Advertisements

ಟ್ರೋಲರ್ ಗಳ ಕಾಟ ತಾಳಲಾರದೆ ಸಿನಿಮಾ ಬಿಡುತ್ತೇನೆ ಎಂದು ನಿರ್ಧಾರ ಮಾಡಿದ ರಶ್ಮಿಕಾ ಮಂದಣ್ಣ.. ಇದರ ಬಗ್ಗೆ ನಿಮ್ಮ ಅಭಿಪ್ರಾಯ!

Cinema

ನಮಸ್ಕಾರ ‌ಸ್ನೇಹಿತರೆ ಇಂದಿನ ಸೋಶಿಯಲ್ ‌ಮೀಡಯಾದಲ್ಲಿ ಟ್ರೋಲ್ ಗಳದ್ದೆ ಹಾವಳಿ, ಟ್ರೋಲರ್ಸ್ ಗಳದ್ದೆ ರಾಯಬಾರ… ಆಗಾಗ ಟ್ರೋಲ್ ಮಾಡುವುದರ ಮೂಲಕ ಕೆಲವು ಸುದ್ದಿಗಳು ಹಬ್ಬಿಬಿಟ್ಟಿರುತ್ತವೆ. ಇನ್ನು ಈ ಟ್ರೋಲ್ ಗಳ‌ ಬಾಯಿಗೆ ಆಹಾರವಾಗುದು ಮಾತ್ರ ಸೆಲೆಬ್ರಿಟಿಗಳು.. ಪದೆ ಪದೆ ಟ್ರೋಲ್ ಒಳಗಾಗುವ ರಶ್ಮಿಕಾ ಮಂದಣ್ಣ ಟ್ರೋಲ್ ಗಳ ಕುರಿತು ಹೇಳಿದ್ದೇನು ಗೋತ್ತಾ? ಕಿರಿಕ್ ಪಾರ್ಟಿಯ ಮೂಲಕ ಎಲ್ಲರ‌ ಮನಗೆದ್ದು ಕರ್ನಾಕಟದ ಕ್ರಶ್ ಎಂದೆ ಗುರುತಿಸಿಕೊಂಡ ರಶ್ಮಿಕಾ ಮಂದಣ್ಣ ಇದೀಗ ಬಹುಭಾಷಾ ನಟಿ.. ಒಂದರ ಮೇಲೊಂದು ಅವಕಾಶಗಳು ಒದಗಿ ಬರುತ್ತಿರವುದು ಒಂದೆಡೆಯಾದರೆ ದಿನದಿಂದ ದಿನಕ್ಕೆ ಇವರ ಕುರಿತಾದ ಟ್ರೋಲ್ ಗಳು ಹೆಚ್ಚುತ್ತಲೇ ಹೋಗುತ್ತಿವೆ. ಕನ್ನಡಿಗರಿಂದಲೇ ಟ್ರೋಲ್ಗಳಿಗೆ ಒಳಗಾಗುವುದು ನನಗೆ ನೋವಾಗುತ್ತದೆ..

[widget id=”custom_html-3″]

Advertisements

ಬೇಸರವಾಗುತ್ತದೆ ಆದರೆ ನಾನು ಅದನ್ನು ವ್ಯಕ್ತ ಪಡಿಸುವುದಿಲ್ಲ ಎಂದು ಖಾಸಗಿ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ರು.. ಎಲ್ಲರೂ ನನ್ನನ್ನು ನೆಗೆಟಿವ್ ಆಗಿ ನಿಂದಿಸಿ ಟ್ರೋಲ್ ಮಾಡಿದ್ದಾರೆ, ಬಾಡಿ ಶೇಮಿಂಗ್, ಏಜ್ ಶೇಮಿಂಗ್, ಎಲ್ಲವನ್ನು ನಾನು ಅನುಭವಿಸುತ್ತಲೇ ಇದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ನಂತರ ನಾನು ಹಲವು ಬಾರಿ‌ ಟ್ರೋಲ್ ಗಳಿಗೆ ಒಳಗಾಗಿದ್ದೆ. ಇದರಿಂದ ಮಾನಸಿಕವಾಗಿ ನೊಂದು ಸಿನೆಮಾ ಇಂಡಸ್ಟ್ರಿ ಯನ್ನು ಬಿಡಲು ತಿರ್ಮಾನಿಸಿದ್ದೆ ಆಗ ನನಗೆ ಧೈರ್ಯ ‌ಕೊಟ್ಟಿದ್ದು ನನ್ನ ಕುಟುಂಬ ಆದ್ದರಿಂದ ಮತ್ತೆ ನನ್ನ ಕರಿಯರ್ ಆರಂಭಿಸಿದ್ದೇನೆ ಎಂದರು. ಇನ್ನು‌ ನಾನು ಹೆಚ್ಚಾಗಿ ಟ್ರೋಲ್ ಆಗುವುದು ಭಾಷೆಯ ಕಾರಣದಿಂದಾಗಿ‌. ನನಗೆ ಯಾವುದೇ ಭಾಷೆ ಸರಿಯಾಗಿ‌ ಮಾತನಾಡಲು‌ ಬರುವುದಿಲ್ಲ.‌ ಹೊಸ ‌ಭಾಷೆಯನ್ನು ಕಲಿಯಲು ಪ್ರಯ್ನಿಸುತ್ತೇನೆ ಹಾಗಂತ‌ ನನಗೆ ಭಾಷೆ ಮೇಲೆ‌ ಪ್ರೀತಿ‌, ಅಭಿಮಾನ ಇಲ್ಲ‌ ಎಂದರ್ಥವಲ್ಲ‌.

[widget id=”custom_html-3″]

ಇದನ್ನೆ ಮುಖ್ಯವಾಗಿಸಿಕೊಂಡು ನನ್ನ ಕುರಿತಾಗಿ ಟ್ರೋಲ್ ‌ಮಾಡುತ್ತಾರೆ ಕೆಲವೊಮ್ಮೆ ನೋವಾಗುತ್ತದೆ. ಆದರೆ ನಾನು ಈಗ ಅದ್ಯಾವುದಕ್ಕು‌ ತಲೆ ಕೆಡಿಸಿಕೊಳ್ಳುವುದಿಲ್ಲ. ಎಕೆಂದರೆ ನಾನು ಎಲ್ಲರೊಂದಿಗೆ ಪ್ರೀತಿ‌ ಹಂಚಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.ಕೆಲವೂಮ್ಮೆ ಕೆ’ಟ್ಟ ಪದಗಳನ್ನು ಬಳಸಿ‌ ನನ್ನನ್ನು ಟ್ಯಾಗ್ ಮಾಡಿ ಟ್ರೋಲ್ ಮಾಡಿರುತ್ತಾರೆ. ಕೆಲವರು ನನ್ನ ಬಾಡಿ ಶೇಮಿಂಗ್ ಮಾಡಿದ್ದಾರೆ. ನನ್ನ ಕುಟುಂಬ, ಶಾಲೆಯ ಹಾಗು ನನ್ನ ಖಾಸಗೀ ಜೀವನದ ಬಗ್ಗೆ ಮಾತಾಡಿದ್ದಾರೆ. ಇದರಿಂದ ಅವರಿಗೆಲ್ಲಾ ಏನು ಸಿಗುತ್ತೆ ಎಂದು ಪ್ರಶ್ನೆ ಮಾಡುವ ಮೂಲಕ ಟ್ರೋಲ್ ರ್ ಗಳಿಗೆ ಬಿಸಿ‌ ಮುಟ್ಟಿಸಿದ್ದಾರೆ ಕಿರಿಕ್ ಬೆಡಗಿ ರಶ್ಮಿಕಾ.