ತೇರಿ ಮೇರಿ ಈ ಹಾಡು ಕೇಳಿದ ತಕ್ಷಣ ಒಂದು ಅದ್ಭುತ ಕಂಠ ನೆನಪಿಗೆ ಬರುತ್ತದೆ. ಆ ಧ್ವನಿಯ ಹಿಂದಿನ ಬದುಕಿನ ಕಥೆ ನೆನಪಿಗೆ ಬರುತ್ತದೆ. ರೈಲ್ವೆ ಸ್ಟೇಷನ್ನಲ್ಲಿ ಬಾಚದ ತಲೆಯಲ್ಲಿ ಗಾನ ಕೋಗಿಲೆಯೊಂದು ಹಾಡಿದ ವಿಡಿಯೋ ನೆನಪಿಗೆ ಬರುತ್ತದೆ. ಎಸ್ ನಿಮ್ಮ ಊಹೆ ನಿಜ ಅದು ಬೇರೆ ಯಾರು ಅಲ್ಲ ಖ್ಯಾತ ಗಾಯಕಿ ರಾನು ಮಂಡಲ್, ಅವತ್ತು ತೇರಿ ಮೇರಿ ಹಾಡಿನ ಮೂಲಕ ದೇಶದಲ್ಲಿ ಸಂಚಲನ ಸೃಷ್ಟಿಸಿದ್ದ ರಾನು ಮಂಡಾಲ್ ಈಗ ಎಲ್ಲಿದ್ದಾರೆ? ಏನು ಮಾಡುತ್ತಾ ಇದ್ದಾರೆ? ಅವರ ಬದುಕು ಹೇಗೆ ಸಾಗ್ತಾಯಿದೆ? ಮತ್ತೆ ಮೊದಲಿನಿಂತೆ ಬಿಕ್ಷೆ ಬೇಡಲಿಕ್ಕೆ ಇಳಿದ್ರಾ ಈ ಎಲ್ಲ ಪ್ರಶ್ನೆಗೆ ಉತ್ತರಿಸ್ತೀವಿ ನೋಡಿ.. ಪಶ್ಚಿಮ ಬಂಗಾಳ ಮೂಲದ ರಾನು ಮಂಡಲ್ ಅವರು ಬದುಕಿನಲ್ಲಿ ತುಂಬಾ ಕಷ್ಟಗಳನ್ನು ಕಂಡಿದ್ರು.
[widget id=”custom_html-3″]

ವೈವಾಹಿಕ ಜೀವನ ಸಹ ದು’ರಂ’ತ ಅಂ’ತ್ಯ ಕಂಡಿದ್ರಿಂದ ತನ್ನಿಬ್ಬರು ಮಕ್ಕಳನ್ನು ಸಾಕಿ ಸಲಹಿ ಪೋಷಿಸಬೇಕಾದ ಹೊಣೆ ರಾನು ಮೇಲಿತ್ತು. ಅವರ ಜೊತೆಗೆ ಅವರಿಗೆ ಬದುಕು ನಡೆಸಲು ಇದ್ದ ಒಂದೇ ಒಂದು ಅಸ್ತ್ರ ಎಂದರೆ ಅದು ಸಂಗೀತ. ಲತಾ ಮಂಗೇಶ್ಕರ್ ಅವರ ಕಟ್ಟಾ ಅಭಿಮಾನಿಯಾದ ರಾನು ಒಂದು ದಿನ ಲತಾ ಮಂಗೇಶ್ಕರ್ ಅವರು ಹಾಡಿದ ಹಾಡನ್ನು ಹಾಡ್ತಾ ಬಿಕ್ಷೆ ಬೇಡ್ತಾ ಇರುತ್ತಾರೆ, ಆಗ ಆಕೆ ಹಾಡಿದ ವಿಡಿಯೋ ವೈ’ರೆಲ್ ಆಗಿ ರಾನು ಅವರಿಗೆ ಬಾಲಿವುಡ್ನ ಖ್ಯಾತ ಗಾಯಕ ಹಿಮೇಶ್ ಅವರು ತೇರಿ ಮೇರಿ ಹಾಡು ಹಾಡಿಲಿಕ್ಕೆ ಅವಕಾಶ ಕೊಟ್ಟರು. ಈ ಹಾಡು ಸುಪ್ರಸಿದ್ಧವಾಗಿ ರಾನು ಬಾಲಿವುಡ್ನ ಸೆನ್ಸೇಷನಲ್ ಸಿಂಗರ್ ಆದರು. ಆದರೆ ಜಾಸ್ತಿ ದಿನ ಬಾಲಿವುಡ್ ಅಂಗಳದಲ್ಲಿ ರಾನು ಪ್ರಜ್ವಲಿಸಲಿಲ್ಲ.. ಇನ್ನೂ ಸಲ್ಮಾನ್ಖಾನ್ ಕೂಡ ಪ್ಲಾಟ್ ಕೂಡ ಕೊಟ್ಟಿದ್ರು ಅನ್ನುವ ವದಂತಿಗಳು ಕೂಡ ಹಬ್ಬಿದ್ದವು. ಆದರೆ ಇದೆಲ್ಲ ಊಹಾ ಪೋಹಗಳಷ್ಟೇ..
[widget id=”custom_html-3″]

ಅಲ್ಲಲ್ಲಿ ಗಾಳಿ ಸುದ್ದಿಯಾಗಿ ಜನರ ಕೆಂಗ’ಣ್ಣಿಗೆ ಗುರಿಯಾಗಿದ್ರು. ಇದರಿಂದ ರಾನುವನ್ನ ಹಾಡಿ ಹೊಗಳಿದ ಜನರೇ ಅವರಿಗೆ ಅಹಂ’ಕಾರ, ದರ್ಪ ಅಂತೆಲ್ಲಾ ಬೈದದ್ದುಂಟು. ಅದೆನೇ ಇರಲಿ ಇತ್ತೀಚಿಗೆ ರಾನು ಮತ್ತೆ ಬಿಕ್ಷೆ ಬೇಡುತ್ತಿದ್ದಾರೆ ಅನ್ನೋ ವದಂತಿಗಳು ಕೇಳಿಬಂದಿತ್ತು. ಜೊತೆಗೆ ಅವರು ಅಸಹಾಯಕ ಸ್ಥಿತಿಯಲ್ಲಿರುವ ಒಂದು ಫೋಟೋ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಆದರೆ ಅವುಗಳೆಲ್ಲ ಸುಳ್ಳು ಸುದ್ದಿ. ರಾನು ಅವರು ಈಗ ನೆಮ್ಮದಿಯ ಬದುಕನ್ನೆ ಕಟ್ಟುಕೊಂಡಿದ್ದಾರೆ, ಅಷ್ಟೊಂದು ಶ್ರೀಮಂತರಾಗಿ ಬದುಕು ಸಾಗಿಸದಿದ್ದರು ತಮ್ಮ ಮೊದಲ ಹಾಡಿಗೆ ಹಿಮೇಶ್ ಅವರು ಕೊಟ್ಟ ಆರು ಲಕ್ಷ, ಜೊತೆಗೆ ಇನ್ನಿತರ ಸಭೆಗಳಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾಗ ಕೊಟ್ಟಿದ್ದ ಎಲ್ಲ ಹಣವನ್ನು ರಾನು ಕೂಡಿಟ್ಟು ಅದರಿಂದ ಒಂದು ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.