Advertisements

ರಾತ್ರೋ ರಾತ್ರಿ ಸ್ಟಾರ್ ಆಗಿದ್ದ ರಾನು ಮೊಂಡಲ್ ಈಗೆಲ್ಲಿದ್ದಾಳೆ ಗೊತ್ತಾ ! ಈಕೆಯ ಅಹಂಕಾರಕ್ಕೆ ದೇವರು ಕೊಟ್ಟ ಶಿಕ್ಷೆ ಏನ್ ಗೊತ್ತಾ ?

Uncategorized

ನಮಸ್ತೇ ಸ್ನೇಹಿತರೇ, ಈ ಜೀವನವೇ ಹಾಗೇ, ಕೆಲವರು ಕಷ್ಟಪಟ್ಟು ಮೇಲೆ ಬಂದರೆ ಮತ್ತೆ ಕೆಲವರು ರಾತ್ರೋ ರಾತ್ರಿ ಸ್ಟಾರ್ ಆಗಿಬಿಡುತ್ತಾರೆ. ಹೌದು, ಆ ದೇವರು ಎಲ್ಲರಿಗೂ ಒಂದು ಅವಕಾಶವನ್ನ ಕೊಟ್ಟೇ ಕೊಡುತ್ತಾನೆ. ಅದು ಪ್ರತಿಷ್ಠೆಯ ಸ್ಥಾನವಾಗಿರಬರಬಹುದು ಹಣ, ಶ್ರೀಮಂತಿಕೆಯಾಗಿರಬಹುದು. ಆದರೆ ಭಗವಂತ ಕೊಟ್ಟ ಅವಕಾಶವನ್ನ ಹೇಗೆ ಉಪಯೋಗಿಸಿಕೊಂಡು ಜೀವನದಲ್ಲಿ ಮುಂದುವರಿದು ಎಲ್ಲರಿಗೂ ಮಾದರಿಯಾಗುತ್ತಾರೆ ಎಂಬ ವಿಷಯ ಮಾತ್ರ ಅವರವರಿಗೆ ಬಿಟ್ಟದ್ದು. ‘ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರಿಯಲ್ಲಿ ಕೊಡೆ ಇಡಿದನಂತೆ’ ಎಂಬ ಗಾದೆಯಂತೆ ಆಗಿದೆ ರಾನು ಮೊಂಡಲ್ ಅವರ ಈಗಿನ ಜೀವನ.

ಹೌದು, ಜೀವನಕ್ಕಾಗಿ ರೈಲ್ವೆ ಸ್ಟೇಷನ್ ನಲ್ಲಿ ಹಾಡು ಹಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಈ ರಾನು ಮೊಂಡಲ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅವರು ಹಾಡಿದ ಒಂದೇ ಒಂದು ಹಾಡಿನಿಂದ ರಾತ್ರಿ ಕಳೆದು ಬೆಳಗಾಗುವುದರಳೊಳಗೆ ಸಾಮಾಜಿಕ ಜಾಲತಾಣಗಳ ಮೂಲಕ ಫೇಮಸ್ ಆದವರು ಅದೇ ಈ ರಾನು ಮೊಂಡಲ್. ಅದೆಷ್ಟರ ಮಟ್ಟಿಗೆ ಇವರು ಫೇಮಸ್ ಆದರು ಎಂದರೆ ಬಾಲಿವುಡ್ ನ ಸಿನಿ ದಿಗ್ಗಜರೆ ಈಕೆಯತ್ತ ತಿರುಗಿ ನೋಡುವಂತಾಯಿತು. ಅಷ್ಟೇ ಅಲ್ಲದೆ ಈಕೆಯ ಧ್ವನಿಯನ್ನ ಮೆಚ್ಚಿದ ಬಾಲಿವುಡ್ ನ ಜನಪ್ರಿಯ ನಟ ಹಾಗೂ ಗಾಯಕರೂ ಆಗಿರುವ ಹಿಮೇಶ್ ರೇಶಮಿಯಾ ಈಕೆಯನ್ನ ಕರೆಯಿಸಿ ತಮ್ಮ ಚಿತ್ರವೊಂದಕ್ಕೆ ತೇರಿ ಮೇರಿ ಎಂಬ ಹಾಡೊಂದನ್ನ ಹಾಡಿಸಿದ್ರು.

Advertisements

ಹೀಗೆ ದಿನದಿಂದ ದಿನಕ್ಕೆ ಫೇಮಸ್ ಆಗುತ್ತಾಳೆ ಹೋದ ರಾನು ಮೊಂಡಲ್ ಅವರಿಗೆ ಹಲವಾರು ಅವಕಾಶಗಳು ಹುಡುಕಿಕೊಂಡು ಬಂದವು. ಹಲವಾರು ರಿಯಾಲಿಟಿ ಶೋಗಳು ಇವರನ್ನ ಅತಿಥಿಯನ್ನಾಗಿ ಕರೆದು ತಮ್ಮ ಟಿಆರ್ಪಿ ನ್ನ ಹೆಚ್ಚು ಮಾಡಿಕೊಂಡರು. ಇನ್ನು ಹಣ, ಹೆಸರು, ಖ್ಯಾತಿ ಎಲ್ಲವು ಈಕೆಯನ್ನ ಹೂಡಿಕೊಂಡು ಬಂತು. ಸೆಲೆಬ್ರೆಟಿಯೇ ಆಗಿಬಿಟ್ಟಳು ರಾನು ಮೊಂಡಲ್. ಆದರೆ ನಾವು ಎಷ್ಟೇ ದೊಡ್ಡವರಾದರೂ ಸಹ ನಾವು ಬೆಳೆದುಬಂದ ದಾರಿಯನ್ನ ಮರೆಯಬಾರದಂತೆ. ಈಕೆ ಸಹ ಮಾಡಿದ್ದು ಅದೇ ತಪ್ಪನ್ನೇ. ಈಕೆ ನಡೆದುಕೊಂಡ ರೀತಿಗೆ ಹಲವಾರು ನಿದರ್ಶನಗಳು ಕೂಡ ಇವೆ.

ಅದೊಂದು ದಿನ ಶಾಪಿಂಗ್ ಮಾಲ್ ಒಂದ್ರಲ್ಲಿ ಈಕೆಯನ್ನ ನೋಡಿದ ಅಭಿಮಾನಿಯೊಬ್ಬರು ಮೇಡಂ ಒಂದು ಸೆಲ್ಫಿ ಕೊಡಿ ಅಂತ ಮೈ ಮುಟ್ಟಿದಕ್ಕೆ, ನೀನು ಯಾರನ್ನ ಮುಟ್ಟಿ ಮಾತನಾಡುಸುತ್ತಿದ್ದೀಯ ಅಂತ ನಿನಗೆ ಗೊತ್ತಿದೆಯಾ ಅಂತ ದೊಡ್ಡ ಗ’ಲಾಟೆಯನ್ನೇ ಮಾಡಿಬಿಟ್ಟರು. ಇನ್ನು ಕಾರ್ಯಕ್ರಮವೊಂದಕೋಸ್ಕರೇ ಅತಿರೇಖ ಎನಿಸುವ ಹಾಗೆ ಮೇಕಪ್ ಮಾಡಿಕೊಂಡು ಟ್ರೋಲಿಗರ ಬಾಯಿಗೆ ತುತ್ತಾದರು. ಇನ್ನೊಂದು ಸಮಯದಲ್ಲಿ ಮಧ್ಯಮದವರು ಕೇಳಿದ್ದ ಪ್ರಶ್ನೆಯೊಂದಕ್ಕೆ ಬಾಯಿಗೆ ಸಿಹಿ ಹಾಕಿಕೊಂಡು ದರ್ಪದಿಂದ ಮಾತನಾಡಿದ್ರು. ಆದರೆ ಇದೆಲ್ಲವೂ ಎಷ್ಟು ದಿನ ನೀವೇ ಹೇಳಿ. ದೇವರು ಕೊಟ್ಟಿದ್ದ ಅವಕಾಶವನ್ನ ಸರಿಯಾಗಿ ಬಳಸಿಕೊಂಡಿದ್ದರೆ ಅವರಿಗೆ ಮತ್ತಷ್ಟು ಮೊಗದಷ್ಟು ಅವಕಾಶಗಳು ಸಿಗುತ್ತಿದ್ದವು. ರಾನು ಮೊಂಡಲ್ ಭಾರತದ ಪ್ರಸಿದ್ಧ ಗಾಯಕಿಯಾಗಿ ಗುರುತಿಸಿಕೊಳ್ಳುವ ಅವಕಾಶಗಳು ಹೆಚ್ಚಿದ್ದವು.

ಆದರೆ ಇಂದು ರಾನು ಮೊಂಡಲ್ ಅವರ ಪರಿಸ್ಥಿತಿ ಮೊದಲಿದ್ದ ಸ್ಥಿತಿಗೆ ಬಂದು ನಿಂತಿದೆ. ಈಗ ಅವರಿಗೆ ಯಾವುದೇ ಅವಕಾಶಗಳು ಕಾರ್ಯಕ್ರಮಗಳು ಸಿಗುತ್ತಿಲ್ಲ. ಹಾಗಾಗಿ ಈಗ ಮತ್ತೆ ತಾನು ಮೊದಲು ಮಾಡುತ್ತಿದ್ದ ಕೆಲಸದತ್ತ ಮುಖಮಾಡಿದ್ದಾಳೆ. ತನ್ನದೇ ಊರಿನ ರೈಲ್ವೆ ಸ್ಟೇಷನ್ ಬಳಿ ಇರುವ ಹಳೆಯ ಕಟ್ಟಡವೊಂದರ ಬಳಿ ಜೀವನ ಸಾಗಿಸುತ್ತಿದ್ದಾಳೆ. ಅದಕ್ಕೆ ಹೇಳೋದು ದೇವರು ಕೊಟ್ಟರೆ ತಿರುಕ ಕೂಡ ಕುಬೇರ ಆಗಬಲ್ಲ. ಅದೇ ರೀತಿ ಕುಬೇರ ಕೂಡ ತಿರುಕನಾಗಬಲ್ಲ. ಹಾಗಾಗಿ ನಾವು ಬಂದ ಅವಕಾಶಗಳನ್ನ ಆ ಭಗವಂತನೇ ಕೊಟ್ಟಿದ್ದಾನೆ ಎಂದು ಸರಿಯಾಗಿ ಬಳಸಿಕೊಂಡು ಜೀವನ ನಡೆಸಬೇಕಾಗಿದೆ.