Advertisements

ಮತ್ತೆ ಕಿರಿಕ್ ಮಾಡಿಕೊಂಡ ರಶ್ಮಿಕಾ ಮಂದಣ್ಣ ! ಬೇಸರಗೊಂಡ ಅಭಿಮಾನಿಗಳು ಸಿಕ್ಕಾಪಟ್ಟೆ ಆ’ಕ್ರೋಶ..

Cinema

ನಟಿ ರಶ್ಮಿಕಾ ಮಂದಣ್ಣ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿರುವುದಕ್ಕಿಂತ ಒಂದಲ್ಲ ಒಂದು ಕಾಂಟ್ರವರ್ಸಿ ಮಾಡಿಕೊಂಡು ಹೆಸರು ಮಾಡಿರುವುದೇ ಹೆಚ್ಚು. ಮೊದಲೇ ಕನ್ನಡಿಗರಿಗೆ ರಶ್ಮಿಕ ಅಂದರೆ ಅಷ್ಟಕ್ಕೇ ಅಷ್ಟೆ. ಕನ್ನಡದ ಮೇಲೆ ತಮ್ಮ ತಾತ್ಸಾರ ಅಗೌರವ ತೋರಿ ಯಾವಾಗಲೂ ಕನ್ನಡಿಗರಿಂದ ಹಿಗ್ಗಾ ಮುಗ್ಗ ಉಗಿಸಿಕೊಂಡು ಟ್ರೊಲ್ ಆಗುತ್ತಾರೆ. ಈಗ ಅಂತದ್ದೇ ಆ’ರೋಪಕ್ಕೆ ನಟಿಮಣಿ ಮತ್ತೆ ಗುರಿಯಾಗಿದ್ದಾರೆ. ದ್ರುವಾ ಸರ್ಜಾ ಅಭಿನಯದ ಪೊಗರು ಚಿತ್ರದ ಬಿಡುಗಡೆಗೆ ಪ್ರೇಕ್ಷಕರು ಕಾದು ಕುಳಿತಿದ್ದರು. ಅಂತೆಯೇ ಚಿತ್ರ ತೆರೆ ಕಂಡಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರ ಮಧ್ಯೆ ಪ್ರೇಕ್ಷಕರು ಈ ಚಿತ್ರದ ನಟಿ ರಶ್ಮೀಕ ವಿರುದ್ಧ ತಿರುಗಿ ಬಿದ್ದಿದ್ದಾರೆ.

Advertisements

ತಮಗೆ ಸಂಬಂಧವೇ ಪಡದ ಬೇರೆ ಭಾಷೆಯ ಚಿತ್ರಗಳನ್ನು ಹೊಗಳಿ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚಾರ ಮಾಡುವ ನಟಿ ತನ್ನದೇ ಕನ್ನಡ ಚಿತ್ರ ಬಿಡುಗಡೆಗೊಂಡಿದ್ದರೂ ಇದರ ಬಗ್ಗೆ ಟ್ವಿಟರ್ ಸೇರಿದಂತೆ ಎಲ್ಲಿಯೂ ಬರೆದುಕೊಂಡಿಲ್ಲ. ಕನಿಷ್ಠ ನನ್ನ ಈ ಚಿತ್ರ ಬಿಡುಗಡೆಯಾಗಿದೆ ನೋಡಿ ಎಂದು ಒಂದು ಫೋಟೋ ಕೂಡ ಹಂಚಿಕೊಂಡಿಲ್ಲ. ಇದರಿಂದ ಬೇಸರಗೊಂಡ ಅಭಿಮಾನಿಗಳು ಈಕೆಗೆ ಕನ್ನಡ ಚಿತ್ರಗಳು ಅಂದರೆ ಈಕೆ ಅಷ್ಟು ಅಸಡ್ಡೆ ಅಹಂಕಾರ ಎಂದು ಕೆಂ’ಡಾ ಮಂಡಲವಾಗಿದ್ದಾರೆ.

ಅಷ್ಟೇ ಅಲ್ಲ ರಶ್ಮಿಕ ಪೊಗರು ನಿರ್ಮಾಪಕರೊಂದಿಗೂ ಕೂಡ ಕಿರಿಕ್ ಮಾಡಿಕೊಂಡಿದ್ದಾರೆ. ಸಿನಿಮಾ ಪ್ರಚಾರಗಳಲ್ಲಿ ಸರಿಯಾಗಿ ಭಾಗಿಯಾಗಿಲ್ಲ. ಟಿವಿ ಚಾನೆಲ್ ಗಳಲ್ಲಿ ಸರಿಯಾಗಿ ಸಿನಿಮ ಪ್ರಚಾರ ಮಾಡದೆ ತಾನು ತುಂಬಾ ಬ್ಯುಸಿ ನಟಿ, ನನನ್ನು ನ್ಯಾಷನಲ್ ಕ್ರಶ್ ಎಂದು ಕರೆಯಲಾಗುತ್ತದೆ ಎಂಬ ಇತ್ಯಾದಿ ವಯಕ್ತಿಕ ವಿಚಾರಗಳನ್ನು ಹೇಳುತ್ತಾ ತನ್ನ ಬೇರೆ ಭಾಷೆಯ ಚಿತ್ರಗಳ ಬಗ್ಗೆ ಹೆಚ್ಚು ಮಾತನಾಡಿದ್ದಾರೆ. ಪೊಗರು ಚಿತ್ರದ ಕುರಿತು ಉತ್ಸುಕತೆಯಿಂದ ಮಾತನಾಡಿಲ್ಲ.

ಅಲ್ಲದೆ ಸಂದರ್ಶನದ ವೇಳೆ ಕನ್ನಡ ಬಂದರೂ ಕನ್ನಡ ಪದಗಳನ್ನು ಬಳಸದೆ ಕೇವಲ 90 ಭಾಗ ಇಂಗ್ಲಿಷ್ ನಲ್ಲೇ ಮಾತನಾಡಿದ್ದಾರೆ. ಇದರಿಂದ ಚಿತ್ರತಂಡಕ್ಕೂ ಬೇಸರವಾಗಿದೆ. ಇಷ್ಟು ಸಾಲದು ಎಂಬಂತೆ ಹೈದರಾಬಾದ್ ಇಂದ ಬಂದ ಖರ್ಚು, ಇಲ್ಲಿ ಉಳಿದುಕೊಂಡ ಖರ್ಚು ವೆಚ್ಚ, ಉಡುಗೆ ತೊಡುಗೆ ವೆಚ್ಚ ಎಲ್ಲವನ್ನೂ ನಿರ್ಮಾಪಕರಿಂದಲೇ ಕೊಡಿಸಿ ಪ್ರಚಾರವನ್ನೂ ಸರಿಯಾಗಿ ಮಾಡದೆ ಹೋಗಿದ್ದಾರೆ ಎಂಬ ಆ’ರೋಪಗಳು ಕೇಳಿ ಬರುತ್ತಿವೆ. ಇಂತಹ ನಟಿಯನ್ನು ಏಕೆ ಕನ್ನಡ ಚಿತ್ರಗಳಿಗೆ ತೆಗೆದುಕೊಳ್ಳುತ್ತೀರಿ? ನಮ್ಮಲ್ಲೇ ಎಷ್ಟೋ ಪ್ರತಿಭೆಗಳು ಇವೆ ಎಂದು ಇತ್ತ ಕನ್ನಡ ಪ್ರೇಕ್ಷಕರು ಆ’ಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.