Advertisements

ಮಾಡೋದು ಕೂಲಿ ಕೆಲಸ..ಆದ್ರೆ ಶ್ರೀಮಂತರು ಮಾಡದ ಕೆಲಸವನ್ನು ಈತ ಮಾಡುತ್ತಿದ್ದಾನೆ !

Inspire

ಸ್ನೇಹಿತರೇ, ನಾವು ಸಹಾಯ ಮಾಡಲು ಸಮಾಜ ಸೇವೆ ಮಾಡಲು ಹಣವೇ ಬೇಕಂತ ಏನೂ ಇಲ್ಲ. ಮತ್ತೊಬ್ಬರ ನೋವಿಗೆ ಮಿಡಿಯುವ ಮನಸ್ಸು ಇದ್ದರೆ ಸಾಕು. ಇದಕ್ಕೆ ನೈಜ ನಿದರ್ಶನ ಎಂದರೆ ಅದು ರವಿ ಕಟಪಾಡಿ. ಕೇವಲ 36ರ ವಯಸ್ಸಿನ ಇವರು ನಿಜವಾಗಲೂ ಅದ್ಭುತ ಮನುಷ್ಯ. ತಾನು ಕಷ್ಟದಲ್ಲಿದ್ದರೂ ಸಹ ಮತ್ತೊಬ್ಬರ ಮೊಗದಲ್ಲಿ ಸಂತೋಷ ನೋಡಬೇಕೆನ್ನುವ ಅದಕ್ಕಾಗಿ ತಮ್ಮಿಂದಾದ ಸಹಾಯ ಮಾಡುವ ಮನಸ್ಸು ಇವರದ್ದು. ಹೌದು, ಜೀವನಕ್ಕಾಗಿ ಕೂಲಿ ಕೆಲಸ ಮಾಡುವ ರವಿ ಕಟಪಾಡಿ ಗುಣದಲ್ಲಿ ಮಾತ್ರ ಶ್ರೀಮಂತರಲ್ಲಿ ಶ್ರೀಮಂತ. ಇನ್ನು ಸಾಮಾಜಿಕವಾಗಿ ಇವರು ಮಾಡುತ್ತಿರುವ ಮಾನವೀಯ ಕೆಲಸಗಳನ್ನ ಗುರುತಿಸಿ, ಇವರಿಗೆ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾ ಬಚ್ಚನ್ ಅವರ ಎದುರು ಹಾಟ್ ಸೀಟ್ ನಲ್ಲಿ ಕುಳಿತುಕೊಳ್ಳುವ ಅವಕಾಶ ಇವರನ್ನ ಅರಸಿ ಬಂದಿದೆ. ಹಾಗಾದ್ರೆ ಯಾರೂ ಈ ರವಿ ಕಟಪಾಡಿ ಎಂಬುದನ್ನ ತಿಳಿಯೋಣ ಬನ್ನಿ..

Advertisements

ಉಡುಪಿಯವರಾಗಿರುವ ರವಿ ಕಟಪಾಡಿ ಅವರು ಹಬ್ಬದ ದಿನಗಳಲ್ಲಿ, ಅದು ಕರಾವಳಿಯಲ್ಲಿ ಸುಡುವ ಸುಡು ಬಿಸಿಲಿನಲ್ಲಿ ವಿಚಿತ್ರವಾದ ವೇಷಗಳನ್ನ ಧರಿಸಿಕೊಂಡು ಮೂರ್ನಾಲ್ಕು ದಿನ ಓಡಾಡುವ ಇವರು ಅದರಿಂದ ಬಂದ ಹಣವನ್ನ, ಶ್ರೇಷ್ಠವಾದ ಮಾನವೀಯ ಕೆಲಸಕ್ಕಾಗಿ ಉಪಯೋಗಿಸುತ್ತಿದ್ದಾರೆ. ಹೌದು, ಅನಾರೋಗ್ಯದಿಂದ ಬಳಲುತ್ತಿರುವ ಬಡ ಮಕ್ಕಳ ನೆರವಿಗಾಗಿ ಈ ಹಣವನ್ನ ಉಪಯೋಗಿಸುತ್ತಾ ಬಂದಿದ್ದಾರೆ ರವಿ ಕಟಪಾಡಿ. ಈಗಲೂ ಸಹ ಚಿಕ್ಕ ಮನೆಯೊಂದರಲ್ಲಿ ಜೀವನ ನಡೆಸುತ್ತಿರುವ ರವಿಯವರು, ಹಲವಾರು ವರ್ಷಗಳಿಂದ ಈ ಮಾನವೀಯ ಕೆಲಸ ಮಾಡುತ್ತಾ ಬಂದಿದ್ದಾರೆ. ತುಂಬಾ ವಿಶಿಷ್ಟವಾಗಿ ವೇಷಗಳನ್ನ ಧರಿಸುವ ರವಿ ಕಟಪಾಡಿಯವರು, ಇದರಿಂದ ಬಂದ 55 ಲಕ್ಷ ಹಣವನ್ನ ೨೮ ಅನಾರೋಗ್ಯ ಪೀಡಿತ ಬಡ ಮಕ್ಕಳ ನೆರವಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ರವಿಯವರ ಸಮಾಜಕ್ಕೆ ಮಾಡುತ್ತಿರುವ ಈ ನಿಸ್ವಾರ್ಥ ಸೇವೆಯೇ ಅವರಿಗೆ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅವಕಾಶ ಹುಡುಕಿಕೊಂಡು ಬಂದಿದೆ. ಇನ್ನು ಬಿಗ್ ಬಿ ಅಮಿತಾ ಬಚ್ಚನ್ ಅವರ ಮುಂದೆ ಹಾಟ್ ಸೀಟ್ ನಲಿ ಕುಳಿತು ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿರುವ ರವಿ ಕಟಪಾಡಿಯವರು ಈ ಕಾರ್ಯಕ್ರಮದಲ್ಲಿ 12.5 ಲಕ್ಷ ಹಣ ವಿನ್ ಆಗಿದ್ದು, ಈ ಹಣವನ್ನು ಸಹ ಬಡ ಮಕ್ಕಳ ನೆರವಿಗಾಗಿ ಮೀಸಲಿಟ್ಟಿದ್ದಾರೆ. ಇನ್ನು ಇದರ ಬಗ್ಗೆ ರವಿಯವರು ಮಾತನಾಡಿದ್ದು ಅಮಿತಾಬ್ ಅವರ ಮುಂದೆ ಕುಳಿತುಕೊಳ್ಳಲು ಅವರಿಗೆ ಭಯವಿತ್ತಂತೆ. ಅಮಿತಾಬ್ ಅವರು ನನ್ನ ಮುಂದೆ ಬಂದು ನಿಂತಾಗ ನನ್ನ ಕಣ್ಣಲ್ಲಿ ನೀರು ಬಂತು ಅಂತ ರವಿಯವರು ಹೇಳಿದ್ದಾರೆ. ಇನ್ನು ಅಮಿತಾಬ್ ಅವರಿಗೂ ಕೂಡ ತುಳು ಭಾಷೆಯನ್ನ ಹೇಳಿಕೊಟ್ಟು, ಮಾತನಾಡಿಸಿದ್ದಾರೆ ಕೂಡ. ಸ್ನೇಹಿತರೇ, ತಾವು ಕಷ್ಟದಲ್ಲಿದ್ದರೂ ಕೂಡ ಮತ್ತೊಬ್ಬರ ಸಂತೋಷಕ್ಕಾಗಿ ಹಾತೊರೆಯುವ ಮನಸ್ಸು ಎಷ್ಟು ಜನರಿಗೆ ಇರುತ್ತೆ ಹೇಳಿ. ರವಿ ಕಟಪಾಡಿಯವರಂತಹ ನಿಸ್ವಾರ್ಥ ಮನೋಭಾವ ಹೊಂದಿರುವ ವ್ಯಕ್ತಿಗಳು ಇರುವುದಕ್ಕೆ ಅಲ್ಲವೇ ಕಾಲ ಕಾಲಕ್ಕೆ ಮಳೆ ಬೆಳೆ ಆಗುತ್ತಿರುವುದು..ನೀವೇನಂತೀರಾ..