Advertisements

ಮದುವೆ ವಿಚಾರದಲ್ಲಿ ಮನೆಗೆ ಬಂದ ರಶ್ಮಿಕಾ! ನೋಡಿ ಸಿಹಿ ಸುದ್ದಿ..

Cinema

ರಶ್ಮಿಕಾ ಶವರಿಗೆ 25 ವರ್ಷ ವಯಸ್ಸಾಗಿದ್ದು ಸುಮನ್ ಮತ್ತು ಮದನ್ ಮಂದಣ್ಣ ದಂಪತಿಯ ಮಗಳು ರಶ್ಮಿಕಾ. ಈಕೆ ಓದಿದ್ದು ಬೆಳೆದಿದ್ದು ಎಲ್ಲವೂ ಕೂಡ ಅಲ್ಲಿಯೇ. ಪದವಿ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದರು ರಶ್ಮಿಕಾ. ಹೌದು ಎಂ.ಎಸ್ ರಾಮಯ್ಯ ಕಾಲೇಜಿನಲ್ಲಿ ಸೈಕಾಲಜಿ ಹಾಗೂ ಜರ್ನಲಿಸಂ ವಿಷಯದಲ್ಲಿ ಪದವಿ ಓದುತ್ತಿದ್ದರು. ಜೊತೆಗೆ ಮಾಡೆಲಿಂಗ್ ನಲ್ಲಿ ಸಹ ತೊಡಗಿಕೊಂಡಿದ್ದರು ರಶ್ಮಿಕಾ. ಆ ಸಮಯದಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಆಡಿಷನ್ ನಡೆಯುವಾಗ ಅದರಲ್ಲಿ ಪಾಲ್ಗೊಂಡು ಸಿನಿಮಾಗೆ ಆಯ್ಕೆ ಆದರು ರಶ್ಮಿಕಾ. 2016 ರಲ್ಲಿ ತೆರೆಕಂಡ ಕಿರಿಕ್ ಪಾರ್ಟಿ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದುಕೊಂಡಿದ್ದು ತದ ನಂತರ ಕನ್ನಡದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದರು ರಶ್ಮಿಕಾ.ಚಲೋ ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟರು. ಇನ್ನು ಮೊದಲ ಸಿನಿಮಾ ಯಶಸ್ಸಿನ ಬಳಿಕ ಗೀತಾ ಗೋವಿಂದಮ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಟಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿ ಅಲ್ಲಿನ ಲಕ್ಕಿ ಹೀರೋಯಿನ್ ಎನ್ನಿಸಿಕೊಂಡರು ರಶ್ಮಿಕಾ.

Advertisements

ತದೃಕೋ ನಂತರ ತೆಲುಗಿನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಸ್ಟಾರ್ ನಟರ ನಟ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕದ್ದು ತಮಿಳು ಚಿತ್ರರಂಗಕ್ಕೂ ಸಹ ಸುಲ್ತಾನ್ ಸಿನಿಮಾ ಮೂಲಕ ಎಂಟ್ರಿ ಕೊಟ್ಟರು ರಶ್ಮಿಕಾ. ಹೌದು ಈಗ ಬಾಲಿವುಡ್ ನಲ್ಲಿ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದು ನ್ಯಾಷನಲ್ ಕ್ರಶ್ ಎಂದೇ ಹೆಸರು ಪಡೆದುಕೊಂಡಿದ್ದಾರೆ. ಬಹುದೊಡ್ಡ ಅಭಿಮಾನಿ ಬಳಗವನ್ನು ಕೂಡ ಹೊಂದಿದ್ದಾರೆ ರಶ್ಮಿಕಾ. ಪುಷ್ಪ ಸಿನಿಮಾ ಸಕ್ಸಸ್ ನಂತರ ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಇನ್ನು ರಶ್ಮಿಕಾ ಅಭಿನಯದ ಹಿಂದಿ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದ್ದು ಜೊತೆಗೆ ತಮಿಳಿನಲ್ಲಿ ನಟ ದಳಪತಿ ವಿಜಯ್ ಅವರ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ ರಶ್ಮಿಕಾ. ಹೌದು ಈ ಎಲ್ಲಾ ಬ್ಯಸಿ ಶೆಡ್ಯೂಲ್ ಗಳ ನಡುವೆ ರಶ್ಮಿಕಾ ಮಂದಣ್ಣ ಅವರು ಇದೀಗ ಬೆಂಗಳೂರಿಗೆ ಬಂದಿದ್ದು ಅದು ಸ್ನೇಹಿತೆಯ ಮದುವೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿರುವುದು ವಿಶೇಷವಾಗಿದೆ. ಹೌದು ಮೊದಲಿಗೆ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ರಶ್ಮಿಕಾ ಮಂದಣ್ಣ ದೇವಸ್ಥಾನದಲ್ಲಿ ಅರ್ಚನೆ ಮಾಡಿಸಿದ ಬಳಿಕ ಸ್ನೇಹಿತೆಯ ಮದುವೆಯಲ್ಲಿ ಪಾಲ್ಗೊಂಡಿದ್ದು ತಮ್ಮ ಎಲ್ಲಾ ಫ್ರೆಂಡ್ಸ್ ಗಳನ್ನು ಭೇಟಿ ಮಾಡಿ ಎಂಜಾಯ್ ಮಾಡಿದ್ದಾರೆ.

ಮದುವೆ ಆಗಿರುವ ವಧು ವರರ ಜೊತೆಗೆ ಫೋಟೋ ತಗಿಸಿ ಅವುಗಳನ್ನು ಶೇರ್ ಮಾಡಿ ಇಬ್ಬರ ಬಗ್ಗೆ ಸಂತೋಷದ ಸಾಲುಗಳನ್ನು ಬರೆದುಕೊಂಡಿದ್ದಾರೆ ರಶ್ಮಿಕಾ ಮಂದಣ್ಣ. ಇದಷ್ಟೇ ಅಲ್ಲದೆ ಇತ್ತೀಚೆಗೆ ತಮ್ಮ ಹುಟ್ಟೂರು ಕೂರ್ಗ್ ನಲ್ಲಿ ನಡೆದ ಮತ್ತೊಬ್ಬ ಸ್ನೇಹಿತೆಯ ಮದುವೆಯಲ್ಲಿ ರಶ್ಮಿಕಾ ಮಂದಣ್ಣ ಪಾಲ್ಗೊಂಡಿದ್ದರು. ಅಂದು ಫ್ಲೈಟ್ ಸಿಗದೆ, ಕಷ್ಟಪಟ್ಟು ಊರಿಗೆ ಬಂದು ಮದುವೆಯಲ್ಲಿ ಪಾಲ್ಗೊಂಡಿದ್ದರು ರಶ್ಮಿಕಾ. ಅಂದು ಲೇಟ್ ಆದ ಕಾರಣ ಸರಿಯಾಗಿ ಫೋಟೋ ತೆಗೆಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಬೇಸರ ಪಟ್ಟಿದ್ದು ರಶ್ಮಿಕಾ ಮಂದಣ್ಣ ಅವರನ್ನು ಸೀರೆಯಲ್ಲಿ ನೋಡಿ ಅವರ ಅಭಿಮಾನಿಗಳು ಸಂತೋಷಪಟ್ಟಿದ್ದಾರೆ.