Advertisements

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ತಮ್ಮ ಬಾಲಾಜಿ ಈಗ ಎಲ್ಲಿದ್ದಾರೆ..? ಏನು ಮಾಡ್ತಿದ್ದಾರೆ ಗೊತ್ತಾ.?

Cinema

ಪ್ರಿಯ ಓದುಗರೆ ಕನ್ನಡ ಸಿನಿಮಾ ರಂಗದಲ್ಲಿ ಹೊಸ ಹೊಸ ನಟ-ನಟಿಯರು ಬರುತ್ತಿದ್ದಾರೆ. ಅಷ್ಟೇ ವೇಗವಾಗಿ ಉತ್ತುಂಗಕ್ಕೇರಿ ಮಿಂಚುತ್ತಿದ್ದಾರೆ. ತದನಂತರ ಮಿಂಚಿ ಮರೆಯಾಗಿ ಬಿಡುತ್ತಾರೆ. ನಂತರ ಎಲ್ಲಿದ್ದಾರೆ?ಏನು ಮಾಡುತ್ತಿದ್ದಾರೆ?ಎಂಬುದೇ ತಿಳಿಯುವುದಿಲ್ಲ ಹೀಗೆ ಸಿನಿಮಾರಂಗದಲ್ಲಿ ಮಿಂಚಿ ಮರೆಯಾದ ಮತ್ತೊಬ್ಬ ಸ್ಟಾರ್ ನಟ ಬಾಲಾಜಿ. ಹೌದು ಓದುಗರೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ತಮ್ಮ ಬಾಲಾಜಿ ವೀರಸ್ವಾಮಿ ಅವರು ಕೇವಲ ಐದು ಸಿನಿಮಾಗಳಲ್ಲಿ ನಟಿಸಿ ಇದೀಗ ಸಿನಿಮಾರಂಗ ದಿಂದಲೇ ಬಹುದೂರದಲ್ಲಿ ಇದ್ದಾರೆ. ಅದಕ್ಕೂ ಮೊದಲು ಇವರ ತಂದೆಯ ಬಗ್ಗೆ ತಿಳಿಯಬೇಕು. ಇವರ ತಂದೆ ವೀರಸ್ವಾಮಿ ಕನ್ನಡದ ಧೀಮಂತ ಪ್ರೊಡ್ಯೂಸರ್ ಗಳಲ್ಲಿ ಒಬ್ಬರು. ಬಾಲನ ಅವರು ಸ್ಥಾಪಿಸಿದ ‘ಅಭಿಮಾನ್ ಸ್ಟುಡಿಯೋ’ ದಲ್ಲಿ ಚಿತ್ರೀಕರಿಸಿ ಅವರಿಗೆ ಸಹಾಯ ಮಾಡಿದವರು ಈ ವೀರಸ್ವಾಮಿ.

Advertisements

ಯಾಕೆಂದರೆ ಆ ಸ್ಟುಡಿಯೋದಲ್ಲಿ ಒಂದೇ ಒಂದು ಸಿನಿಮಾ ಕೂಡ ಚಿತ್ರೀಕರಣಕ್ಕೆ ಬರುತ್ತಿರಲಿಲ್ಲ ಇವರು ಮಾತ್ರ ಅಲ್ಲಿ ಚಿತ್ರೀಕರಿಸಿ ಅವರಿಗೆ ಕೊನೆಯವರೆಗೂ ಸಹಾಯಹಸ್ತ ನೀಡಿದ್ದರು. ಹೀಗೆ ಸಿನಿಮಾರಂಗದಲ್ಲಿ ಅನೇಕ ಕಲಾವಿದರಿಗೆ ವೀರಸ್ವಾಮಿ ಸಹಾಯ ಮಾಡಿದ್ದಾರೆ. ಇವರು ಮೂಲತಹ ತಮಿಳು ನವರು ಆದರೂ ಕನ್ನಡದಲ್ಲಿ ಡಿಸ್ಟ್ರಿಬ್ಯೂಷನ್ ಮಾಡಿ ಸಿನಿಮಾರಂಗವನ್ನು ಪ್ರವೇಶ ಮಾಡಿದರು. ತದ ನಂತರ ಆರೋಗ್ಯ್ ಸಮಸ್ಯೆಯಿಂದ ನಿಧನರಾದರು. ಇವರು ‘ಈಶ್ವರಿ ಪ್ರೊಡಕ್ಷನ’ ಅನ್ನು ನಡೆಸುತ್ತಿದ್ದರು. ತದನಂತರ ಹಿರಿಯ ಮಗ ರವಿಚಂದ್ರನ್ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಕನ್ನಡ ಸಿನಿಮಾರಂಗದಲ್ಲಿ ಹೆಸರು ಮಾಡಿದರು. ಮುಂದೆ ಇವರೇ ಅದಕ್ಕೆ ವಾರಸುದಾರ ಆದ್ರು. ತಂದೆಯ ನಿ’ಧ’ನಾ ನಂತರ ಅಣ್ಣನ ಬದಲಾಗಿ ಈಶ್ವರಿ ಪ್ರೊಡಕ್ಷನ್ ನ ಜವಾಬ್ದಾರಿಯನ್ನು ಹೊತ್ತವರು ಬಾಲಾಜಿಯವರು. ಆಗ ಅವರಿಗೆ ಕೇವಲ 17 ವರ್ಷ. ಇಂತಹ ಚಿಕ್ಕ ವಯಸ್ಸಿನಲ್ಲಿ ಮಾಡಿದ ಸಿನಿಮಾ ಗಳನ್ನು ತಂದು ವಿತರಿಸಿ ಹೆಸರು ಮಾಡುತ್ತಿದ್ದವರು ಬಾಲಾಜಿಯವರು.

ತಂದೆ ಮರಣಾನಂತರ ಎಲ್ಲ ಜವಾಬ್ದಾರಿಯನ್ನು ಬಾಲಾಜಿ ಅವರೇ ಹೊತ್ತರು. ಇವರನ್ನು ನಟರನ್ನಾಗಿ ಮಾಡುವ ಕನಸು ರವಿಚಂದ್ರನ್ ಅವರಿಗಿತ್ತು. ಅದನ್ನು ಈಡೇರಿಸಲೆಂದೇ ಕಾಲೇಜು ಎಂಬ ಚಿತ್ರವನ್ನು ಸ್ವತಃ ರವಿಚಂದ್ರನ್ ಅವರೇ ನಿರ್ದೇಶಿಸಿದ್ದರು. ನಟಿಯಾಗಿ ವಿಜಯಲಕ್ಷ್ಮಿಯವರನ್ನು ಸಹ ಆಯ್ಕೆ ಮಾಡಿದ್ದರು. ಈ ಸಿನಿಮಾ ಶೂಟಿಂಗ್ ಸ್ಟಾರ್ಟ್ ಆಗಿ ಆರು ತಿಂಗಳು ಕಳೆಯುತ್ತಿದ್ದಂತೆ ಅದು ಬಂದಾಯ್ತು. ಕಾರಣ ನಟಿ ವಿಜಯಲಕ್ಷ್ಮಿಯ ಮೊದಲ ಸಿನಿಮಾ ಕೂಡ ಇದೇ ಆಗಿತ್ತು. ಆದರೆ ಇದನ್ನು ಅರ್ಧಕ್ಕೆ ಬಿಟ್ಟು ವಿಜಯಲಕ್ಷ್ಮಿ ಅವರು ‘ನಾಗಮಂಡಲ ‘ದತ್ತ ಮುಖ ಮಾಡಿದರು. ವಿಜಯಲಕ್ಷ್ಮಿ ಅವರ ಈ ನಡೆಯಿಂದ ಬಾಲಾಜಿ ಅವರಿಗೂ ಮತ್ತು ರವಿಚಂದ್ರನ್ ಅವರಿಗೂ ಬೇಜಾರಿನ ಜೊತೆಗೆ ಲಾಸ್ಟ್ ಕೂಡ ಆಯ್ತು. ತದನಂತರ ಬಾಲಾಜಿ ಅಭಿನಯದ ‘ಅಹಂ ಪ್ರೇಮಾಸ್ಮಿ ‘ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದರು ಅಷ್ಟೇನೂ ಸಿನಿ ಪ್ರಿಯರನ್ನು ರಂಜಿಸಲಿಲ್ಲ.

ಕಾರಣ ಚಿತ್ರದಲ್ಲಿ ಉತ್ತಮ ಸಂಗೀತದ ಕೊರತೆ ಎದ್ದು ಕಾಣುತ್ತಿತ್ತು. ನಂತರ ತುಂಟ ವಿನಯ್ ರಾಜಕುಮಾರಿ ಹೀಗೆ ಬ್ಯಾಕ್ ಟು ಬ್ಯಾಕ್ ಮೂರು ಚಿತ್ರಗಳು ತೆರೆ ಮೇಲೆ ಬಂದವು. ಆದರೆ ಯಾವುದೂ ಒಂದೇ ಒಂದು ಸಿನಿಮಾ ಕೂಡ ಹಿಟ್ ಆಗಲಿಲ್ಲ. ರವಿಚಂದ್ರನ್ ಅವರಿಗೆ ತಮ್ಮನಿಗೆ ಸಲಹೆ ನೀಡಿದರಂತೆ. ಹೌದು ಅಣ್ಣ ರವಿಚಂದ್ರನ್ ಅವರು ತಮ್ಮ ಬಾಲಾಜಿಗೆ ಈಶ್ವರಿ ಪ್ರೊಡಕ್ಷನ್ಸ್ ಜವಾಬ್ದಾರಿ ಇಲ್ಲವೇ ಅದನ್ನೇ ಮುಂದುವರಿಸು. ನಿನಗೆ ಯಾಕೋ ನಟನೆ ಆಗಿ ಬರುತ್ತಿಲ್ಲ ಎಂದರಂತೆ. ಇದೀಗ ಅಣ್ಣನ ಮಾತಿಗೆ ಬೆಲೆ ಕೊಟ್ಟ ತಮ್ಮ ಈಶ್ವರಿ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ. ಹೆಸರಿನ ಜೊತೆಗೆ ಹಣವನ್ನು ಗಳಿಸಿದ್ದಾರೆ. ನಟನೆಗೆ ಗುಡ್ ಬೈ ಅಣ್ಣನಿಗೆ ಸಾಥ್ ನೀಡುತ್ತಿದ್ದಾರೆ ಬಾಲಾಜಿ.