Advertisements

ಸುಂದರ ಹೆಂಡ್ತಿ ಇಷ್ಟ ಪಟ್ಟಳೆಂದು ಸ್ವರ್ಗವನ್ನೇ ತರಿಸಿದ ರವೀಂದ್ರನ್.!ಮಹಾಲಕ್ಷ್ಮೀ ಫುಲ್ ಖುಷ್..

Cinema

ಕಳೆದ ಹತ್ತು ದಿನಗಳ ಹಿಂದೆ ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ಆಗಿದ್ದ ರವೀಂದ್ರನ್ ಚಂದ್ರಶೇಖರ್ ಜೊತೆಗೆ ಕಿರುತೆರೆಯ ನಟಿ ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಮಹಾಲಕ್ಷ್ಮಿ ಅವರ ಮದುವೆ ವಿಚಾರ ಬಾರಿ ಸಕತ್ ಸದ್ದು ಮಾಡಿತ್ತು. ಈ ವಿಷಯವೂ ನಿಮಗೂ ಗೊತ್ತೇ ಇದೆ. ಹೌದು ಇವರಿಬ್ಬರ ಮದುವೆ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಹೆಚ್ಚು ಅವಿರೋಧ ಮತ್ತು ವಿರೋಧ ಕಮೆಂಟ್ಗಳು ಹರಿದು ಬಂದವು. ಕೆಲವರು ಜೋಡಿಗೆ ಹಾರೈಸಿ ಶುಭ ಕೋರಿದರೆ, ಇನ್ನು ಕೆಲವರು ಆ ನಿರ್ಮಾಪಕನ ಬಾಡಿ ಬಗ್ಗೆ ಮತ್ತು ವಯಸ್ಸಿನ ಅಂತರದ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡುವ ಮೂಲಕ ಕಮೆಂಟ್ ಮಾಡಿದರು. ಇದಕ್ಕೆ ನಟಿಯಾಗಲಿ ಅಥವಾ ರವೀಂದ್ರನ್ ಚಂದ್ರಶೇಖರ್ ಅವರಾಗಲಿ ತಲೆಕೆಡಿಸಿಕೊಳ್ಳಲಿಲ್ಲ..

ಹೌದು ಈ ವಿಷಯ ಹೆಚ್ಚು ವೈರಲ್ ಆಗುತ್ತಿದ್ದಂತೆ ನಂತರದ ದಿನದಲ್ಲಿ ನನ್ನ ಗಂಡನ ದೇಹದ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಬೇಡಿ, ನಾನು ಆ ದೇಹವ ನೋಡಿ ಮದುವೆಯಾಗಿಲ್ಲ ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ, ಇದಕ್ಕೂ ಮೀರಿ ಏನೇ ಮಾಡಿದರೂ ಅದಕ್ಕೆ ನಾವು ಪ್ರತಿಕ್ರಿಯಿಸುವುದಿಲ್ಲ ಎಂದು ನಟಿ ಮಹಾಲಕ್ಷ್ಮೀ ಹೇಳಿದ್ದರು. ಹಾಗೇ ನಿಮ್ಮಿಷ್ಟ ಏನಾದರೂ ಮಾಡಿಕೊಳ್ಳಿ ಹೋಗಿ ಎಂದು ಮಹಾಲಕ್ಷ್ಮಿ ಈ ಮೂಲಕವೆ ಮನವಿ ಮಾಡಿದ್ದರು ಎನ್ನಲಾಗಿತ್ತು. ನಿರ್ಮಾಪಕ ಆಗಿ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ರವೀಂದ್ರ ಚಂದ್ರಶೇಖರ್ ಹಾಗೆ ಮಹಾಲಕ್ಷ್ಮಿ ಅವರದ್ದು ಇದು ಮೊದಲ ಮದುವೆಯಲ್ಲ ಬದಲಿಗೆ ಇಬ್ಬರದ್ದು ಸಹ ಎರಡನೆಯ ಮದುವೆ. ನಟಿ ಮಹಾಲಕ್ಷ್ಮಿ ಅವರು ಈಗಾಗಲೇ ಒಬ್ಬರನ್ನು ಮದುವೆಯಾಗಿ ಒಂದು ಮಗು ಹೊಂದಿದ್ದು ಅವರಿಂದ ವಿ’ಚ್ಛೇ’ದನ ಪಡೆದು ಇವರನ್ನು ಮದುವೆಯಾಗಿದ್ದಾರೆ.

Advertisements

ಹಾಗೆ ರವೀಂದ್ರನ್ ಅವರು ಕೂಡ ಈಗಾಗಲೇ ಒಂದು ಮದುವೆಯಾಗಿ ಅವರಿಂದ ವಿ’ಚ್ಛೇ’ದನ ಪಡೆದು ಇದೀಗ ಇಷ್ಟಪಟ್ಟು ಮಹಾಲಕ್ಷ್ಮಿ ಅವರನ್ನು ವರಿಸಿರುವುದು ಎಲ್ಲರಿಗು ಗೊತ್ತಿರುವ ವಿಚಾರವೇ. ಹೌದು ಇದೀಗ ಈ ಜೋಡಿ ಹನಿಮೂನ್ ಜಾಲಿ ಮೂಡ್ ನಲ್ಲಿದೆಯಂತೆ. ಮೊನ್ನೆ ಹನಿಮೂನ್ ಗೆ ತೆರಳುವ ಮುಂಚೆ ಈ ಜೋಡಿ ಇವರ ಮನೆ ದೇವರ ಗುಡಿಗೆ ಭೇಟಿ ಕೊಟ್ಟಿತು ಅಲ್ಲಿ ಆಶೀರ್ವಾದ ಪಡೆದ ಈ ಜೋಡಿ ಒಂದು ಫೋಟೋ ಸಹ ಶೇರ್ ಮಾಡಿಕೊಂಡಿತ್ತು. ನಂತರ ಪ್ರೈವೇಟ್ ಜೆಟ್ ನಲ್ಲಿ ಹನಿಮೂನ್ ಗೆ ಹೋಗುತ್ತಿದ್ದೇವೆ ಎಂಬ ಆ ಒಂದು ಫೋಟೋವನ್ನು ಹಂಚಿಕೊಂಡಿದ್ದರು. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಚಾರವಾಗಿ ಅವರ ಪತಿಪತ್ನಿ ಹೋಗುತ್ತಿರುವ ಕೆಲ ಸ್ಥಳಗಳ ಕುರಿತು ಹೆಚ್ಚು ಅಪ್ಡೇಟ್ಸ್ ನೀಡುತ್ತಲೇ ಹೋಗುತ್ತಿದ್ದಾರೆ.

ಹೌದು ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ ಎನ್ನಬಹುದು. ಇದೀಗ ಹೋಟೆಲ್ ಒಂದರಲ್ಲಿ ಕುಳಿತಿರುವ ಫೋಟೋ ಹಂಚಿಕೊಂಡ ರವೀಂದ್ರ ಚಂದ್ರಶೇಖರ್ ಮತ್ತು ಮಹಾಲಕ್ಷ್ಮಿ ಅವರ ಫೋಟೋ ಬಾರಿ ವೈರಲ್ ಆಗುತ್ತಿದೆ. ಹೌದು ಹೆಂಡತಿ ಇಷ್ಟಪಡುತ್ತಾಳೆ ಎಂದು ಈ ನಿರ್ಮಾಪಕ ಅವರಿರುವ ಈ ಹೋಟೆಲನ್ನೇ ಒಂದು ಸ್ವರ್ಗದ ರೀತಿಯಲ್ಲಿ ಡೆಕೋರೇಷನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹೌದು ಈ ಹನಿಮೂನ್ ಗಾಗಿ ಬೇಕಾಗಿರುವ ಎಲ್ಲಾ ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ..ಹೌದು ದುಡ್ಡು ಇದ್ದರೆ ಏನು ಬೇಕಾದ್ರೂ ಮಾಡಬಹುದು ಎಂಬುದಕ್ಕೂ ಸಹ ಈ ಜೋಡಿ ಸಾಕ್ಷಿಯಾಗಿದೆ ಎನ್ನಬಹುದು. ಹೌದು ಆತನ ಸುಂದರ ಹೆಂಡತಿಗಾಗಿ ಏನು ಬೇಕಾದರೂ ಮಾಡುತ್ತಿರುವ ಈ ರವಿಂದ್ರನ್ ಚಂದ್ರಶೇಖರ್ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಯನ್ನು ಕಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.