Advertisements

ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ರವಿ ಡಿ ಚನ್ನಣ್ಣವರ್ ಜೀವನದ ಈ ಕಣ್ಣೀರಿನ ಕಥೆ ಗೊತ್ತಾ? ನೋಡಿ..

Inspire

ನಮಸ್ತೆ ಸ್ನೇಹಿತರೆ, ಇವತ್ತು ಇಲ್ಲಿ ಯಾರ ಲೈಪ್ ಸ್ಟೋರಿ ಹೇಳುತ್ತಿದ್ದೇವೋ ಅವರು ನಿಮೆಗೆಲ್ಲ ಗೊತ್ತಿರುವಂತಹ ವ್ಯಕ್ತಿ.. ಅವರೆಂದರೆ ನಿಮಗೆ ಅಚ್ಚುಮೆಚ್ಚು, ಆದರೆ ಎಷ್ಟೊ ಜನರಿಗೆ ಇವರು ಬೆಳೆದು ಬಂದ ದಾರಿ ಗೊತ್ತಿಲ್ಲ.. ಹಮಾಲಿಯಾಗಿ, ಬಾರ್ ಸಪ್ಲೈಯರ್ ಹಾಗಿ, ಕೋಚಿಂಗ್ ಸೆಂಟರ್ ನಲ್ಲಿ ಕಸ ಗುಡಿಸಿ ಐ.ಪಿ.ಎಸ್ ಅಧಿಕಾರಿಯಾದ ಹೆಮ್ಮೆಯ ಕನ್ನಡಿಗನ ಲೈಪ್ ಸ್ಟೋರಿ.. ಇವರ ಹೆಸರು ಕೇಳಿದರೆ ಸಾಕು ಜನ ನಿಮ್ಮಂತಹ ಅಧಿಕಾರಿ ಎಲ್ಲರಿಗೂ ಎಲ್ಲಾ ಕಡೆಯೂ ಬೇಕು. ನೀವು ನೂರು ಕಾಲ ಸುಖವಾಗಿ ಬಾಳಿ ಎಂದು ಮನದಲ್ಲಿ ಆರೈಸುತ್ತಾರೆ.. ದುಷ್ಟರು ಇವರೆಂದರೆ ಗಡಗಡ ನಡಗುತ್ತಾರೆ.

Advertisements

ಅಂದ ಹಾಗೆ ಅವರು  ಬೇರೆಯಾರು ಅಲ್ಲ ನಮ್ಮ ಕರ್ನಾಟಕದ ಸಿಂಗಂ ಎಂದೇ ಖ್ಯಾತಿ ಪಡೆದಿರುವ ರವಿ ಡಿ ಚನ್ನಣ್ಣನವರ್.. ಇವರು ಕರ್ನಾಟಕದ ಗದಗ ತಾಲೂಕಿನ ನೀಲಗುಂದ ಗ್ರಾಮದ ಕಡು ಬಡತನ ಕುಟುಂಬದಲ್ಲಿ 23 ಜುಲೈ 1985 ರಲ್ಲಿ ದಾಮಪ್ಪ ಚನ್ನಣ್ಣನವರ್ ಹಾಗೂ ರತ್ನಮ್ಮ ದಂಪತಿಗಳಿಗೆ ಜನಿಸುತ್ತಾರೆ.. ಇವರಿಗೆ ಹುಟ್ಟಿನಿಂದ ಬಡತನ ಬಳುವಳಿಯಾಗಿ ಬಂದಿತ್ತು, ಕೃಷಿ ಇವರ ಕುಟುಂಬದ ಆಧಾರ.. ಹೇಳಿಕೊಳ್ಳುವಂತಹ ಆಧಾಯದ ಮೂಲ ಇವರಲ್ಲಿ ಯಾವುದು ಇರಲಿಲ್ಲ.. ರವಿಯವರಿಗೆ ಚಿಕ್ಕ ವಯಸ್ಸಿ‌ನಿಂದಲೂ ಐ.ಪಿ.ಎಸ್ ಅಧಿಕಾರಿಯಾಗಬೇಕು ಎನ್ನುವ ಆಸೆಯನ್ನು ಹೊಂದಿದ್ದರು..

ಮನೆಯಲ್ಲಿ ಎಷ್ಟೇ ಕಷ್ಟಗಳು ಇದ್ದರು ಸಹ ಇವರು ಕಂಡ ಕನಸನ್ನ ನನಸು ಮಾಡಬೇಕು ಎಂಬ ಛಲದಿಂದ ಮುನ್ನುಗ್ಗುತ್ತಾರೆ.. ಗದಗದ ನೀಲಗುಂದ ಸರ್ಕಾರಿ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನ ಮುಗಿಸುತ್ತಾರೆ.. ನಂತರ ಧಾರವಾಡದ ಕರ್ನಾಟಕ ಹಾರ್ಟ್ಸ್ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಪಡೆಯುತ್ತಾರೆ‌‌.. ಕಾಲೇಜಿನಲ್ಲಿ ಓದುವಾಗ  ತಮ್ಮ ಖರ್ಚು ವೆಚ್ಚಗಳಿಗಾಗಿ ಬಾರ್ ನಲ್ಲಿ ಕೆಲಸ ಮಾಡುತ್ತಾರೆ.. ಡಿಗ್ರಿ ಮುಗಿದ ನಂತರ ಕಾಂಪಿಟಿಟಿ ಎಕ್ಸಾಮ್ ಗೆ ತರಬೇತಿ ಪಡೆಯಲು ಇವರ ಬಳಿ ಹಣ ಇರುವುದಿಲ್ಲ.

ಏಗೋ ಕಷ್ಟಬಿದ್ದು ಹೈದರಾಬಾದ್ ನಲ್ಲಿ ಇರುವ ಟಾರ್ಗೆಟ್ ಅನ್ನುವ ಕೋಚಿಂಗ್ ಸೆಂಟರ್ ನಲ್ಲಿ ಸೇರುತ್ತಾರೆ.. ಕೋಚಿಂಗ್ ಸೆಂಟರ್ ನಲ್ಲಿ ನೆಲ ವರೆಸಿ ಕಸ ಗುಡಿಸಿ ಕೆಲಸ ಮಾಡುತ್ತ ಕೋಚಿಂಗ್ ಅನ್ನು ಮುಗಿಸುತ್ತಾರೆ.. 2008 ರಲ್ಲಿ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮೀಷನ್ ಅಂದರೆ ಯುಪಿಎಸ್ಸಿಯ ಸಿವಿಲ್ ಸರ್ವಿಸ್ ನಲ್ಲಿ ಪ್ರಥಮ ಪ್ರಯತ್ನದಲ್ಲಿಯೇ 703 ನೇ ಸ್ಥಾನವನ್ನು ಪಡೆಯುತ್ತಾರೆ.. ಕೆಡಗೂ ರವಿ ಅವರು ಕಂಡ ಕನಸನ್ನ ನನಸಾಗಿ ಮಾಡಿಕೊಂಡೇ ಬಿಟ್ಟರು.. ರವಿಯವರು 2011 ರಲ್ಲಿ ಬೆಳಗಾವಿ ಜಿಲ್ಲೆಯ ಹೆಚ್ಚುವರಿಯಾಗಿ ತಮ್ಮ ಮೊದಲ ವೃತ್ತಿ ಜೀವನವನ್ನ ಪ್ರಾರಂಭಿಸಿದರು.. ಇದಾದ ನಂತರ ಧಾರವಾಡ, ಹೊಸಪೇಟೆ, ಹಾಸನ, ಬೆಂಗಳೂರು, ದಾವಣಗೆರೆ ಮತ್ತು  ಶಿವಮೊಗ್ಗ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ ಜನರ ಮನ ಗೆದ್ದಿದ್ದಾರೆ..