ದಕ್ಷಿಣ ಭಾರತದ ಖ್ಯಾತ ನಟಿಯಾದ ರಶ್ಮಿಕ ಮಂದಣ್ಣ ಸದ್ಯ ತೆಲುಗು, ತಮಿಳು, ಕನ್ನಡ ಚಿತ್ರಗಳಲ್ಲಿ ಮಿಂಚುತಿದ್ದಾರೆ. ಇತ್ತೀಚಿಗೆ ಕನ್ನಡ ಬರುವುದಿಲ್ಲ , ಕನ್ನಡ ಕಷ್ಟ ಎಂಬ ವಿವಾದಾತ್ಮಕ ಹೇಳಿಕೆಗಳಿಂದ ಕನ್ನಡಿಗರ ಆಕ್ರೋಶಕ್ಕೆ ಕಾರಣವಾದ ನಟಿ ಪೊಗರು ಚಿತ್ರದ ನಂತರ ಬೇರೆ ಯಾವ ಕನ್ನಡ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ನಮ್ಮ ರಾಜ್ಯದವರೇ ಆಗಿದ್ದರು ಕನ್ನಡಕ್ಕೂ ಅವರಿಗೂ ಸಂಬಂಧ ಇಲ್ಲ ಎಂಬಂತೆ ನಡೆದುಕೊಳ್ಳುವ ಅವರು ತೆಲುಗು ಚಿತ್ರರಂಗದಲ್ಲಿ ತುಂಬಾ ಬ್ಯುಸಿ ಆಗಿದ್ದರು. ತನ್ನ ಮಾತೃ ಭಾಷೆ ತೆಲುಗು ಎಂಬಂತೆ ನಡೆದುಕೊಳ್ಳುತಿದ್ದರು. ಆದರೆ ಈಗ ತೆಲುಗು ಚಿತ್ರಗಳನ್ನೂ ನಿರಾಕರಿಸಿ ಬಾಲಿವುಡ್ ಚಿತ್ರಗಳಲ್ಲಿ ನಟಿಸಲು ರಶ್ಮಿಕ ಮುಂದಾಗುತ್ತಿದ್ದಾರೆ.

ಕನ್ನಡ ಮರೆತು ತೆಲುಗಿನಲ್ಲಿ ಮಿಚುತಿದ್ದವರು ಈಗ ತೆಲುಗಿಗೂ ಟಾಟಾ ಬಾಯ್ ಬಾಯ್ ಎಂದಿದ್ದಾರೆ. ರಶ್ಮೀಕಾ ಮಂದಣ್ಣ ಗೆ ಸದ್ಯ ಬಾಲಿವುಡ್ ನಿಂದ ಒಳ್ಳೆ ಆಫರ್ ಗಳು ಬರುತ್ತಿವೆ. ಡೆಡ್ಲಿ ಎಂಬ ಬಾಲಿವುಡ್ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮಗಳ ಪಾತ್ರದಲ್ಲಿ ರಶ್ಮಿಕ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಅವರಿಗೆ ಭಾರಿ ಮೊತ್ತದ ಸಂಭಾವನೆ ಸಿಕ್ಕಿದೆ ಎನ್ನಲಾಗಿದೆ. ಅಲ್ಲದೆ ಸಿದ್ದಾರ್ಥ್ ಮೆಲ್ಹೊತ್ರ ನಟನೆಯ ಬಾಲಿವುಡ್ ಚಿತ್ರದಲ್ಲೂ ನಟಿಸಲಿದ್ದಾರೆ. ಬಾಲಿವುಡ್ ಆಫರ್ ಗಳು ಬರಲು ಶುರುವಾದ ಕೂಡಲೇ ಇತ್ತ ತೆಲುಗು ಚಿತ್ರಗಳನ್ನು ನಟಿ ನಿರಾಕರಿಸುತ್ತಿದ್ದಾರೆ.

ಜೂನಿಯರ್ ಎನ್ ಟಿ ಆರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಮಾತುಕತೆಯ ಹಂತದಲ್ಲಿ ಇದ್ದ ನಿರ್ದೇಶಕ ತ್ರಿವಿಕ್ರಮ್ ರವರ ಚಿತ್ರವನ್ನು ರಶ್ಮಿಕ ನಿರಾಕರಿಸಿದ್ದಾರೆ. ಬಾಲಿವುಡ್ ನಲ್ಲಿ ಮಿಂಚಲು ಸಿದ್ದಳಾಗಿರುವ ನಟಿ ತೆಲುಗು ಚಿತ್ರರಂಗದಿಂದ ಸ್ವಲ್ಪ ದೂರವಾಗುತ್ತಿದ್ದಾರೆ. ಇತ್ತ ಕನ್ನಡಿಗರು ಆಕೆಯ ಈ ಗುಣ ತಿಳಿದಿರುವ ವಿಷಯವೇ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಜರಿಯುತಿದ್ದಾರೆ..