ್ಕೂ ಕ್ಯೂಆರ್ ಕೋಡ್ ಗೆ ಅಳವಡಿಸಿದ್ರು. ಇದೆಲ್ಲದರ ಜೊತೆಗೆ ಹಳ್ಳಿ ಭಾಗದ ಶಾಲೆಗಳಿಗೆ ಕಂಪ್ಯೂಟರ್ ತರುವ ಸಲುವಾಗಿ ತುಂಬಾ ಶ್ರಮಿಸಿದ್ರು. ಇದಕ್ಕಾಗಿ ಇವರ ತಂದೆ ಕೂಡ ಸಹಾಯ ಮಾಡಿದ್ರು. ಹೀಗೆ ಮಹಾರಾಷ್ಟ್ರದ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಹುಟ್ಟು ಹಾಕಿ ಇಡೀ ವಿಶ್ವ ತಮ್ಮ ಕಡೆ ತಿರುಗಿ ನೋಡುವಂತೆ ಮಾಡಿದ್ರು.

ಇದೆಲ್ಲದರ ಸಾಧನೆಯ ಫಲವಾಗಿಯೇ ರಂಜಿತ್ ಸಿಂಗ್ ಅವರಿಗೆ ಗ್ಲೋಬಲ್ ಟೀಚೆರ್ ಪ್ರೈಜ್ ನಿಂದ ಬರೋಬ್ಬರಿ ಹತ್ತು ಮಿಲಿಯನ್ ಅಂದರೆ 7 ಕೋಟಿಗಿಂತ ಹೆಚ್ಚು ಬಹುಮಾನದಹಣವನ್ನ ತಮ್ಮದಾಗಿಸಿಕೊಂಡಿದ್ದಾರೆ. ಶಿಕ್ಷಕರೆಂದರೆ ಹೀಗೆ ಇರಬೇಕು ಎಂದು ಇವರು ರಂಜಿತ್ ಸಿಂಹ ಅವರು ತೋರಿಸಿಕೊಟ್ಟಿದ್ದಾರೆ. ಇವರ ಈ ಸಾಧನೆ ಸರ್ಕಾರಿ ಶಾಲೆಗಳ ಬಗ್ಗೆ ಹೀಗೆಳೆಯುವವರಿಗೆ ಅತೀ ದೊಡ್ಡ ಉತ್ತರವಾಗಿದೆ. ಇನ್ನು ಈ ಪ್ರಶಸ್ತಿ ಅಷ್ಟು ಸುಲಭವಾಗಿ ರಂಜಿತ್ ಸಿಂಗ್ ದಿಸಾಳೆ ಅವರಿಗೆ ಒಲಿದು ಬಂದಿಲ್ಲ. ಈ ಪ್ರಶಸ್ತಿಗಾಗಿಯೇ ಬರೊಬ್ಬರು ೧೪೦ಕ್ಕೂ ಹೆಚ್ಚು ದೇಶಗಳಿಂದ ೧೨ಸಾವಿರಕ್ಕೂ ಹೆಚ್ಚು ಶಿಕ್ಷಕರು ಅರ್ಜಿ ಸಲ್ಲಿಸಿದ್ದರಂತೆ.

ಇಂತಹ ಕಾಂಪಿಟೇಷನ್ ನಡುವೆಯೂ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಕ್ರಾಂತಿಕಾರಿ ಯೋಜನೆಯಿಂದ ಶಿಕ್ಷಣದಿಂದ ವಂಚಿತರಾಗಿದ್ದ ಸಾವಿರಾರು ಮಂದಿಗೆ ಶಿಕ್ಷಣ ಸಿಗುವಂತೆ ಮಾಡಿರುವ ಅತೀ ದೊಡ್ಡ ಸಾಧನೆಗೋಸ್ಕರ ಈ ಬಹುಮಾನ ರಂಜಿತ್ ಸಿಂಗ್ ಅವರಿಗೆ ಒಲಿದು ಬಂದಿದೆ. ಇನ್ನು ತಮಗೆ ಬಂದ ಪ್ರಶಸ್ತಿಯ ಹಣದಲ್ಲಿ ಅರ್ಧ ಭಾಗವನ್ನ ಶಿಕ್ಷಣ ಕ್ಷೇತ್ರದ ಕೆಲಸಕ್ಕೆ ದಾನವಾಗಿ ಕೊಡುವುದಾಗಿ ಅವರು ಹೇಳಿದ್ದಾರೆ. ಒಟ್ಟಿನಲ್ಲಿ ತಾವೇ ಕನ್ನಡ ಭಾಷೆಯನ್ನ ಕಲಿತು ಮಹಾರಾಷ್ಟ್ರದಲ್ಲಿನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿಯೇ ಶಿಕ್ಷಣ ಸಿಗುವಂತೆ ಮಾಡಿದ ರಂಜಿತ್ ಸಿಂಗ್ ದಿಸಾಳೆ ಅವರಿಗೆ ನಮ್ಮ ಕನ್ನಡಿಗರ ಪರವಾಗಿ ಹೃದಯಸ್ಪರ್ಶಿ ಅಭಿನಂದನೆಗಳು..